ಢಾಕಾ: ಮುಂಬರುವ ಏಷ್ಯಾ ಕಪ್ ಕ್ರಿಕೆಟ್ ಕೂಟಕ್ಕಾಗಿ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) 17 ಸದಸ್ಯರ ಬಾಂಗ್ಲಾ ತಂಡವನ್ನು ಪ್ರಕಟಿಸಿದೆ. ಆರಂಭಿಕ ಆಟಗಾರ ತನ್ಜಿದ್ ಹಸನ್ ಅವರನ್ನು ಮೊದಲ ಬಾರಿ ರಾಷ್ಟ್ರೀಯ ತಂಡದಲ್ಲಿ ಸೇರಿಸಿಕೊಳ್ಳಲಾಗಿದೆ.
ತನ್ಜಿದ್ ಜತೆ ಮೊಹಮ್ಮದ್ ನೈಮ್ ಅವರನ್ನು ಕೂಡ ತಂಡಕ್ಕೆ ಪರಿಗಣಿಸಲಾ ಗಿದೆ. ಬೆನ್ನು ನೋವಿನಿಂದಾಗಿ ಏಷ್ಯಾ ಕಪ್‌ನಿಂದ ಹೊರಬಿದ್ದ ತಮಿಮ್ ಇಕ್ಬಾಲ್ ಅವರ ಜಾಗಕ್ಕೆ ತನ್ಜಿದ್ ಅವರನ್ನು ಆಯ್ಕೆ ಮಾಡಲಾಗಿದೆ.
ತನ್ಜಿದ್ ಕಳೆದ ಕೆಲವು ವರ್ಷಗಳಲ್ಲಿ ಅಮೋಘ ಆಟದ ಪ್ರದರ್ಶನ ನೀಡುತ್ತ ಬಂದಿದ್ದಾರೆ. ಎಮರ್ಜಿಂಗ್ ಏಷ್ಯಾ ಕಪ್‌ನಲ್ಲಿ ಅವರು ಅದ್ಭುತವಾಗಿ ಆಡಿದ್ದಾರೆ ಎಂದು ಬಿಸಿಬಿ ಮುಖ್ಯ ಆಯ್ಕೆಗಾರ ಮಿನ್ಹಾಜುಲ್ ಅಬೆದಿನ್ ಹೇಳಿದ್ದಾರೆ. ಅವರೊಬ್ಬ ಆಕ್ರಮಣಕಾರಿ ಆಟಗಾರ ಮತ್ತು ಯಾವುದೇ ಹಂತದಲ್ಲೂ ರನ್ ಗಳಿಸಲು ಸಮರ್ಥರು. ಅವರ ಆಟದ ಬಗ್ಗೆ ನಮಗೆ ನಂಬಿಕೆಯಿದೆ ಎಂದು ತಿಳಿಸಿದ ಅಬೆದಿನ್ ಫಿಟ್‌ನೆಸ್ ಶಿಬಿರಕ್ಕೆ ಕರೆದಿದ್ದರೂ ಮಹಮುದುಲ್ಲ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿಲ್ಲ ಎಂದರು. ಅವರನ್ನು ಕಳೆದ ಮಾರ್ಚ್‌ನಲ್ಲಿ ನನಡೆದ ಇಂಗ್ಲೆಂಡ್ ವಿರುದ್ಧದ ಸರಣಿಗೂ ಕೈಬಿಡಲಾಗಿತ್ತು.
ಮಹಮುದುಲ್ಲ ಅವರ ಬಗ್ಗೆ ನಾವು ಸುದೀರ್ಘವಾಗಿ ಚರ್ಚೆ ನಡೆಸಿದ್ದೆವು. ಭವಿಷ್ಯದ ಯೋಜನೆಯ ದೃಷ್ಟಿಯಿಂದ ನಾವು ಅವರನ್ನು ಕೈಬಿಡಲು ನಿರ್ಧರಿಸಿ ದೆವು ಎಂದು ಅಬೆದಿನ್ ತಿಳಿಸಿದರು.
ಏಷ್ಯಾ ಕಪ್ ಕ್ರಿಕೆಟ್ ಆ. 30ರಿಂದ ಆರಂಭವಾಗಲಿದೆ. “ಬಿ’ ಬಣದಲ್ಲಿರುವ ಬಾಂಗ್ಲಾ ಆ. 31ರಂದು ಮೊದಲ ಪಂದ್ಯ
ವನ್ನು ಶ್ರೀಲಂಕಾ ವಿರುದ್ಧ ಆಡಲಿದೆ.
ಬಾಂಗ್ಲಾದೇಶ ತಂಡ
ಶಕಿಬ್ ಅಲ್ ಹಸನ್ (ನಾಯಕ), ಲಿಟನ್ ದಾಸ್, ತನ್ಜಿದ್ ತಮಿಮ್, ನಜ್ಮುಲ್ ಹೊಸೈನ್ ಶಂಟೊ, ತೌಹಿದ್ ಹೃದಯ್, ಮುಶ್ಫಿಕರ್ ರಹೀಮ್, ಮೆಹಿದಿ ಹಸನ್ ಮಿರಾಜ್, ಟಸ್ಕಿನ್ ಅಹ್ಮದ್, ಮುಸ್ತಾಫಿಜುರ್ ರೆಹಮಾನ್, ಹಸನ್ ಮಹಮುದ್, ಶೇಕ್ ಮಹೆದಿ, ನಸುಮ್ ಅಹ್ಮದ್, ಶಮಿಮ್ ಹೊಸೈನ್, ಅಫಿಫ್ ಹೊಸೈನ್, ಶೋರಿಫುಲ್ ಇಸ್ಲಾಮ್, ಇಬಡಾಟ್ ಹೊಸೈನ್, ನೈಮ್ ಶೇಖ್, ತೈಜುಲ್ ಇಸ್ಲಾಮ್, ಸೈಫ್ ಹಸನ್, ತನ್ಜಿದ್ ಹಸನ್ ಸಕಿಬ್.