Advertisement

Asia Cup 2023: ಮೊದಲೆರಡು ಪಂದ್ಯದಿಂದ ಕೆಎಲ್ ರಾಹುಲ್ ಔಟ್

02:32 PM Aug 29, 2023 | Team Udayavani |

ಬೆಂಗಳೂರು: ಮುಲ್ತಾನ್‌ ನಲ್ಲಿ ಬುಧವಾರದಿಂದ ಪ್ರಾರಂಭವಾಗಲಿರುವ ಮುಂಬರುವ ಏಷ್ಯಾ ಕಪ್‌ ನ ಮೊದಲ ಎರಡು ಪಂದ್ಯಗಳಿಂದ ಭಾರತದ ವಿಕೆಟ್‌ ಕೀಪರ್-ಬ್ಯಾಟರ್ ಕೆಎಲ್ ರಾಹುಲ್ ಹೊರಗುಳಿದಿದ್ದಾರೆ.

Advertisement

ಗಾಯದಿಂದ ಚೇತರಿಸಿಕೊಳ್ಳುತ್ತಿರುವ 31 ವರ್ಷದ ಕನ್ನಡಿಗ ಪಾಕಿಸ್ತಾನ ಮತ್ತು ನೇಪಾಳ ವಿರುದ್ಧದ ಮೊದಲ ಎರಡು ಪಂದ್ಯಗಳಿಗೆ ಲಭ್ಯವಿರುವುದಿಲ್ಲ ಎಂದು ಭಾರತ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಮಂಗಳವಾರ ಪ್ರಕಟಿಸಿದ್ದಾರೆ.

ಇದಕ್ಕೂ ಮುನ್ನ ತಂಡವನ್ನು ಪ್ರಕಟಿಸುವ ಸಂದರ್ಭದಲ್ಲಿ ಬಿಸಿಸಿಐ ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ಅವರು ರಾಹುಲ್ ಸ್ವಲ್ಪ ನಿಗಲ್ ನಿಂದ ಬಳಲುತ್ತಿದ್ದಾರೆ ಎಂದು ಮಾಧ್ಯಮಗಳಿಗೆ ತಿಳಿಸಿದ್ದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೋಚ್ ರಾಹುಲ್ ದ್ರಾವಿಡ್, ಕೆಎಲ್ ಗೆ ಒಂದು ವಾರದ ವಿರಾಮದ ಅಗತ್ಯವಿದೆ ಎಂದಿದ್ದಾರೆ.

ಇದನ್ನೂ ಓದಿ:BMTC ಡಿಪೋಗೆ ರಜಿನಿ ಭೇಟಿ: ʼಕಂಡೆಕ್ಟರ್‌ ದಿನʼಗಳನ್ನು ಮೆಲುಕು ಹಾಕಿದ ಸೂಪರ್‌ ಸ್ಟಾರ್

“ಕೆಎಲ್ ರಾಹುಲ್ ನಮ್ಮೊಂದಿಗೆ ಉತ್ತಮವಾಗಿ ವಾರ ಕಳೆದರು. ಅವರು ಉತ್ತಮವಾಗಿ ಆಡುತ್ತಿದ್ದಾರೆ. ಆದರೆ ಏಷ್ಯಾಕಪ್ ನ ಕ್ಯಾಂಡಿ ಲೆಗ್‌ ಗೆ ಮೊದಲ ಭಾಗಕ್ಕೆ ಅವರು ಅಲಭ್ಯರಾಗುತ್ತಾರೆ” ಎಂದು ದ್ರಾವಿಡ್ ಲಂಕಾ ಪ್ರವಾಸಕ್ಕೆ ಮುನ್ನ ಹೇಳಿದರು.

Advertisement

ಕೆಎಲ್ ರಾಹುಲ್ ಎನ್‌ಸಿಎಗೆ ಹಿಂತಿರುಗಲಿದ್ದಾರೆ. ಅವರು ಪಂದ್ಯಾವಳಿಯಲ್ಲಿ ಭಾಗವಹಿಸುವ ಕುರಿತು ಸೆಪ್ಟೆಂಬರ್ 4 ರಂದು ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಕೋಚ್ ಹೇಳಿದರು.

ಏಷ್ಯಾ ಕಪ್‌ ನ ಮೊದಲ ಪಂದ್ಯ ಬುಧವಾರ ಮುಲ್ತಾನ್‌ ನಲ್ಲಿ ಸಹ-ಆತಿಥೇಯ ಪಾಕಿಸ್ತಾನ ಮತ್ತು ನೇಪಾಳ ನಡುವೆ ನಡೆಯಲಿದೆ. ಟೀಂ ಇಂಡಿಯಾ ಸೆಪ್ಟೆಂಬರ್ 2 ರಂದು ಕ್ಯಾಂಡಿಯಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ.

Advertisement

Udayavani is now on Telegram. Click here to join our channel and stay updated with the latest news.

Next