ಅಬುಧಾಬಿ: ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರ ಟಿ20 ದಾಖಲೆಯೊಂದನ್ನು ಅಫ್ಘಾನಿಸ್ಥಾನದ ನಾಯಕ ಅಸ್ಗರ್ ಅಫ್ಘಾನ್ ಮುರಿದಿದ್ದಾರೆ.
ಶನಿವಾರ ಜಿಂಬಾಬ್ವೆ ವಿರುದ್ಧ ನಡೆದ ಟಿ20 ಪಂದ್ಯವನ್ನು ಗೆಲ್ಲುವುದರ ಮೂಲಕ ಅತೀ ಹೆಚ್ಚು ಟಿ20 ಅಂತಾರಾಷ್ಟ್ರೀಯ ಪಂದ್ಯ ಗೆದ್ದ ನಾಯಕ ಎಂಬ ಖ್ಯಾತಿಗೆ ಅಸ್ಗರ್ ಪಾತ್ರರಾಗಿದ್ದಾರೆ.
ಇದನ್ನೂ ಓದಿ:ಆರ್ ಸಿಬಿ ತಂಡದಲ್ಲಿ ಪಡಿಕ್ಕಲ್ ಜೊತೆ ಯಾರು ಆರಂಭಿಕ? ಉತ್ತರ ನೀಡಿದ ವಿರಾಟ್ ಕೊಹ್ಲಿ
ಅಸ್ಗರ್ ನಾಯಕತ್ವದಲ್ಲಿ ಅಫ್ಘಾನಿಸ್ಥಾನ ತಂಡ 42 ನೇ ಜಯ ಸಾಧಿಸಿತು. 52 ಪಂದ್ಯದಲ್ಲಿ ನಾಯಕನಾಗಿ ಅಸ್ಗರ್ 42ನೇ ಜಯ ಕಂಡರು. ಮಹೇಂದ್ರ ಸಿಂಗ್ ಧೋನಿ 72 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿ 41 ಪಂದ್ಯಗಳಲ್ಲಿ ಗೆಲುವು ಕಂಡಿದ್ದರು.
ಇಂಗ್ಲೆಂಡ್ ನಾಯಕ ಇಯಾನ್ ಮಾರ್ಗನ್ 59 ಪಂದ್ಯಗಳಲ್ಲಿ 33 ಜಯ ಸಾಧಿಸಿದ್ದು, ಮೂರನೇ ಸ್ಥಾನದಲ್ಲಿದ್ದರೆ, ಪಾಕ್ ನ ಮಾಜಿ ನಾಯಕ ಸರ್ಫರಾಜ್ ಅಹಮದ್ 37 ಟಿ20 ಪಂದ್ಯಗಳಲ್ಲಿ ತಂಡವನ್ನು ಮುನ್ನಡೆಸಿ 29 ಜಯ ಸಾಧಿಸಿದ್ದಾರೆ. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 45 ಪಂದ್ಯಗಳಲ್ಲಿ 27 ಗೆಲುವು ಕಂಡಿದ್ದಾರೆ.