Advertisement
ಭಾರತ ತಂಡದಲ್ಲಿ 10 ಮಂದಿ ವನಿತಾ ಸ್ಪರ್ಧಿಗಳೂ ಇದ್ದಾರೆ. ಮೇ 21ರಿಂದ ಈ ಪಂದ್ಯಾವಳಿ ಆರಂಭವಾಗಲಿದೆ.“ದುಬಾೖ ಪ್ರಯಾಣಕ್ಕೆ ಭಾರತದ ಬಾಕ್ಸಿಂಗ್ ತಂಡದ ಸದಸ್ಯರಿಗೆ ಈ ವರೆಗೆ ವೀಸಾ ಲಭಿಸಿಲ್ಲ. ಈ ನಿಟ್ಟಿನಲ್ಲಿ ನಾವು ಗರಿಷ್ಠ ಪ್ರಯತ್ನ ಮಾಡುತ್ತಿದ್ದೇವೆ’ ಎಂಬುದಾಗಿ ಬಿಎಫ್ಐ ಕಾರ್ಯದರ್ಶಿ ಹೇಮಂತ್ ಕಲಿಟಾ ಹೇಳಿದ್ದಾರೆ.
ಮೂಲ ವೇಳಾಪಟ್ಟಿ ಪ್ರಕಾರ ಈ ಪಂದ್ಯಾವಳಿ ಹೊಸದಿಲ್ಲಿಯಲ್ಲಿ ನಡೆಯಬೇಕಿತ್ತು. ಆದರೆ ಭಾರತದಲ್ಲಿ ಕೊರೊನಾ ಸೋಂಕು ಹೆಚ್ಚಿದ ಕಾರಣ ಇದು ದುಬಾೖಗೆ ಸ್ಥಳಾಂತರಗೊಂಡಿತು. ಈ ಪಂದ್ಯಾವಳಿಗಾಗಿ ಭಾರತದ ಪುರುಷರ ತಂಡ ಪಟಿಯಾಲಾದ ನ್ಯಾಶನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಪೋರ್ಟ್ಸ್ನಲ್ಲಿ ಹಾಗೂ ವನಿತಾ ತಂಡ ಪುಣೆಯ ಆರ್ಮಿ ನ್ಪೋರ್ಟ್ಸ್ ಇನ್‌ಸ್ಟಿಟ್ಯೂಟ್‌ನಲ್ಲಿ ಅಭ್ಯಾಸ ಆರಂಭಿಸಿತ್ತು. 4 ವನಿತೆಯರ ಸಹಿತ ಭಾರತದ ಒಟ್ಟು 9 ಬಾಕ್ಸರ್ ಈಗಾಗಲೇ ಟೋಕಿಯೊ ಒಲಿಂಪಿಕ್ಸ್ ಅರ್ಹತೆ ಪಡೆದಿದ್ದಾರೆ.