Advertisement
ಪ್ರವಾಸಿಗರಿಗೆ ನಿರ್ಬಂಧ: ಗುಡ್ಡ ಕುಸಿಯುತ್ತಿರುವುದರಿಂದ ಅಪಾಯದ ಮುನ್ಸೂಚನೆ ಅರಿತು ಮುಳ್ಳಯ್ಯನಗಿರಿ ಬೆಟ್ಟ ಶ್ರೇಣಿಯಲ್ಲಿ ಪ್ರವಾಸಿಗರಿಗೆ ನಿರ್ಬಂಧಿಂಸಲಾಗಿದೆ.
Related Articles
Advertisement
ಶೃಂಗೇರಿ: ಒಂದೇ ವಾರದಲ್ಲಿ ಮೂರನೇ ಬಾರಿ ಪ್ರವಾಹ ಶೃಂಗೇರಿ: ಆಶ್ಲೇಷಾ ಮಳೆಯಬ್ಬರ ಮುಂದುವರಿದಿದ್ದು,ಒಂದೇ ವಾರದಲ್ಲಿ ಮೂರನೇ ಬಾರಿಗೆ ತುಂಗೆಯಲ್ಲಿ ಪ್ರವಾಹ ಉಂಟಾಗಿದೆ. ಗುರುವಾರ ದಿನವಿಡೀ ಮಳೆ ಸುರಿದಿದ್ದು, ನದಿ ನೀರಿನ ಮಟ್ಟ ಏರಿಕೆಯಾಗತೊಡಗಿದೆ. ಶಾಲೆ, ಕಾಲೇಜುಗಳಿಗೆ ಶುಕ್ರವಾರವೂ ರಜೆ ನೀಡಲಾಗಿದೆ. ಪ್ರವಾಹದ ನೀರು ಪಟ್ಟಣದ ಬೈಪಾಸ್ ರಸ್ತೆ ಹಾಗೂ ಕೆವಿಆರ್ ರಸ್ತೆಗೆ ಬಂದಿದ್ದು, ಸಂಚಾರ ಸ್ಥಗಿತಗೊಂಡಿದೆ. ಕಾವಡಿ ಸಮೀಪದ ಕಾರ್ಮಿಕರ ಶೆಡ್‌ಗಳಿಗೆ ನೀರು ನುಗ್ಗಿದೆ. ತೋಟ,ಗದ್ದೆಗಳಿಗೆ ನೀರು ನುಗ್ಗುತ್ತಿದೆ. ಅಲ್ಲಲ್ಲಿ ಭೂಕುಸಿತ ಉಂಟಾಗುತ್ತಿದೆ. ಮರ್ಕಲ್ ಗ್ರಾಪಂನ ಕೋಗೋಡು ಗ್ರಾಮದ
ವಡಗೆರೆಮನೆಯ ಲಕ್ಷಿ ನಾರಾಯಣ ಅವರ ಮನೆಗೆ ದರೆ ಕುಸಿದು ಮನೆ ಸಂಪೂರ್ಣ ಜಖಂಗೊಂಡಿದೆ. ಯಡದಾಳು
ಗ್ರಾಮದ ಕೊಠಾರಿಕೊಪ್ಪ ಹಿರಿಯಣ್ಣಯ್ಯರವರ ಮನೆ, ಕಾವಡಿ ಗ್ರಾಮದ ಹೆಗ್ಗದ್ದೆ ಗೋಪಾಲಕೃಷ್ಣಭಟ್ ಮನೆ, ಬೇಗಾನೆ ಹಕೀಂ ಸಾಹೇಬರ ಮನೆಗೆ ಧರೆ ಕುಸಿದು ಹಾನಿಯಾಗಿದೆ. ಕೋಗೋಡು ಗ್ರಾಮದ ಹೊನ್ನೆಕುಡಿಗೆ ರಸ್ತೆಯಲ್ಲಿ ಗುಡ್ಡ ಕುಸಿದು ಸಂಚಾರಕ್ಕೆ ಅಡ್ಡಿಯಾಗಿದೆ. ಹೊನ್ನವಳ್ಳಿ ಗ್ರಾಮದ ಹೊಂಬಾಗಿ ದೇವಸ್ಥಾನ, ಹೊನ್ನವಳ್ಳಿ ದೇವಸ್ಥಾನ ಬಳಿ ಅಕೇಶಿಯಾ ಮರ ರಸ್ತೆಗೆ ಉರುಳಿ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿತ್ತು. ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅಡ್ಡಗದ್ದೆ ಗ್ರಾಮದ ನೇರಳಕೊಡಿಗೆ ವೃತ್ತದ ಬಳಿ ಪ್ರಸಕ್ತ ವರ್ಷ ಅಭಿವೃದ್ಧಿಪಡಿಸಲಾಗಿದ್ದ ರಸ್ತೆ ಕುಸಿದು, ಶೃಂಗೇರಿ-ಆಗುಂಬೆ
ರಸ್ತೆ ಬಿರುಕು ಬಿಟ್ಟಿದೆ. ರಾಷ್ಟ್ರೀಯ ಹೆದ್ದಾರಿ 169ರ ಆನೆಗುಂದ, ಉಳುವೆ, ಕಾವಡಿ, ತನಿಕೋಡು ಬಳಿ ರಸ್ತೆ ಭೂಕುಸಿತ ಉಂಟಾಗಿದೆ. ಮೆಣಸೆ ಗ್ರಾಪಂನ ಮಸಿಗೆ ಗ್ರಾಮದಲ್ಲಿ ತೆಂಗಿನ ಮರ ಗಾಳಿಯ ಹೊಡೆತಕ್ಕೆ ಉರುಳಿ ಬಿದ್ದಿದೆ. ವಿದ್ಯುತ್ ಸಂಪರ್ಕ ಕಡಿತ: ಸತತ ಗಾಳಿಯಿದ ವಿದ್ಯುತ್ ಕಂಬ ನೆಲಕ್ಕುರುಳುತ್ತಿದ್ದು, ವಿದ್ಯುತ್ ಸಂಪರ್ಕ ಸಾಧ್ಯವಾಗುತ್ತಿಲ್ಲ