Advertisement
ಕಾಂಗ್ರೆಸ್‌ಗೆ ಸೇರ್ಪಡೆಗೊಂಡ ಅಶೋಕ್ ಖೇಣಿ ಪಕ್ಷಕ್ಕೆ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಅವರು ಪಕ್ಷ ಸೇರಿದ ಬೆನ್ನಲ್ಲೇ ಕಾಂಗ್ರೆಸ್‌ನೊಳಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಅತ್ತ ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ಆಕಾಂಕ್ಷಿಯಾಗಿರುವ ಚಂದ್ರಸಿಂಗ್ ಬೆಂಬಲಿಗರು ಖೇಣಿ ಭಾವಚಿತ್ರ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತ ಬೆಂಗಳೂರಿನ ಕಾಂಗ್ರೆಸ್ ನಾಯಕರೂ ಸಿಡಿಮಿಡಿಗೊಂಡಿದ್ದಾರೆ.
Related Articles
Advertisement
‘ಯೂ ಸಿಡೌನ್’ ಎಂದು ಗದರಿಸಿ ಕುಳ್ಳರಿಸಿದ್ದ ಕಾಗೋಡು: ನೈಸ್ ಸಂಸ್ಥೆ ಹಗರಣದ ಬಗ್ಗೆ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲಿ ಬಹುದೊಡ್ಡ ಚರ್ಚೆ ನಡೆದು ಸದನ ಸಮಿತಿ ರಚಿಸುವ ತೀರ್ಮಾನವಾದಾಗ, ಅಶೋಕ್ ಖೇಣಿ ಸಮಜಾಯಿಷಿ ನೀಡಲು ಎದ್ದು ನಿಂತರು. ಆಗ ಸ್ಪೀಕರ್ ಸ್ಥಾನದಲ್ಲಿದ್ದ ಕಾಗೋಡು ತಿಮ್ಮಪ್ಪ, ನೋ….ಯೂ ಸಿಡೌನ್…ನೀವು ಈಗ ಆರೋಪಿ, ನಿಮ್ಮ ಬಗ್ಗೆ ಚರ್ಚೆ ಆಗುತ್ತಿದೆ. ನೀವು ಮಾತಾಡುವಂತಿಲ್ಲ ಎಂದು ಗದರಿಸಿ ಕುಳ್ಳರಿಸಿದ್ದರು. ಜೆಡಿಎಸ್‌ನ ಕುಮಾರಸ್ವಾಮಿ, ಕಾಂಗ್ರೆಸ್‌ನ ಎಸ್.ಟಿ.ಸೋಮ ಶೇಖರ್, ಕೆ.ಎನ್.ರಾಜಣ್ಣ ನೈಸ್ ಅಕ್ರಮದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸದನ ಒಕ್ಕೊರಲಿನಿಂದ ಸದನ ಸಮಿತಿ ರಚನೆಗೆ ತೀರ್ಮಾನಿಸಿತ್ತು.
ಕಾಂಗ್ರೆಸ್‌ಗೆ ಏನು ಲಾಭ?– ಬೀದರ್ ದಕ್ಷಿಣ ಕ್ಷೇತ್ರ ಸಹಿತ ಕೆಲವೆಡೆ ಕಾಂಗ್ರೆಸ್‌ಗೆ ಅನುಕೂಲ
– ಆ ಭಾಗದಲ್ಲಿ ಲಿಂಗಾಯತ ಸಮುದಾಯದ ಬೆಂಬಲಕ್ಕೆ ನೆರವು
– ಸಂಪನ್ಮೂಲ ಕ್ರೋಡೀಕರಣಕ್ಕೆ ಸಹಾಯ ನಷ್ಟವೇನು?
– ವಿವಾದಿತ ನೈಸ್ ಸಂಸ್ಥೆ ಮುಖ್ಯಸ್ಥ ರಾಗಿರುವುದರಿಂದ ಕಾಂಗ್ರೆಸ್ ‘ಕಳಂಕ’ ಹೊರಬೇಕಾಗಬಹುದು.
– ರೈತರು ನೈಸ್ ವಿರುದ್ಧ ಆಕ್ರೋಶ ಹೊಂದಿರುವುದರಿಂದ ಯಶವಂತಪುರ, ಬೆಂಗಳೂರು ದಕ್ಷಿಣ, ರಾಜರಾಜೇಶ್ವರಿ ನಗರ, ಆನೇಕಲ್, ರಾಮನಗರ, ಮಂಡ್ಯ, ಮೈಸೂರು ಭಾಗದಲ್ಲಿ ವ್ಯತಿರಿಕ್ತ ಪರಿಣಾಮ ಬೀರಬಹುದು.
– ವಿಪಕ್ಷಗಳ ವಾಗ್ಧಾಳಿಯನ್ನು ಎದುರಿಸಬೇಕಾಗಬಹುದು.
– ಜೆಡಿಎಸ್‌ನ ವೈರತ್ವ ಕಟ್ಟಿಕೊಳ್ಳಬೇಕಾಗಬಹುದು. ಖೇಣಿಗೇನು ಲಾಭ?
– ಬೀದರ್ ದಕ್ಷಿಣ ಕ್ಷೇತ್ರದಲ್ಲಿ ಗೆಲ್ಲಲು ಸಹಕಾರಿ
– ರಾಷ್ಟ್ರೀಯ ಪಕ್ಷವೊಂದರ ಆಶ್ರಯ
– ನೈಸ್ ಅಕ್ರಮ ಸದನ ಸಮಿತಿ ವರದಿ ‘ಗಂಡಾಂತರ’ದಿಂದ ಬಚಾವ್ ಮುಂದೇನಾಗಬಹುದು?
– ಕಾಂಗ್ರೆಸ್ ಸರಕಾರವೇ ಬಂದರೆ ನಿಟ್ಟುಸಿರು
– ಬಿಜೆಪಿ ಸರಕಾರ ಬಂದರೆ ಮತ್ತೆ ವಿವಾದ ಕೆದಕಬಹುದು
– ಜೆಡಿಎಸ್ ಸರಕಾರ ಬಂದರೆ ಆತಂಕ ತಪ್ಪಿದ್ದಲ್ಲ, ನೈಸ್ ಇಡೀ ಯೋಜನೆ ರದ್ದಾಗಬಹುದು ನೈಸ್ ಅಕ್ರಮದ ವಿರುದ್ಧ ನಾವು ಹೋರಾಟ ಮಾಡಿದ್ದೇವೆ. ಖೇಣಿ ವಿರುದ್ಧ ಕ್ರಮ ಆಗಬೇಕೆಂದು ಸದನ ತೀರ್ಮಾನ ಮಾಡಿದೆ. ಖೇಣಿ ಸೇರ್ಪಡೆಗೆ ನನ್ನ ವೈಯಕ್ತಿಕ ವಿರೋಧ ಇದೆ. ನಮ್ಮ ವಿರೋಧವನ್ನು ಮುಖ್ಯಮಂತ್ರಿ ಹಾಗೂ ಪಕ್ಷದ ಅಧ್ಯಕ್ಷರಿಗೆ ತಿಳಿಸುತ್ತೇನೆ.
– ಎಸ್. ಟಿ. ಸೋಮಶೇಖರ್, ಶಾಸಕ ಹಲವು ಶಾಸಕರ ವಿರೋಧ ಇದ್ದರೂ ಖೇಣಿ ಅವರನ್ನು ಪಕ್ಷಕ್ಕೆ ಸೇರಿಸಿಕೊಂಡಿದ್ದು ನಮಗೆಲ್ಲ ಅಚ್ಚರಿ ಮೂಡಿಸಿದೆ. ನೈಸ್ ವಿರುದ್ಧ ಸದನದಲ್ಲಿ ಎಲ್ಲ ಶಾಸಕರು ಧ್ವನಿ ಎತ್ತಿದ್ದಾರೆ. ಬೀದರ್ ದಕ್ಷಿಣದಲ್ಲಿ ಅವರಿಗೆ ಟಿಕೆಟ್ ನೀಡುವ ಮೊದಲು ಸ್ಥಳೀಯ ನಾಯಕರ ಅಭಿಪ್ರಾಯ ಪಡೆಯಬೇಕು.
– ಡಾ. ಅಜಯ್ ಸಿಂಗ್, ಜೇವರ್ಗಿ ಶಾಸಕ ಖೇಣಿ ಸೇರ್ಪಡೆಯಿಂದ ಪಕ್ಷಕ್ಕೆ ಧಕ್ಕೆ ಆಗಲಿದೆ. ಅವರನ್ನು ಕಾಂಗ್ರೆಸ್‌ಗೆ ಯಾಕೆ ಸೇರಿಸಿಕೊಂಡಿದ್ದಾರೆ ಎನ್ನುವುದು ಅರ್ಥ ಆಗುತ್ತಿಲ್ಲ. ಕಾರ್ಯಕರ್ತರ ಜತೆ ಸೇರಿ ನಾನು ರಾಜ್ಯ ಸರಕಾರದ ಯೋಜನೆಗಳನ್ನು ಜನರಿಗೆ ತಲುಪಿಸಿದ್ದೇನೆ. ಬೀದರ್ ದಕ್ಷಿಣದಿಂದ ನಾನು ಟಿಕೆಟ್ ಆಕಾಂಕ್ಷಿ.
– ಚಂದ್ರಸಿಂಗ್, ಧರ್ಮಸಿಂಗ್ ಅಳಿಯ