Advertisement

Asia Taekwondo; ಏಷ್ಯಾ ಟೇಕ್ವಾಂಡೊ ಕೂಟ ಆರಂಭ

12:20 AM Aug 20, 2024 | Team Udayavani |

ಬೆಂಗಳೂರು: ಹತ್ತನೇ ಐಟಿಎಫ್ ಏಷ್ಯಾ ಟೇಕ್ವಾಂಡೊ ಕೂಟ ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾಗಿದ್ದು, ಆ. 25ರ ವರೆಗೆ ನಡೆಯಲಿದೆ. ಟೇಕ್ವಾಂಡೊ ಏಷ್ಯಾ ಚಾಂಪಿಯನ್‌ಶಿಪ್‌ ಕರ್ನಾಟಕದಲ್ಲಿ ನಡೆಯುತ್ತಿರುವುದು ಇದೇ ಮೊದಲು.ಕೂಟದಲ್ಲಿ 28 ದೇಶಗಳ 750 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. 8 ವರ್ಷದಿಂದ 70 ವರ್ಷ ವಯೋಮಿತಿ ವರೆಗಿನ ಸ್ಪರ್ಧಿಗಳೂ ಇದ್ದಾರೆ.

Advertisement

ದಕ್ಷಿಣ ಕೊರಿಯಾ, ಕಾಂಬೋಡಿಯ, ಇಂಡೋನೇಷ್ಯಾ, ಇರಾನ್‌, ಜಪಾನ್‌, ಕಝಕಸ್ಥಾನ, ಕಿರ್ಗಿಸ್ಥಾನ, ಮಲೇಷ್ಯಾ, ಮಂಗೋಲಿಯ, ನೇಪಾಲ, ಫಿಲಿಪ್ಪೀನ್ಸ್‌, ರಷ್ಯಾ, ಬಾಂಗ್ಲಾದೇಶ, ತಜಿಕಿಸ್ಥಾನ, ಯುಎಇ, ಉಜ್ಬೆಕಿಸ್ಥಾನ,ತುರ್ಕ್‌ಮೆನಿಸ್ಥಾನ, ಇಂಗ್ಲೆಂಡ್‌, ಅಮೆರಿಕ, ಕೆನಡಾ, ಅಫ್ಘಾನಿಸ್ಥಾನದಿಂದ ಸ್ಪರ್ಧಿಗಳು ಆಗಮಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next