ನೀವು ಮದುವೆಗೆ ಸಿದ್ಧರಾಗುತ್ತಿದ್ದೀರಾ? ಮದುವೆ ದಿನ ಯಾವ ಡ್ರೆಸ್, ಯಾವ ವಿನ್ಯಾಸದ ಆಭರಣ ತೊಡಬೇಕೆಂದು ಯೋಚಿಸುತ್ತಿದ್ದೀರಾ? ಹಾಗಾದರೆ, ಏಷ್ಯಾ ವೆಡ್ಡಿಂಗ್ ಫೇರ್‌ಗೆ ಬನ್ನಿ. ದಕ್ಷಿಣ ಭಾರತದ ಅತ್ಯಂತ ದೊಡ್ಡ ವಿವಾಹ ಪ್ರದರ್ಶನ ಇದಾಗಿದೆ. ಬ್ರೈಡಲ್‌ಆಭರಣ, ಕೊಟ್ಯೂರ್, ಎಥಿ°ಕ್, ಬ್ರೈಡಲ್‌ಟ್ರೋಸ್ಯೂ, ಸಾಂಪ್ರದಾಯಿಕಆಭರಣ, ಅಮೂಲ್ಯ ಹರಳು ಮತ್ತು ಮುತ್ತಿನ ಆಭರಣ, ವಿವಾಹದ ಅಕ್ಸೆಸರಿಗಳು, ವಿವಾಹ ಆಯೋಜಕರು, ಬ್ರೈಡಲ್ ಮೇಕಪ್, ವಿವಾಹದ ಉಡುಗೊರೆ… ಹೀಗೆ, ಮದುವೆಗೆ ಬೇಕಾದ ಸಕಲ ವಸ್ತುಗಳನ್ನೂ ಇಲ್ಲಿ ಪಡೆಯಬಹುದು. ದೇಶಾದ್ಯಂತ ಮುಂಚೂಣಿಯಲ್ಲಿರುವ ಆಭರಣ ಬ್ರ್ಯಾಂಡ್‌ಗಳಷ್ಟೇ ಅಲ್ಲ, ಅಂತಾರಾಷ್ಟ್ರೀಯ ಬ್ರ್ಯಾಂಡ್‌ಗಳೂ ಇರಲಿವೆ.
ಯಾವಾಗ?: ಅ.12-13, ಬೆಳಗ್ಗೆ 10.30- 8
ಎಲ್ಲಿ?: ಜೆ.ಡಬ್ಲ್ಯೂ. ಮಾರಿಯಟ್ ಹೋಟೆಲ್, ಯುಬಿ ಸಿಟಿ