Advertisement
ಲೀಗ್ ಹಂತದಲ್ಲಿ ಮಾಡು-ಮಡಿ ಸ್ಥಿತಿಯಲ್ಲಿದ್ದ ಬಾಂಗ್ಲಾದೇಶವೀಗ ಸೂಪರ್ -4 ಹಂತದಲ್ಲೂ ಇದೇ ಸಂಕಟ ಎದುರಿಸುತ್ತಿದೆ. ಲಾಹೋರ್‌ನಲ್ಲಿ ಪಾಕಿಸ್ಥಾನ ಎದುರಿನ ಮೊದಲ ಪಂದ್ಯದಲ್ಲಿ 7 ವಿಕೆಟ್ ಸೋಲನುಭವಿಸಿದ ಕಾರಣ ಶ್ರೀಲಂಕಾ ವಿರುದ್ಧ ಗೆಲ್ಲಲೇಬೇಕಾದ ಒತ್ತಡ ಶಕಿಬ್ ಪಡೆಯ ಮೇಲಿದೆ. ಇನ್ನೊಂದು ಸೋಲನುಭವಿಸಿದರೆ ಬಾಂಗ್ಲಾ ಬಹುತೇಕ ಹೊರಬೀಳಲಿದೆ.
Related Articles
ಶ್ರೀಲಂಕಾ ಅಪಾಯಕಾರಿ ಸ್ಪಿನ್ನರ್‌ಗಳನ್ನು ಹೊಂದಿರುವ ತಂಡ. ಪತಿರಣ ಮತ್ತು ತೀಕ್ಷಣ 6 ವಿಕೆಟ್ ಹಂಚಿಕೊಂಡು ಲೀಗ್ ಮುಖಾಮುಖಿಯಲ್ಲಿ ಬಾಂಗ್ಲಾವನ್ನು ಕೆಡವಿದ್ದರು. ಇದೀಗ ಪೇಸರ್ ಕಸುನ್ ರಜಿತ ಆಗಮನವಾಗಿದೆ. ಅಫ್ಘಾನ್ ವಿರುದ್ಧ ರಜಿತ 4 ವಿಕೆಟ್ ಹಾರಿಸಿ ಮಿಂಚಿದ್ದರು. ಆದರೂ ಲಂಕಾ ಬೌಲಿಂಗ್ ಅಫ್ಘಾನಿಸ್ಥಾನ ವಿರುದ್ಧ ಸಂಪೂರ್ಣ ಲಯ ಕಳೆದುಕೊಂಡಿದ್ದನ್ನು ಮರೆಯುವಂತಿಲ್ಲ. ಅಫ್ಘಾನ್ ಪಡೆ ಕೇವಲ 37.4 ಓವರ್‌ಗಳಲ್ಲಿ 289 ರನ್ ಪೇರಿಸಿತ್ತು. ಬಾಂಗ್ಲಾ ರೇಸ್‌ನಲ್ಲಿ ಉಳಿಯಬೇಕಾದರೆ ಇಂಥದೇ ಬ್ಯಾಟಿಂಗ್ ಮ್ಯಾಜಿಕ್ ಮಾಡಬೇಕಿದೆ.
Advertisement