Advertisement

ಆಷಾಢ ಮಾಸ –ಕಾಸರಗೋಡಿನ ವಿಶೇಷ

06:00 AM Aug 02, 2018 | |

ಕೇರಳದಲ್ಲಿ ರಾಮಾಯಣ ಹಾಗೂ ಮಹಾಭಾರತವು ಸಂಸ್ಕೃತಿಯ ಎರಡು ಕಣ್ಣುಗಳಂತೆ ಆರಾಧಿ ಸಲಾಗುವುದು. ಈ ಗ್ರಂಥಗಳ ಉದಾತ್ತ ವಿಚಾರಧಾರೆಗಳು, ಜನಮಾನಸದಲ್ಲಿ ತುಂಬಿದಷ್ಟು ಅವರ ಮನಸ್ಸು ವಿವೇಕದಿಂದ ಅರಳುತ್ತದೆ ಎಂಬುವುದು ಇಲ್ಲಿನವರ ನಂಬಿಕೆ. ರಾಮಾಯಣದಲ್ಲಿ ಸಾಮಾಜಿಕ ತಲ್ಲಣಗಳಿವೆ. ರಾಜಕೀಯದ ಕ್ಷೊàಭೆ ಇದೆ. ಶಾಸ್ತ್ರಗಳ ಪೂರ್ಣತೆ ಇದೆ. ಜಾನಪದದ ಸಂವೇದನೆ ಇದೆ. ಭಾವನೆಗಳ ತಾಕಲಾಟ ಇದೆ. ಧನ್ಯತೆಯ ಸಂಕಲ್ಪವಿದೆ. ಭಾÅತೃಪ್ರೇಮದ ಆದರ್ಶವಿದೆ. ಸ್ವಾಮಿ ಭಕ್ತಿಯ ಪಾಠವಿದೆ. ಆಧ್ಯಾತ್ಮದ ಬೆಳಕಿದೆ. ರಾಮಾಯಣ ಎಂಬ ಶಬ್ದಕ್ಕೆ ಸಾಧನೆಯಲ್ಲಿ ತಲ್ಲೀನನಾಗುವುದು ಎಂಬ ಅರ್ಥವಿದೆ. ಆಯನ ಎಂಬ ಪದಕ್ಕೆ ಹೋಗುವ ಮಾರ್ಗ ಎಂಬ ಅರ್ಥವಿದೆ. ನಾವು ಸಾಧನೆಯಲ್ಲಿ ತಲ್ಲೀನರಾಗಿ ಸಪ್ತಲೋಕಗಳನ್ನು ದಾಟಿ ಮೋಕ್ಷದ ಕೇಂದ್ರಕ್ಕೆ ಸೇರಲು ರಾಮಾಯಣವು ಸುಲಭ ಎಂದು ವ್ಯಾಖ್ಯಾನಿಸುತ್ತದೆ.

Advertisement

ಧಾರ್ಮಿಕ ಸಂಸ್ಕಾರಗಳು ಸಾಮಾಜಿಕ ಸ್ವಾಸ್ಥÂವನ್ನು ಕಾಪಾಡುತ್ತವೆ. ಅನ್ಯಾಯದ ಹಾದಿಯನ್ನು ದುರ್ಬಲಗೊಳಿಸುತ್ತವೆ. ನ್ಯಾಯಪಥವನ್ನು ಸತ್ಪಥ ಎಂದು ಹೇಳುತ್ತಾರೆ. ಆಚರಣೆಗಳು ಜನತೆಯಲ್ಲಿ ಧರ್ಮಪ್ರಜ್ಞೆಯನ್ನು ಜಾಗೃತಗೊಳಿಸುತ್ತವೆ. ಅಂತಹ ಆಚರಣೆಗಳಲ್ಲಿ ಕರ್ಕಾಟಕ ಮಾಸದಲ್ಲಿ ಕಾಸರಗೋಡಿನಲ್ಲಿ ನಡೆಯುವ ರಾಮಾಯಣ ಮಾಸಾಚರಣೆ ವಿಶೇಷ. 

ಕಾಸರಗೋಡು ಜಿಲ್ಲೆಯೂ ಸೇರಿ ದಂತೆ, ರಾಜ್ಯದಲ್ಲಿ ಜುಲೈ 17ರಿಂದ ಆರಂಭಗೊಂಡಿದ್ದು, ಆ. 16ರ ತನಕ ಆಷಾಢ ಮಾಸ ಪೂರ್ತಿ ರಾಮಾಯಣ ಮಾಸಾಚರಣೆಯ ಸಂಭ್ರಮ. ಆಷಾಢ ಮಾಸ ಎಂದರೆ ಕಷ್ಟಗಳ ತಿಂಗಳು ಎಂಬ ಉಲ್ಲೇಖ ಇದೆ. ಹಿಂದಿನ ಕಾಲದಲ್ಲಿ ಊಟಕ್ಕೂ ಗತಿಯಿಲ್ಲದ ತಿಂಗಳದು. ಗುಡ್ಡಗಾಡಿನ ಹಲಸಿನ ಕಾಯಿಯ ಖಾದ್ಯಗಳನ್ನು ಮಾಡಿ ಹೊಟ್ಟೆ ತುಂಬಿಸುವಷ್ಟು ಬಡತನ ಇತ್ತು. ಹಲಸಿನ ಸೋಳೆ ಹಾಗೂ ಹಲಸಿನ ಬೀಜವೇ ಮುಖ್ಯ ಆಹಾರವಾದ ದಿನಗಳವು. 

ಧಾರಾಕಾರ ಮಳೆಯಲ್ಲಿ ಭತ್ತದ ಕೃಷಿಯ ನಾಟಿಯ ಕಾರ್ಯಗಳು ಮುಗಿಯುವ ಹಂತ. ಆಟಿಕೆಳೆಂಜ ನಾಡಿಗಿಳಿಯುವ ಸಂಭ್ರಮ. ಗುಳಿಗ, ಕೊರತಿ ಮೊದಲಾದ ಕೆಲವು ದೈವಗಳ ಕೋಲ ನಡೆಯುವ ಕಾಲ. ಕೇರಳದಲ್ಲಿ ಈ ತಿಂಗಳನ್ನು ಬಹಳ ಭಕ್ತಿಯಿಂದ ಆಚರಿಸಲಾಗುತ್ತದೆ. ಈ ಭಕ್ತಿಯ ಸ್ವರೂಪವಾಗಿ ದೈವಾರಾಧನೆಯ ಮೂರ್ತರೂಪವಾಗಿ ರಾಮಾಯಣ ಪಾರಾಯಣ ಎಂಬ ಧಾರ್ಮಿಕ ಕಾರ್ಯ ಕ್ರಮ ನಡೆದಿರಬಹುದು. ಇದೀಗ ಕಾಸರಗೋಡಿನಲ್ಲಿ ಬಹುತೇಕ ಪ್ರತೀ ಕ್ಷೇತ್ರಗಳಲ್ಲಿ, ಮಠಮಂದಿರಗಳಲ್ಲೂ ಕೂಡಾ ಅಧ್ಯಾತ್ಮ ರಾಮಾಯಣ ಪಾರಾಯಣದಂತಹ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಆಷಾಢದಲ್ಲಿ ರಾಮಾಯಣ ಪಾರಾಯಣ ಮಾಡುವುದರಿಂದ ಆರೋಗ್ಯದ ಏರಿಳಿತದ ಕಷ್ಟ, ವ್ಯಾವಹಾರಿಕ ನಷ್ಟಗಳು ಸಂಭವಿಸುವುದಿಲ್ಲ ಎಂಬ ನಂಬಿಕೆ ಇದೆ.

ಆಷಾಢದ ರಾಮಾಯಣ ಪಾರಾ ಯಣದಲ್ಲಿ ಆಧ್ಯಾತ್ಮ ರಾಮಾಯಣವನ್ನು ವಾಚಿಸಲಾಗುತ್ತದೆ. ಈ ರಾಮಾಯಣ ಪಾರಾಯಣದಲ್ಲಿ ಬಾಲ ಕಾಂಡ, ಅಯೋಧ್ಯಾ ಕಾಂಡ, ಅರಣ್ಯ ಕಾಂಡ, ಕಿಷ್ಕಿಂದಾ ಕಾಂಡ, ಸುಂದರ ಕಾಂಡ, ಯುದ್ಧ ಕಾಂಡ ಮತ್ತು ಉತ್ತರಾ ಕಾಂಡದ ವರ್ಣನೆ ಮಾಡಲಾಗುತ್ತದೆ. ರಾಮಾಯಣ ಮಾಸವು ಮಲಯಾಳಿ ಕ್ಯಾಲೆಂಡರ್‌ನ ಕೊನೆಯ ತಿಂಗಳು. ಆಷಾಢದ ಪ್ರತೀ ದಿನವೂ ಮನೆಯ ಹಿರಿಯರು ಮುಂಜಾನೆ ಬೇಗ ಎದ್ದು ಸ್ನಾನಾದಿ ನಿತ್ಯ ಕರ್ಮಗಳನ್ನು ಮುಗಿಸಿ, ದೇವರ ಎದುರು ದೀಪ ಉರಿಸಿ ರಾಮಾಯಣ ಪಾರಾಯಣ ಮಾಡುತ್ತಾರೆ. ಮನೆಯ ಇತರ ಸದಸ್ಯರು ಶ್ರದ್ಧೆಯಿಂದ ಈ ಪ್ರವಚನವನ್ನು ಕೇಳುತ್ತಾರೆ. ಜಿಲ್ಲೆಯ ಅನೇಕ ವಿದ್ಯಾಸಂಸ್ಥೆಗಳಲ್ಲಿ ರಾಮಾಯಣ ಕುರಿತಾದ ರಸಪ್ರಶ್ನೆಗಳು, ಗಾಯನಾದಿ ವಿವಿಧ ಸ್ಪರ್ಧೆಗಳು ನಡೆಯುತ್ತವೆ. ಶ್ರೀ ರಾಮಚಂದ್ರನು ಆಷಾಢ ಮಾಸದ ಅಮಾವಾಸ್ಯೆಯ ದಿನ, ತನ್ನ ತಂದೆ ದಶರಥನ ಉತ್ತರಕ್ರಿಯೆಯನ್ನು ಮಾಡಿದನೆಂಬ ಮಾತಿದೆ. ಆಷಾಢ ಅಮಾವಾಸ್ಯೆಯ ದಿನವನ್ನು ಕೇರಳ ರಾಜ್ಯ ಸರ್ಕಾರವು ಅ ಧಿಕೃತ ರಜಾದಿನವನ್ನಾಗಿ ಘೋಷಿಸಿದೆ. ಆಷಾಢ ಅಮವಾಸ್ಯೆಯ ದಿನ ಮೃತರಾದ ಹಿರಿಯರಿಗೆ ಶ್ರಾದ್ಧಾದಿ ಕರ್ಮಗಳನ್ನು ಮಾಡುತ್ತಾರೆ.

Advertisement

ಕಲಿಯುಗದಲ್ಲಿ ಜೀವಿಗಳ ಸರಾಸರಿ ಆಧ್ಯಾತ್ಮಿಕ ಮಟ್ಟವು ಶೇಖಡಾ 20ರಿಂದ 25ರಷ್ಟು ಕೆಳಗೆ ಬಂದಿರುವುದರಿಂದ, ಮಾನವನ ಮನದಲ್ಲಿ ರಜೋಗುಣದ ವಿಕಾರಗಳು ಹೆಚ್ಚಾಗಿವೆ. ಧರ್ಮಾಚರಣೆಯ ಕುರಿತಾದ ಶ್ರದ್ಧೆ ಕಡಿಮೆಯಾಗಿ, ಎಲ್ಲವನ್ನೂ ವಿಡಂಬನೆ ಮಾಡುವ ಸ್ವಭಾವ ಹೆಚ್ಚಾಗಿವೆ. ಅದರಲ್ಲಿ ಧರ್ಮಪ್ರಜ್ಞೆ ಕಡಿಮೆಯಾಗಿದೆ. ಆಷಾಢದಲ್ಲಿ ಪ್ರಾಕೃತಿಕ ಅಸಮತೋಲನದಿಂದಾಗಿ ಮಾನವರ ಮನಸ್ಸಿನಲ್ಲಿ ಗೊಂದಲಗಳು ಮೂಡುತ್ತವೆ. ಬುದ್ಧಿ ಚಾಂಚಲ್ಯ ಹೆಚ್ಚಾಗುತ್ತದೆ. ರಾಮಾಯಣದ ಅನುಕರಣೀಯ ಸಿದ್ಧಾಂತಗಳು ಅವರ ಮಾನಸಿಕ ಸಮತೋಲನವನ್ನು ಕಾಪಾಡುತ್ತದೆ. ಪ್ರತಿ ವರ್ಷವೂ ರಾಮಾಯಣ ಪಾರಾಯಣ ಮಾಡುವುದರಿಂದ  ಮುಕ್ತಿ ದೊರೆಯುತ್ತದೆ ಎಂಬ ನಂಬಿಕೆ ಇದೆ. ಕಲಿಯುಗದಲ್ಲಿ ಧರ್ಮ ಒಂದೇ ಕಾಲಿನಲ್ಲಿ ನಿಂತಿದೆಯಂತೆ. ಈ ಯುಗದಲ್ಲಿ ಮಾನವನ ಶರೀರವೇ ರಥ, ಬುದ್ಧಿಯೇ ಸಾರಥಿ, ಇಂದ್ರಿಯಗಳೇ ಕುದುರೆಗಳು. ಇವೆಲ್ಲವೂ ಒಟ್ಟಾಗಿ ದೇವರ ಆರಾಧನೆ ಮಾಡಬೇಕು. ಅದಕ್ಕೆ ಮುಂಗಾರಿನ ಆಷಾಢ ಉತ್ತಮ ಕಾಲ ಎಂಬ ಉದ್ದೇಶದಿಂದ ಕೇರಳದಲ್ಲಿ ಆಷಾಢ ಮಾಸದಲ್ಲಿ ಪುರಾಣ ಪ್ರವಚನಗಳು ಹೆಚ್ಚಾಗಿ ನಡೆಯುತ್ತದೆ.

– ವಿರಾಜ್‌ ಅಡೂರು

Advertisement

Udayavani is now on Telegram. Click here to join our channel and stay updated with the latest news.

Next