Advertisement

ಏಶ್ಯನ್‌ ಏಜ್‌ ಗ್ರೂಪ್‌ ಈಜು: ದ್ವಿತೀಯ ದಿನ ಭಾರತಕ್ಕೆ 10 ಪದಕ

10:41 PM Sep 25, 2019 | mahesh |

ಬೆಂಗಳೂರು: ಏಶ್ಯನ್‌ ಏಜ್‌ ಗ್ರೂಪ್‌ ಈಜು ಕೂಟದಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ. 2ನೇ ದಿನ ಭಾರತ 2 ಚಿನ್ನದ ಸೇರಿದಂತೆ ಒಟ್ಟು 10 ಪದಕ ಜಯಿಸಿದೆ. ಅಂಡರ್‌-18 ವಿಭಾಗದ 50 ಮೀ. ಪುರುಷರ ಪ್ರೀಸ್ಟೈಲ್‌ ಈಜು ಕೂಟದಲ್ಲಿ ವಿಕ್ರಮ್‌ ವೀರ್‌ಧವಳ್‌ ಖಾಡೆ 22.59 ಸೆಕೆಂಡ್ಸ್‌ ನಲ್ಲಿ ಗುರಿ ತಲುಪಿ ಚಿನ್ನದ ಪದಕ ಗೆದ್ದರೆ, 1,500 ಮೀ.ಪ್ರೀಸ್ಟೈಲ್‌ನಲ್ಲಿ ಕುಶಾಗ್ರ ರಾವತ್‌ 15 ನಿಮಿಷ, 41.54 ಸೆಕೆಂಡ್ಸ್‌ ನಲ್ಲಿ ಗುರಿ ತಲುಪಿ ಸ್ವರ್ಣಕ್ಕೆ ಮುತ್ತಿಟ್ಟರು. ದ್ವಿತೀಯ ದಿನದ ಅಂತ್ಯಕ್ಕೆ ಜಪಾನ್‌, ಥಾಯ್ಲೆಂಡ್‌, ಚೀನದ ಸ್ಪರ್ಧಿಗಳು ಪದಕಪಟ್ಟಿಯಲ್ಲಿ ಅಗ್ರ 3 ಸ್ಥಾನ ಅಲಂಕರಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next