Advertisement

ಏಶ್ಯ ಕಪ್‌ ಹಾಕಿ: ಭಾರತಕ್ಕೆ ಮನ್‌ಪ್ರೀತ್‌ ನಾಯಕ

07:55 AM Sep 17, 2017 | |

ಹೊಸದಿಲ್ಲಿ: ಏಶ್ಯ ಕಪ್‌ ಹಾಕಿ ಪಂದ್ಯಾವಳಿಗೆ 18 ಮಂದಿ ಸದಸ್ಯರ ಭಾರತ ತಂಡವನ್ನು ಪ್ರಕಟಿಸಲಾಗಿದೆ.ಭಾರತ ತಂಡವನ್ನು ಮಿಡ್‌ಫಿàಲ್ಡರ್‌ ಮನ್‌ಪ್ರೀತ್‌ ಸಿಂಗ್‌ ಮುನ್ನಡೆಸಲಿದ್ದಾರೆ. ಕನ್ನಡಿಗ ಎಸ್‌.ವಿ. ಸುನಿಲ್‌ಗೆ ಉಪನಾಯಕತ್ವ ನೀಡಲಾಗಿದೆ. ಉಳಿದಂತೆ ರಾಜ್ಯದಿಂದ ಡಿಫೆಂಡರ್‌ ಎಸ್‌.ಕೆ. ಉತ್ತಪ್ಪ ಅವರಿಗೂ ಸ್ಥಾನ ಲಭಿಸಿದೆ. ಮಾಜಿ ನಾಯಕ ಸರ್ದಾರ್‌ ಸಿಂಗ್‌ ಮರಳಿ ತಂಡವನ್ನು ಕೂಡಿಕೊಂಡಿದ್ದಾರೆ. ಆದರೆ ರಾಜ್ಯದ ಅನುಭವಿ ಆಟಗಾರ ರಘುನಾಥ್‌ ಹಾಗೂ ನಿಕಿನ್‌ ತಿಮ್ಮಯ್ಯ ಸ್ಥಾನ ಪಡೆಯುವಲ್ಲಿ ವಿಫ‌ಲರಾಗಿದ್ದಾರೆ. ಅ. 11ರಿಂದ 22ರ ವರೆಗೆ ಢಾಕಾದಲ್ಲಿ ಏಶ್ಯ ಕಪ್‌ ಕೂಟ ನಡೆಯಲಿದೆ.

Advertisement

“ಎ’ ಗುಂಪಿನಲ್ಲಿ ಭಾರತ
ಭಾರತ ಆತಿಥೇಯ ಬಾಂಗ್ಲಾದೇಶ, ಜಪಾನ್‌ ಹಾಗೂ ಪಾಕಿಸ್ಥಾನವನ್ನೊಳಗೊಂಡ “ಎ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಅ. 11ರಂದು ಭಾರತ ಮೊದಲ ಸೆಣಸಾಟದಲ್ಲಿ ಜಪಾನ್‌ ತಂಡವನ್ನು ಎದುರಿಸಲಿದೆ. ಲೀಗ್‌ ಹಂತದ ಕೊನೆಯ ಪಂದ್ಯದಲ್ಲಿ ಅ.15ರಂದು  ಭಾರತ  ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನ ವಿರುದ್ಧ ಕಾದಾಡಲಿದೆ. ಸದ್ಯ ಭಾರತ ತಂಡದ ಆಟಗಾರರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದು, ಅ. 5ರ ವರೆಗೆ ತರಬೇತಿ ಮುಂದುವರಿಯಲಿದೆ.

ಭಾರತ ತಂಡ
ಗೋಲ್‌ಕೀಪರ್‌-ಆಕಾಶ್‌ ಚಿಕ್ಟೆ, ಸೂರಜ್‌ ಕರ್ಕೇರ; ಡಿಫೆಂಡರ್-ದೀಪ್ಸನ್‌ ತಿರ್ಕಿ, ಕೊಥಾಜಿತ್‌ ಸಿಂಗ್‌, ಸುರೇಂದರ್‌ ಕುಮಾರ್‌, ಹರ್ಮನ್‌ಪ್ರೀತ್‌ ಸಿಂಗ್‌, ವರುಣ್‌ ಕುಮಾರ್‌; ಮಿಡ್‌ ಫೀಲ್ಡರ್-ಎಸ್‌.ಕೆ. ಉತ್ತಪ್ಪ, ಸರ್ದಾರ್‌ ಸಿಂಗ್‌, ಮನ್‌ಪ್ರೀತ್‌ ಸಿಂಗ್‌ (ನಾಯಕ), ಚಿಂಗ್ಲೆಸನ ಸಿಂಗ್‌, ಸುಮಿತ್‌; ಫಾರ್ವರ್ಡ್ಸ್‌-ಎಸ್‌.ವಿ. ಸುನಿಲ್‌, ಆಕಾಶ್‌ದೀಪ್‌ ಸಿಂಗ್‌, ರಮಣ್‌ದೀಪ್‌ ಸಿಂಗ್‌, ಲಲಿತ್‌ ಕುಮಾರ್‌ ಉಪಧ್ಯಾಯ, ಗುರ್ಜಂತ್‌ ಸಿಂಗ್‌, ಸತಿºàರ್‌ ಸಿಂಗ್‌.

Advertisement

Udayavani is now on Telegram. Click here to join our channel and stay updated with the latest news.

Next