ದುಬಾೖ: ಆರು ಬಾರಿಯ ವಿಶ್ವ ಚಾಂಪಿಯನ್ ಮೇರಿ ಕೋಮ್ ಏಶ್ಯನ್ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲೂ ಆರನೇ ಸ್ವರ್ಣ ಪದಕ ಗೆಲ್ಲುವತ್ತ ಮುಂದಡಿ ಇರಿಸಿದ್ದಾರೆ. ರವಿವಾರದ 51 ಕೆ.ಜಿ. ವಿಭಾಗದ ಫೈನಲ್‌ನಲ್ಲಿ ಅವರು ಕಜಾಕ್‌ಸ್ಥಾನದ ನಾಜಿಮ್ ಕೈಝಬೆ ವಿರುದ್ಧ ಹೋರಾಡಲಿದ್ದಾರೆ.
ಕೈಝಬೆ ಎರಡು ಬಾರಿಯ ವಿಶ್ವ ಚಾಂಪಿಯನ್ ಆಗಿದ್ದು, 38 ವರ್ಷದ ಮೇರಿ ಕೋಮ್‌ಗೆ ಕಠಿನ ಸವಾಲು ಎದುರಾಗುವ ಸಾಧ್ಯತೆ ಇದೆ.
ಒಲಿಂಒಕ್ಸ್ ಅರ್ಹತೆ ಪಡೆದಿರುವ ಮತ್ತೋರ್ವ ವನಿತಾ ಬಾಕ್ಸರ್ ಪೂಜಾ ರಾಣಿ ಕೂಡ ಫೈನಲ್ ಪ್ರವೇಶಿಸಿದ್ದಾರೆ. ಇವರ ಎದುರಾಳಿ ಉಜ್ಬೆಕಿಸ್ಥಾನದ ಇನ್‌ಫಾರ್ಮ್ ಬಾಕ್ಸರ್ ಮವುÉದಾ ಮೊವ್ಲೊನೋವಾ. ಪೂಜಾಗೆ ಸೆಮಿಫೈನಲ್‌ನಲ್ಲಿ ವಾಕ್‌ಓವರ್ ಲಭಿಸಿತ್ತು. ಅನುಪಮಾ (+81 ಕೆ.ಜಿ.), ಲಾಲ್‌ಬೌತ್ಸಾಹಿ (64 ಕೆ.ಜಿ.) ಕೂಡ ಚಿನ್ನದ ಸ್ಪರ್ಧೆಯ ರೇಸ್‌ನಲ್ಲಿದ್ದಾರೆ.
ಇದನ್ನೂ ಓದಿ :ಕೊಲೆ ಆರೋಪ : ಕುಸ್ತಿಪಟು ಸುಶೀಲ್ ಕುಮಾರ್ ಕಸ್ಟಡಿ ವಿಸ್ತರಣೆ
ಪುರುಷರ ಫೈನಲ್
ಸೋಮವಾರ ಪುರುಷರ ಫೈನಲ್ ನಡೆಯಲಿದ್ದು, ಹಾಲಿ ಚಾಂಪಿಯನ್ ಅಮಿತ್ ಪಂಘಲ್ (52 ಕೆ.ಜಿ.), ಶಿವ ಥಾಪ (64 ಕೆ.ಜಿ.) ಮತ್ತು ಸಂಜೀತ್ (91 ಕೆ.ಜಿ.) ಮೇಲೆ ಭಾರೀ ನಿರೀಕ್ಷೆ ಇರಿಸಲಾಗಿದೆ.
ಅಮಿತ್ ಎದುರಾಳಿ, ರಿಯೋ ಒಲಿಂಪಿಕ್ಸ್ ಮತ್ತು ವಿಶ್ವ ಚಾಂಪಿಯನ್ ಖ್ಯಾತಿಯ ಉಜ್ಬೆಕಿಸ್ಥಾನ್ ಬಾಕ್ಸರ್ ಜೊçರೋವ್ ಶಖೋಬಿದಿನ್. ಶಿವ ಥಾಪ ಮಂಗೋಲಿಯಾದ ಬಾತರ್‌ಸುಖ್ ಚಿಂಗೋರಿಂಗ್ ವಿರುದ್ಧ ಸೆಣಸುವರು.