Advertisement

Asian Champions Trophy hockey: ಭಾರತಕ್ಕೆ ಬರಲಿದೆ ಪಾಕಿಸ್ಥಾನ ತಂಡ

11:01 PM Jul 29, 2023 | Team Udayavani |

ಕರಾಚಿ: ಏಷ್ಯನ್‌ ಚಾಂಪಿಯನ್‌ಶಿಪ್‌ ಹಾಕಿ ಪಂದ್ಯಾವಳಿಗಾಗಿ ಪಾಕಿಸ್ಥಾನ ತಂಡ ಭಾರತಕ್ಕೆ ಆಗಮಿಸಲಿದೆ. ತಂಡಕ್ಕೆ ಹಸಿರು ನಿಶಾನೆ ಲಭಿಸಿದೆ ಎಂಬುದಾಗಿ ಪಾಕಿಸ್ಥಾನ ಹಾಕಿ ಫೆಡರೇಶನ್‌ ಕಾರ್ಯದರ್ಶಿ ಹೈದರ್‌ ಹುಸೇನ್‌ ದೃಢಪಡಿಸಿದ್ದಾರೆ. ತಂಡಕ್ಕೆ ಕೇಂದ್ರ ಗೃಹ ಇಲಾಖೆ ನಿರಾಕ್ಷೇಪಣ ಪತ್ರ ನೀಡಿದೆ ಎಂಬುದಾಗಿ ಅವರು ತಿಳಿಸಿದರು.

Advertisement

ಪಂದ್ಯಾವಳಿ ಆ. 3ರಂದು ಚೆನ್ನೈಯಲ್ಲಿ ಆರಂಭಗೊಳ್ಳಲಿದೆ.”ಪಾಕಿಸ್ಥಾನ ಹಾಕಿ ತಂಡ ಮಂಗಳವಾರ ವಾಘಾ ಗಡಿ ಮೂಲಕ ಅಮೃತಸರಕ್ಕೆ ತೆರಳಲಿದೆ. ಅಲ್ಲಿಂದ ವಿಮಾನದದಲ್ಲಿ ಚೆನ್ನೈ ತಲುಪಲಿದೆ. ಆದರೆ ತಂಡದ ಮೂವರು ಅಧಿಕಾರಿಗಳಿಗೆ ಇನ್ನೂ ವೀಸಾ ಸಿಕ್ಕಿಲ್ಲ. ನಾವು ಕಾಯುತ್ತಿದ್ದೇವೆ. ಇದು ಸೋಮವಾರ ಸಿಗಬಹುದೆಂಬ ನಿರೀಕ್ಷೆ ನಮ್ಮದು’ ಎಂದು ಹುಸೇನ್‌ ಹೇಳಿದರು.

ಪಾಕಿಸ್ಥಾನ ತನ್ನ ಮೊದಲ ಪಂದ್ಯವನ್ನು ಆ. 3ರಂದು ಮಲೇಷ್ಯಾ ವಿರುದ್ಧ ಆಡಲಿದೆ. ಬಳಿಕ ಕೊರಿಯಾ (ಆ. 4), ಜಪಾನ್‌ (ಆ. 6), ಚೀನ (ಆ. 7) ವಿರುದ್ಧ, ಕೊನೆಯಲ್ಲಿ ಭಾರತದ ವಿರುದ್ಧ (ಆ. 9) ಸೆಣಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next