Advertisement

3 ದಿನ ಮೊದಲೇ ಆಸೀಸ್‌ ಆಡುವ ಬಳಗ ಪ್ರಕಟ

11:16 PM Dec 05, 2021 | Team Udayavani |

ಬ್ರಿಸ್ಬೇನ್‌: ಪ್ರತಿಷ್ಠಿತ ಆ್ಯಶಸ್‌ ಸರಣಿಯ ಆರಂಭಕ್ಕೆ ಇನ್ನೂ 3 ದಿನ ಇದೆ. ಡಿ. 8ರಂದು ಬ್ರಿಸ್ಬೇನ್‌ ಅಂಗಳದಲ್ಲಿ ಮೊದಲ ಟೆಸ್ಟ್‌ ಆರಂಭವಾಗಲಿದೆ. ಅಷ್ಟರಲ್ಲಿ ಆಸ್ಟ್ರೇಲಿಯದ ಆಡುವ ಬಳಗವನ್ನು ಅಂತಿಮಗೊಳಿಸಲಾಗಿದೆ.
ಆಸ್ಟ್ರೇಲಿಯವನ್ನು ಇದೇ ಮೊದಲ ಸಲ ಟೆಸ್ಟ್‌ ಕ್ರಿಕೆಟ್‌ನಲ್ಲಿ ಮುನ್ನಡೆಸಲಿರುವ ವೇಗಿ ಪ್ಯಾಟ್‌ ಕಮಿನ್ಸ್‌ ರವಿವಾರವೇ ಹನ್ನೊಂದರ ತಂಡವನ್ನು ಪ್ರಕಟಿಸಿದರು.

Advertisement

ಡೇವಿಡ್‌ ವಾರ್ನರ್‌-ಮಾರ್ಕಸ್‌ ಹ್ಯಾರಿಸ್‌ ಇನ್ನಿಂಗ್ಸ್‌ ಆರಂಭಿಸಲಿದ್ದು, ಟ್ರ್ಯಾವಿಸ್‌ ಹೆಡ್‌ 5ನೇ ಕ್ರಮಾಂಕದಲ್ಲಿ ಆಡಲಿದ್ದಾರೆ. ಅಷ್ಟೇನೂ ಫಾರ್ಮ್ ನಲ್ಲಿಲ್ಲದ ಎಡಗೈ ವೇಗಿ ಮಿಚೆಲ್‌ ಸ್ಟಾರ್ಕ್‌ ಆಡುವ ಬಳಗದಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಆದರೆ ಇಂಗ್ಲೆಂಡ್‌ ತನ್ನ ತಂಡವನ್ನು ಅಂತಿಮಗೊಳಿಸಲು ಕಾದು ನೋಡುವ ತಂತ್ರ ಬಳಸಿದೆ. ಬ್ರಿಸ್ಬೇನ್‌ ಹವಾಮಾನ ಗಮನಿಸಿ ತಂಡವನ್ನು ಪ್ರಕಟಿಸಲಾಗುವುದು ಎಂದು ನಾಯಕ ಜೋ ರೂಟ್‌ ಹೇಳಿದ್ದಾರೆ. ಜತೆಗೆ ಎಡಗೈ ಸ್ಪಿನ್ನರ್‌ ಜಾಕ್‌ ಲೀಚ್‌ ಆಡುವ ಸಾಧ್ಯತೆಯನ್ನು ತೆರೆದಿರಿಸಿದ್ದಾರೆ.

ಆಸ್ಟ್ರೇಲಿಯ ಟೆಸ್ಟ್‌ ಇಲೆವೆನ್‌: ಡೇವಿಡ್‌ ವಾರ್ನರ್‌, ಮಾರ್ಕಸ್‌ ಹ್ಯಾರಿಸ್‌, ಮಾರ್ನಸ್‌ ಲಬುಶೇನ್‌, ಸ್ಟೀವ್‌ ಸ್ಮಿತ್‌, ಟ್ರ್ಯಾವಿಸ್‌ ಹೆಡ್‌, ಕ್ಯಾಮರಾನ್‌ ಗ್ರೀನ್‌, ಅಲೆಕ್ಸ್‌ ಕ್ಯಾರಿ (ವಿ.ಕೀ.), ಪ್ಯಾಟ್‌ ಕಮಿನ್ಸ್‌ (ನಾಯಕ), ಮಿಚೆಲ್‌ ಸ್ಟಾರ್ಕ್‌, ನಥನ್‌ ಲಿಯೋನ್‌, ಜೋಶ್‌ ಹ್ಯಾಝಲ್‌ವುಡ್‌.

ಇದನ್ನೂ ಓದಿ:ಜೂನಿಯರ್‌ ವಿಶ್ವಕಪ್‌ ಹಾಕಿ: ಭಾರತಕ್ಕೆ ಕಂಚು ಕೂಡ ಸಿಗಲಿಲ್ಲ

Advertisement

ಜೋ ರೂಟ್‌ ವಿಕೆಟ್‌ ಮಹತ್ವವಾದುದು: ಕಮಿನ್ಸ್‌
ಆಸ್ಟ್ರೇಲಿಯದ ನೂತನ ಟೆಸ್ಟ್‌ ನಾಯಕ ಪ್ಯಾಟ್‌ ಕಮಿನ್ಸ್‌ ಆ್ಯಶಸ್‌ ಸರಣಿಗೂ ಮೊದಲು ಮಾಧ್ಯಮದವರೊಂದಿಗೆ ಮಾತಾಡಿದ್ದು, ಇಂಗ್ಲೆಂಡ್‌ ನಾಯಕ ಜೋ ರೂಟ್‌ ಅವರ ವಿಕೆಟ್‌ ನಮ್ಮ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ ಎಂದಿದ್ದಾರೆ.

“ಜೋ ರೂಟ್‌ ವಿರುದ್ಧ ನಾವು ಅದೆಷ್ಟೋ ಪಂದ್ಯಗಳನ್ನು ಆಡಿದ್ದೇವೆ. ಆದರೆ ಪ್ರಸ್ತುತ ಸ್ಥಿತಿಯಲ್ಲಿ ನಮಗೆ ಅವರ ವಿಕೆಟ್‌ ಅತ್ಯಂತ ಪ್ರಮುಖವಾದುದು’ ಎಂದು ಪ್ಯಾಟ್‌ ಕಮಿನ್ಸ್‌ ಹೇಳಿದರು.

ಇನ್ನೊಂದೆಡೆ ಜೋ ರೂಟ್‌ 1986-87ರ ಬಳಿಕ ಆಸ್ಟ್ರೇಲಿಯದಲ್ಲಿ ಇಂಗ್ಲೆಂಡಿನ ಆ್ಯಶಸ್‌ ಜಯಭೇರಿಯ ಯೋಜನೆಯಲ್ಲಿದ್ದಾರೆ. ಅಂದು ಮೈಕ್‌ ಗ್ಯಾಟಿಂಗ್‌ ಸಾರಥ್ಯದ ಇಂಗ್ಲೆಂಡ್‌ ಕಾಂಗರೂ ನಾಡಿನಲ್ಲಿ ಸರಣಿ ಗೆದ್ದಿತ್ತು.
ಎರಡೂವರೆ ವರ್ಷಗಳ ಹಿಂದೆ ಇಂಗ್ಲೆಂಡ್‌ನ‌ಲ್ಲೇ ನಡೆದ ಆ್ಯಶಸ್‌ ಸರಣಿ 2-2 ಅಂತರದಿಂದ ಸಮನಾಗಿತ್ತು. ಈ ಬಾರಿ ಆಸ್ಟ್ರೇಲಿಯದಲ್ಲಿ ಇದಕ್ಕಿಂತ ಉತ್ತಮ ಫ‌ಲಿತಾಂಶ ಪಡೆಯುವುದು ರೂಟ್‌ ಯೋಜನೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next