Advertisement

ವಿಶ್ವನಾಥ್ ವಿರುದ್ಧ ಶಿಸ್ತು ಕ್ರಮ ರಾಜ್ಯ ಬಿಜೆಪಿ ವ್ಯಾಪ್ತಿಗೆ ಬರೋದಿಲ್ಲ :ಅಶ್ವಥ್ ನಾರಾಯಣ

01:37 PM Jun 18, 2021 | Team Udayavani |

ಬೆಂಗಳೂರು : ಜೂನ್ 21 ರಂದು ಯೋಗ ದಿನಾಚರಣೆ ಅಂಗವಾಗಿ 622 ಕಡೆ ಆಚರಣೆ ಮಾಡ್ತೀವಿ. 224 ಕ್ಷೇತ್ರದ 622 ಕಡೆ ಯೋಗ ದಿನಾಚರಣೆ ಮಾಡಲಾಗುತ್ತದೆ. ಜೂನ್ 23 ರಿಂದ ಪರಿಸರ ದಿನಾಚರಣೆ ಅಂಗವಾಗಿ ಸಸಿ ನೆಡುವ ಮೂಲಕ, ಒಟ್ಟು 11 ಲಕ್ಷ ಸಸಿಗಳನ್ನು ನೆಡುವುದಕ್ಕೆ ತೀರ್ಮಾನ ಮಾಡಲಾಗಿದೆ ಎಂದು ಮಹೇಶ್ ತೆಂಗಿನಕಾಯಿ ಹೇಳಿಕೆ ನೀಡಿದ್ದಾರೆ.

Advertisement

ಇದೇ ವೇಳೆ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್ ನಾರಾಯಣ, 1 ಲಕ್ಷ 20 ಸಾವಿರ ಕಾರ್ತಕರ್ತರನ್ನ ಕೋವಿಡ್ ವಾರಿಯರ್ಸ್ ಆಗಿ ನೇಮಕ ಮಾಡ್ತೀವಿ. ಜೂನ್ 25 ರಾಜ್ಯ ಪಧಾದಿಕಾರಿಗಳ ಸಭೆ ನಡೆಯಲಿದೆ. 26 ರಂದು ರಾಜ್ಯ ಕಾರ್ಯಕಾರಿಣಿ ಸಭೆ ನಡೆಸಲು ತೀರ್ಮಾನ ಮಾಡಲಾಗಿದೆ. ಎಚ್. ವಿಶ್ವನಾಥ್ ಪರಿಷತ್ ಸದಸ್ಯರು. ಅವರು ರಾಜ್ಯ ಶಿಸ್ತು ಸಮಿತಿಯ ವ್ಯಾಪ್ತಿಯಲ್ಲಿ ಬರೊದಿಲ್ಲ. ಇವರು ಕೇಂದ್ರ ಪಾರ್ಲಿಮೆಂಟ್ ಬೋರ್ಡ್ ವ್ಯಾಪ್ತಿಗೆ ಬರ್ತಾರೆ ಎಂದರು.

ಇನ್ನು ತುರ್ತು ಪರಿಸ್ಥಿತಿಯ ಕರಾಳದಿನದ ಕುರಿತು ರಾಜ್ಯ ಮಟ್ಟದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ.
ಪ್ರ ಶಿಕ್ಷಣ ಕಾರ್ಯಕ್ರಮ ಮಾಡಲಿದ್ದು ನರೇಂದ್ರ ಮೋದಿಯವರ ನೇತೃತ್ವದ ಲ್ಯಾಂಡ್ ಮಾರ್ಕ್ ಕಾರ್ಯಕ್ರಮಗಳ ಬಗ್ಗೆ ತಿಳಿಸುವ ಕೆಲಸ ಮಾಡ್ತೀವಿ. ಆರೋಗ್ಯ ಮೂಲ ಸೌಕರ್ಯಕ್ಕೆ ನರೇಂದ್ರ ಮೋದಿಯವರು ಏನೆಲ್ಲಾ ಯೋಜನೆ ಕೊಟ್ಟಿದ್ದಾರೆ.
ನೆರೆ ರಾಷ್ಟ್ರದೊಂದಿಗೆ ಮೋದಿಯವರು ಮೂಡಿಸಿದ ಉತ್ತಮ ಬಾಂಧವ್ಯ, ಆತ್ಮನಿರ್ಭರ ಭಾರತ ಕಾರ್ಯಕ್ರಮದ ಬಗ್ಗೆ ತಿಳಿಸುವುದು. ಜಮ್ಮ ಕಾಶ್ಮೀರ 370 ಆಕ್ಟ್ ರದ್ದು ಮಾಡಿರುವುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ ಪ್ರ ಶಿಕ್ಷಣದಲ್ಲಿ ತಿಳಿಸುತ್ತೇವೆ ಎಂದರು.

ಭ್ರಷ್ಟಾಚಾರದ ಬಗ್ಗೆ ಆರೋಪ ಮಾಡ್ತಿರುವ ಬಗ್ಗೆ ಪಕ್ಷಕ್ಕೆ ಖಂಡಿತ ಮುಜುಗರ ಆಗ್ತಿದೆ. ಅವರು ಮಾಧ್ಯಮಗಳಲ್ಲಿ ಮಾತಾಡ್ತಿದ್ದಾರೆ. ಅವರ ಬಳಿ ದಾಖಲೆಗಳಿದ್ದರೆ ರಾಜ್ಯ ಅಧ್ಯಕ್ಷ ರಿಗೆ ತಂದು ಕೊಡಲಿ ಆಮೇಲೆ ಆ ಬಗ್ಗೆ ಪರಿಶೀಲನೆ ನಡೆಸ್ತೀವಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next