Advertisement

ಚೊಚ್ಚಲ ಖೋ ಖೋ ವಿಶ್ವಕಪ್‌ ಆರಂಭ

10:56 PM Jan 13, 2025 | Team Udayavani |

ಹೊಸದಿಲ್ಲಿ: ಭಾರತದ ಆತಿಥ್ಯದ ಖೋ ಖೋ ವಿಶ್ವಕಪ್‌ ಮೊದಲ ಆವೃತ್ತಿಗೆ ಹೊಸದಿಲ್ಲಿಯ ಇಂದಿರಾಗಾಂಧಿ ಒಳಾಂಗಣ ಕ್ರೀಡಾಂಗ ಣದಲ್ಲಿ ಸೋಮವಾರ ಅದ್ಧೂರಿ ಚಾಲನೆ ಲಭಿಸಿತು. ಬ್ಯಾಂಡ್‌ ವಾದನ, ಬಲೂನ್‌ ಹಾರಾಟ, ಟ್ರೋಫಿ ಅನಾವರಣ, ಸಂಗೀತ, ವಿದ್ಯುತ್‌ ದೀಪಗಳ ಮೆರಗು ಮೈದಾನದಲ್ಲಿ ನೆರೆದ ಕ್ರೀಡಾಭಿಮಾನಿ ಗಳನ್ನು ರಂಜಿಸಿತು.ಉದ್ಘಾಟನ ಪಂದ್ಯದಲ್ಲಿ ಭಾರತದ ಪುರುಷರ ತಂಡ 42-37 ಅಂತರದಿಂದ ನೇಪಾಲವನ್ನು ಪರಾಭವಗೊಳಿಸಿತು.

Advertisement

ಇದು ಮೊದಲ ವಿಶ್ವಕಪ್‌ ಆಗಿರುವುದರಿಂದ ಹಾಗೂ ಭಾರತದಲ್ಲಿ ನಡೆಯುತ್ತಿರುವುದರಿಂದ ಉದ್ಘಾಟನೆಯ ಮುನ್ನಾದಿನವೇ ವಿವಿಧ ಕಾರ್ಯಕ್ರಮಗಳು ನಡೆದವು. ಈ ವೇಳೆ ಆಕರ್ಷಕ ಟ್ರೋಫಿ ಪ್ರದರ್ಶನ, ಡೊಳ್ಳು ಕುಣಿತ, ವಿವಿಧ ದೇಶಗಳಿಂದ ಬಂದ ಕ್ರೀಡಾಪಟುಗಳ ಸಮಾಗಮ ನಡೆಯಿತು. ಈ ವೇಳೆ ಭಾರತೀಯ ಖೋ ಖೋ ಒಕ್ಕೂಟದ ಅಧ್ಯಕ್ಷ ಸುಧಾಂಶು ಮಿತ್ತಲ್‌, ಒಕ್ಕೂಟದ ಕಾರ್ಯದರ್ಶಿ ರೋಹಿತ್‌ ಅಲ್ದಾನಿಯಾ ಮತ್ತಿತರರು ಉಪಸ್ಥಿತರಿದ್ದರು.

23 ದೇಶಗಳ ಸ್ಪರ್ಧೆ
ಜ. 13ರಿಂದ ಆರಂಭಗೊಂಡು ಜ. 19ರ ವರೆಗೆ ನಡೆಯುವ ಈ ಖೋ ಖೋ ವಿಶ್ವಕಪ್‌ನಲ್ಲಿ ಒಟ್ಟು 23 ದೇಶಗಳಿಂದ 20 ಪುರುಷರ, 19 ಮಹಿಳಾ ತಂಡಗಳು ಪಾಲ್ಗೊಳ್ಳುತ್ತಿವೆ.

9+9 ನಿಮಿಷಗಳ ಪಂದ್ಯ
ಪ್ರತೀ ತಂಡಗಳಿಂದ ತಲಾ 9 ಆಟಗಾರರು ಆಡಳಿಯುತ್ತಾರೆ. 9+9 ನಿಮಿಷಗಳ 2 ಹಂತದಲ್ಲಿ ಪಂದ್ಯ ಸಾಗುತ್ತವೆ.

Advertisement

Udayavani is now on Telegram. Click here to join our channel and stay updated with the latest news.