ಕೊಲಂಬೊ: ಬೆನ್ನು ನೋವಿನ ಕಾರಣದಿಂದ ಕಳೆದೆರಡು ಪಂದ್ಯಗಳನ್ನು ತಪ್ಪಿಸಿಕೊಂಡಿದ್ದ ಮಧ್ಯಮ ಕ್ರಮಾಂಕದ ಬ್ಯಾಟರ್ ಶ್ರೇಯಸ್ ಅಯ್ಯರ್ ಅವರು ಇದೀಗ ಮತ್ತೆ ತಂಡದ ಜತೆ ಅಭ್ಯಾಸದಲ್ಲಿ ತೊಡಗಿಕೊಂಡಿದ್ದಾರೆ.
ಭಾರತವು ಏಷ್ಯಾ ಕಪ್ ನ ಸೂಪರ್ ಫೋರ್ ಸುತ್ತಿನ ಕೊನೆಯ ಪಂದ್ಯವನ್ನು ಬಾಂಗ್ಲಾದೇಶ ವಿರುದ್ಧ ಆಡಲಿದೆ. ಭಾರತ ತಂಡ ಈಗಾಗಲೇ ಫೈನಲ್ ತಲುಪಿದ್ದು, ಸತತ ಪಂದ್ಯ ಸೋತ ಬಾಂಗ್ಲಾ ಕೂಟದಿಂದಲೇ ಹೊರಬಿದ್ದಿದೆ. ಹೀಗಾಗಿ ಈ ಪಂದ್ಯಕ್ಕೆ ಯಾವುದೇ ಮಹತ್ವ ಇಲ್ಲದಾಗಿದೆ.
ಅಯ್ಯರ್ ಅವರು ಈ ಬಾರಿಯ ಏಷ್ಯಾ ಕಪ್ ನಲ್ಲಿ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧ ಭಾರತದ ಎ ಗುಂಪಿನ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು. ಪಾಕಿಸ್ತಾನದ ವಿರುದ್ಧ 14 ರನ್ ಗಳಿಸಿದರು.
ಇದನ್ನೂ ಓದಿ:Mangaluru; ಚೈತ್ರಾ ಕುಂದಾಪುರ ಪ್ರಕರಣಕ್ಕೂ ಬಿಜೆಪಿಗೂ ಯಾವುದೇ ಸಂಬಂಧವಿಲ್ಲ: ಬೊಮ್ಮಾಯಿ
ಸೂಪರ್ ಫೋರ್ ಸುತ್ತಿನ ಪಾಕ್ ವಿರುದ್ಧದ ಪಂದ್ಯಕ್ಕೆ ಕೆಲವೇ ನಿಮಿಷಗಳ ಮೊದಲು ಅವರು ಬೆನ್ನು ನೋವಿನ ಕಾರಣದಿಂದ ಹೊರಬಿದ್ದಿದ್ದರು. ಅವರ ಜಾಗಕ್ಕೆ ಕೆಎಲ್ ರಾಹುಲ್ ರನ್ನು ಆಡಿಸಲಾಗಿತ್ತು. ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ಶ್ರೇಯಸ್ ಅಯ್ಯರ್ ಅವರು ಮೈದಾನಕ್ಕೂ ಬರದೆ ಹೋಟಲ್ ನಲ್ಲಿಯೇ ಉಳಿದುಕೊಂಡಿದ್ದರು.
ಇದೀಗ ತಂಡದೊಂದಿಗೆ ಅಭ್ಯಾಸದಲ್ಲಿ ಶ್ರೇಯಸ್ ಭಾಗಿಯಾಗಿದ್ದಾರೆ. ಸ್ವಲ್ಪ ಸಮಯ ಬ್ಯಾಟಿಂಗ್ ಪ್ರ್ಯಾಕ್ಟೀಸ್ ಮಾಡಿದ್ದಾರೆ.