ದುಬಾೖ: ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪೂಜಾ ರಾಣಿ 75 ಕೆ.ಜಿ. ವಿಭಾಗದಲ್ಲಿ ಬಂಗಾರದ ಪದಕ ಜಯಿಸಿದ್ದಾರೆ. ಆದರೆ ಆರನೇ ಚಿನ್ನದ ಭರವಸೆ ಮೂಡಿಸಿದ್ದ ಮೇರಿ ಕೋಮ್ ಮತ್ತು ಲಾಲ್‌ಬೌತ್ಸಾಹಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು.
ರವಿವಾರ ನಡೆದ ಫೈನಲ್ ಹಣಾಹಣಿಯಲ್ಲಿ ಭಾರತ ಎರಡು ರಜತ ಗೆದ್ದ ಬಳಿಕ ಪೂಜಾ ರಾಣಿ ಬಂಗಾರದ ಖಾತೆ ತೆರೆದರು. ಅವರು ಮವುÉದಾ ಮೊವ್ಲೊನೋವಾ ವಿರುದ್ಧ ಜಯ ಸಾಧಿಸಿ ಬಂಗಾರಕ್ಕೆ ಕೊರಳೊಡ್ಡಿದರು.
51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಮೇರಿ ಕೋಮ್ ದಿಟ್ಟ ಹೋರಾಟ ನೀಡಿದ ಅವರನ್ನು ಕಜಾಕ್‌ಸ್ಥಾನದ ನಾಜಿಮ್ ಕೈಝಬೆ 3-2 ಅಂತರದಿಂದ ಮಣಿಸಿದರು.
ಇದು ಅನುಭವಿ ಮತ್ತು ಬಿಸಿರಕ್ತದ ಸ್ಪರ್ಧಿಯ ನಡುವಿನ ಹೋರಾಟ ವಾಗಿತ್ತು. ತನಗಿಂತ 11 ವರ್ಷ ಕಿರಿಯಳ ವಿರುದ್ಧ 6 ಬಾರಿಯ ವಿಶ್ವ ಚಾಂಪಿಯನ್ ಮೇರಿ ಸೋಲು ಕಾಣಬೇಕಾಯಿತು.
ಇದು ಏಶ್ಯನ್ ಚಾಂಪಿಯನ್‌ಶಿಪ್‌ನಲ್ಲಿ ಮೇರಿ ಕೋಮ್‌ಗೆ ಒಲಿದ 7ನೇ ಪದಕ. ಇದರಲ್ಲಿ 5 ಚಿನ್ನ ಸೇರಿದೆ.
ಅನಂತರದ 64 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಲಾಲ್‌ಬೌತ್ಸಾಹಿ ಕೂಡ ಪರಾಭವಗೊಂಡರು. ಇಲ್ಲಿ ಮಿಲಾನಾ ಸಫೂÅನೋವಾ ಸ್ವರ್ಣ ಗೆದ್ದರು. +81 ಕೆ.ಜಿ. ವಿಭಾಗದ ಕೊನೆಯ ಸ್ಪರ್ಧೆಯಲ್ಲಿ ಅನುಪಮಾ ಸ್ಪರ್ಧಿಸಲಿದ್ದಾರೆ.