Advertisement

ಐಸಿಸಿ ರ್ಯಾಂಕಿಂಗ್ ನಲ್ಲಿ ಮೇಲೇರಿದ ರವಿ ಅಶ್ವಿನ್, ಅಯ್ಯರ್ ಮತ್ತು ಉಮೇಶ್

03:58 PM Dec 28, 2022 | Team Udayavani |

ಮುಂಬೈ: ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿ ಅಂತ್ಯವಾದ ಕಾರಣದಿಂದ ಐಸಿಸಿ ನೂತನ ಟೆಸ್ಟ್ ರ್ಯಾಂಕಿಂಗ್ ಬಿಡುಗಡೆ ಮಾಡಿದೆ. ಸರಣಿಯ ಎರಡನೇ ಪಂದ್ಯದಲ್ಲಿ ಉತ್ತಮ ಪ್ರದರ್ಶನ ತೋರಿದ ರವಿಚಂದ್ರನ್ ಅಶ್ವಿನ್ ಮತ್ತು ಶ್ರೇಯಸ್ ಅಯ್ಯರ್ ಈ ಬಾರಿ ಉತ್ತಮ ಪ್ರಗತಿ ಸಾಧಿಸಿದ್ದಾರೆ.

Advertisement

ಸ್ಪಿನ್ ಬೌಲರ್ ಅಶ್ವಿನ್ ಬೌಲಿಂಗ್ ಪಟ್ಟಿಯಲ್ಲಿ ಒಂದು ಸ್ಥಾನ ಮೇಲೇರಿದ್ದು, ಟೆಸ್ಟ್ ಬೌಲಿಂಗ್ ಪಟ್ಟಿಯಲ್ಲಿ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಜಂಟಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಆದರೆ ಅವರು ಆಲ್ ರೌಂಡರ್‌ಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರಪಡಿಸಿಕೊಂಡಿದ್ದಾರೆ. ಇಲ್ಲಿ ರವೀಂದ್ರ ಜಡೇಜಾ ಮೊದಲ ಸ್ಥಾನದಲ್ಲಿದೆ.

ಇದನ್ನೂ ಓದಿ:ಜನಸೇವೆಯ ನಾಟಕವಾಡುವ ಗಾಲಿ ರೆಡ್ಡಿ ರಾಜ್ಯದ ಜನತೆಯ ಕೆಲ ಪ್ರಶ್ನೆಗೆ ಉತ್ತರಿಸಲಿ: ಜೆ. ಭಾರಧ್ವಾಜ್

ಈತನ್ಮಧ್ಯೆ, ಅಯ್ಯರ್ ವೃತ್ತಿಜೀವನದ ಅತ್ಯುತ್ತಮ ರೇಟಿಂಗ್‌ ಗೆ ಏರಿದ್ದಾರೆ. ಟೆಸ್ಟ್ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಯ್ಯರ್ 10 ಸ್ಥಾನ ಮೇಲೆರಿದ್ದು 16ನೇ ರ್ಯಾಂಕ್ ನಲ್ಲಿದ್ದಾರೆ.

ಉಮೇಶ್ ಯಾದವ್ ಅಂತಿಮ ಟೆಸ್ಟ್‌ನಲ್ಲಿ ಐದು ವಿಕೆಟ್‌ಗಳನ್ನು ಉರುಳಿಸಿದ ನಂತರ ಬೌಲರ್‌ಗಳ ಪಟ್ಟಿಯಲ್ಲಿ ಏರಿದರು. ಅವರು ಬೌಲರ್‌ ಗಳ ಪಟ್ಟಿಯಲ್ಲಿ 5 ಸ್ಥಾನಗಳನ್ನು 33 ನೇ ಸ್ಥಾನಕ್ಕೆ ತಲುಪಿದ್ದಾರೆ.

Advertisement

ವಿಶೇಷವೆಂದರೆ, ಬಾಂಗ್ಲಾದೇಶದ ಆಟಗಾರರು ಟೆಸ್ಟ್ ರ್ಯಾಂಕಿಂಗ್‌ನಲ್ಲಿಯೂ ಲಾಭ ಗಳಿಸಿದ್ದಾರೆ. ಢಾಕಾ ಟೆಸ್ಟ್‌ನ ಎರಡನೇ ಇನ್ನಿಂಗ್ಸ್‌ ನಲ್ಲಿ 73 ರನ್ ಗಳಿಸಿದ ನಂತರ ಲಿಟ್ಟನ್ ದಾಸ್ ಬ್ಯಾಟರ್‌ ಗಳ ಪಟ್ಟಿಯಲ್ಲಿ ಎರಡು ಸ್ಥಾನ ಮೇಲೇರಿ ಈಗ 702 ರೇಟಿಂಗ್‌ಗಳೊಂದಿಗೆ 12 ನೇ ಸ್ಥಾನದಲ್ಲಿದ್ದಾರೆ. ಮೊದಲ ಇನ್ನಿಂಗ್ಸ್‌ ನಲ್ಲಿ ನಾಲ್ಕು ವಿಕೆಟ್‌ ಗಳನ್ನು ಕಬಳಿಸಿದ ಸ್ಪಿನ್ ಬೌಲರ್ ತೈಜುಲ್ ಇಸ್ಲಾಂ ಬೌಲರ್‌ ಗಳ ಪಟ್ಟಿಯಲ್ಲಿ ಎರಡು ಸ್ಥಾನಗಳ ಜಿಗಿತದೊಂದಿಗೆ 28 ನೇ ಸ್ಥಾನವನ್ನು ತಲುಪಿದರು.

Advertisement

Udayavani is now on Telegram. Click here to join our channel and stay updated with the latest news.

Next