Advertisement
ಭಾರತ ತಂಡದ ಮಾಜಿ ನಾಯಕ ಸುನೀಲ್ ಗಾವಸ್ಕರ್ ಮತ್ತು ಆರ್‌ಪಿಜಿ ಎಂಟರ್‌ಪ್ರೈಸಸ್‌ನ ಚೇರ್ಮನ್ ಹರ್ಷ ಗೋಯೆಂಕಾ ಅವರು ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾದಲ್ಲಿ ನಡೆದ ಸಮಾರಂಭದಲ್ಲಿ ಅಶ್ವಿನ್ ಅವರಿಗೆ ಪ್ರಶಸ್ತಿ ವಿತರಿಸಿದರು.
Related Articles
Advertisement
ಚಾಂಪಿಯನ್ಸ್ ಟ್ರೋಫಿಗೆ ಹೊಸ ಅಸ್ತ್ರ ಮುಂಬಯಿ; ಎರಡು ತಿಂಗಳ ವಿಶ್ರಾಂತಿಯ ಬಳಿಕ ಪೂರ್ಣ ಪ್ರಮಾಣದಲ್ಲಿ ಮುಂಬರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಕೂಟಕ್ಕೆ ಭಾರತದ ಪ್ರಮುಖ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಸಜ್ಜಾಗಿದ್ದಾರೆ. ಚೀಲತುಂಬ ಹೊಸ ತಂತ್ರ ಮತ್ತು ಅಸ್ತ್ರಗಳೊಂದಿಗೆ ಸಿದ್ಧವಾಗಿರುವ ಅಶ್ವಿನ್ ಚಾಂಪಿಯನ್ಸ್ ಟ್ರೋಫಿ ಕೂಟದ ವೇಳೆ ಎದುರಾಳಿ ತಂಡಗಳ ಮೇಲೆ ಪ್ರಯೋಗಿಸಲಿದ್ದಾರೆ. ತವರಿನಲ್ಲಿ 13 ಟೆಸ್ಟ್‌ಗಳಲ್ಲಿ ಆಡಿ ಸುಸ್ತಾಗಿದ್ದ ಅಶ್ವಿನ್ ಅವರಿಗೆ ಐಪಿಎಲ್ ವೇಳೆ ಪೂರ್ಣ ವಿಶ್ರಾಂತಿ ಪಡೆಯುವಂತೆ ಸೂಚಿಸಲಾಗಿತ್ತು. ಅಶ್ವಿನ್ ಅವರ ಮುಂದಿನ ಕೆಲಸ ಚಾಂಪಿಯನ್ಸ್ ಟ್ರೋಫಿಯನ್ನು ರಕ್ಷಿಸಿಕೊಳ್ಳುವುದು ಆಗಿದೆ. ಚಾಂಪಿಯನ್ಸ್ ಟ್ರೋಫಿಯಲ್ಲಿ ಕೆಲವೊಂದು ಹೊಸ ಅಸ್ತ್ರವನ್ನು ಬಳಸುವ ಸಾಧ್ಯತೆಯಿದೆ. ಅಂತಹ ಅಸ್ತ್ರ ಬಳಸುವಷ್ಟು ಸಾಮರ್ಥ್ಯವನ್ನು ನಾನು ಹೊಂದಿದ್ದೇನೆ. ನ್ಯೂಜಿಲ್ಯಾಂಡ್ ಮತ್ತು ಬಾಂಗ್ಲಾದೇಶ ವಿರುದ್ಧ ನಡೆಯಲಿರುವ ಎರಡು ಅಭ್ಯಾಸ ಪಂದ್ಯಗಳು ನಾನು ಎಷ್ಟರಮಟ್ಟಿಗೆ ಕೂಟಕ್ಕೆ ಸಿದ್ಧಗೊಂಡಿದ್ದೇನೆ ಎಂಬುದನ್ನು ತಿಳಿಸಲಿದೆ ಎಂದು ಅಶ್ವಿನ್ ತಿಳಿಸಿದರು.
ಚೆಂಡಿನ ಏರಿಳಿತಗಳು ಯಾವ ರೀತಿ ಸಾಗುತ್ತವೆ ಎಂಬುದರ ಮೇಲೆ ನನ್ನ ದಾಳಿಯ ತೀವ್ರತೆ ನಿರ್ಧ ರಿಸಲಿದೆ. ಹಾಗಾಗಿ ಇಂತಹ ಅಭ್ಯಾಸ ಪಂದ್ಯಗಳು ನನ್ನ ಅಸ್ತ್ರ ಬಳಕೆಗೆ ಒಳ್ಳೆಯ ರೀತಿಯಲ್ಲಿ ಉಪಯೋಗಿಸುವೆ ಮತ್ತು ಈ ಮೂಲಕ ತಂಡಕ್ಕೆ ಹೊಸತನ್ನು ನೀಡುವೆ ಎಂದು ಅಶ್ವಿನ್ ಆತ್ಮವಿಶ್ವಾಸದಿಂದ ನುಡಿದರು. ಏಕದಿನ ಕ್ರಿಕೆಟ್‌ನ ಹೊಸ ನಿಯಮದಿಂದಾಗಿ ಪ್ರತಿಯೊಬ್ಬ ಬೌಲರ್ ಹೊಸ ರೀತಿಯಲ್ಲಿ ದಾಳಿ ನಡೆಸುವುದನ್ನು ಆಲೋಚಿಸಬೇಕಾಗಿದೆ. ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ಐಸಿಸಿ ಮಾಡಿರುವ ನಿಯಮ ಬದಲಾವಣೆ ಒಳ್ಳೆಯದೇ. ಯಾಕೆಂದರೆ ಒಂದೇ ರೀತಿಯಲ್ಲಿ ಬೌಲಿಂಗ್ ದಾಳಿ ನಡೆಸುವುದರಿಂದ ಯಾವುದೇ ಅರ್ಥವಿಲ್ಲ. ನಮ್ಮ ಬೌಲಿಂಗ್ ಶೈಲಿ ಬದಲಾಯಿಸಿಕೊಳ್ಳಲು ಪಂದ್ಯ ಅವಕಾಶ ಕಲ್ಪಿಸಿ ದರೆ ಒಳ್ಳೆಯದು. ಪಂದ್ಯವನ್ನು ಯಾವ ರೀತಿ ಬದ ಲಾಯಿಸುವ ಕುರಿತು ನನ್ನ ತಲೆ ಓಡುತ್ತಿತ್ತು ಎಂದು ಅಶ್ವಿನ್ ವಿವರಿಸಿದರು.