Advertisement

ಆಸರೆ ಚಾರಿಟೆಬಲ್‌ ಟ್ರಸ್ಟ್‌ : 100ನೇ ಮನೆಗೆ ಉಚಿತ ವಿದ್ಯುತ್‌ ಸಂಪರ್ಕ

01:47 AM Nov 04, 2021 | Team Udayavani |

ಉಡುಪಿ: ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ವಿದ್ಯುತ್‌ ಸಂಪರ್ಕ ರಹಿತ ಮನೆಗಳ ಸ್ಥಿತಿ ಊಹಿಸಲು ಕಷ್ಟ ಸಾಧ್ಯ. ಈ ಸಮಸ್ಯೆ ಅರಿತ ಆಸರೆ ಚಾರಿಟೆಬಲ್‌ ಟ್ರಸ್ಟ್‌ ಆರ್ಥಿಕವಾಗಿ ಹಿಂದುಳಿದ ಮನೆಗಳಿಗೆ ಉಚಿತ ವಿದ್ಯುತ್‌ ಸಂಪರ್ಕ ನೀಡಿರುವುದು ಶ್ಲಾಘನೀಯ ಎಂದು ಶಾಸಕ ಕೆ. ರಘುಪತಿ ಭಟ್‌ ಪ್ರಶಂಸಿದರು.

Advertisement

ಕಡಿಯಾಳಿ ಆಸರೆ ಚಾರಿಟೆಬಲ್‌ ಟ್ರಸ್ಟ್‌ ವತಿಯಿಂದ ಬುಧವಾರ ಇಂದ್ರಾಳಿ ಮಂಚಿ ಕುಮೇರಿ ಕೊರಗ ಸಮುದಾಯ ಭವನದ ಸಮೀಪದ 100ನೇ ಮನೆಗೆ ಉಚಿತ ವಿದ್ಯುತ್‌ ಸಂಪರ್ಕಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವುದೇ ಒಂದು ಸಂಸ್ಥೆ ವಿಶ್ವಾಸಾರ್ಹತೆಯಿಂದ ಕೆಲಸ ಮಾಡಿದಾಗ ಒಳ್ಳೆಯ ಕೆಲಸಗಳಿಗೆ ಸಮಾಜ ಕೈಜೋಡಿಸುತ್ತದೆ. ಅದಕ್ಕೆ ಆಸರೆ ಚಾರಿಟೆಬಲ್‌ ಟ್ರಸ್ಟ್‌ ಸಂಸ್ಥೆ ಸ್ಪಷ್ಟವಾದ ನಿದರ್ಶನ. ಉಡುಪಿ ಸಾರ್ವಜನಿಕ ಗಣೇಶೋತ್ಸವ ಸಮಿತಿ ಸೇವಾ ಪ್ರಕಲ್ಪದ ಅಂಗವಾಗಿ ಈ ಟ್ರಸ್ಟ್‌ ಸ್ಥಾಪಿಸಲಾಗಿತ್ತು. ಪ್ರಾರಂಭದಲ್ಲಿ ಶೈಕ್ಷಣಿಕ ನಿಧಿ ಸ್ಥಾಪಿಸಿ ಹೆತ್ತವರನ್ನು ಕಳೆದುಕೊಂಡ ಅವಕಾಶ ವಂಚಿತ 25 ಮಕ್ಕಳ ಶೈಕ್ಷಣಿಕ ಸಹಕಾರ ನೀಡಲಾಗಿತ್ತು ಎಂದರು.

ಕೋವಿಡ್‌ ಸಂದರ್ಭದಲ್ಲಿ ನಿರ್ಗತಿಕರಿಗೆ, ಕೂಲಿ ಕಾರ್ಮಿಕರನ್ನು ಸೇರಿ 96,000 ಮಂದಿಗೆ ಅನ್ನದಾನ ಮಾಡಿದೆ. ಅನಂತರ ದಿನದಲ್ಲಿ ಸಾರ್ವಜನಿಕರು ತಾವಾಗಿಯೇ ಮುಂದೆ ಬಂದು ಟ್ರಸ್ಟ್‌ ಸಹಾಯ ಮಾಡಿದ್ದಾರೆ ಎಂದರು.

ಇದನ್ನೂ ಓದಿ:ಟಿ20 ವಿಶ್ವಕಪ್‌: ಸೆಮಿಫೈನಲ್‌ನತ್ತ ಕಿವೀಸ್‌ ದಾಪುಗಾಲು

Advertisement

ಉಚಿತ ವಿದ್ಯುತ್‌ ಸಂಪರ್ಕ
100ನೇ ಮನೆಯ ಉಚಿತ ವಿದ್ಯುತ್‌ ಪ್ರಾಯೋಜಕತ್ವವನ್ನು ಮೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್‌ ಗಣರಾಜ್‌ ಭಟ್‌ ವಹಿಸಿಕೊಂಡರು. ಉಡುಪಿ ಪುತ್ತೂರು, ಕೊಡವೂರು, ಇಂದ್ರಾಳಿ, ಮಂಚಿ ಕುಮೇರಿ ಸಹಿತ ವಿವಿಧ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದ ಕುಟುಂಬದ ಮನೆಗೆ ಉಚಿತ ವಿದ್ಯುತ್‌ ಸಂಪರ್ಕ ನೀಡಲಾಯಿತು.

ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಗಿರೀಶ್‌ ಅಂಚನ್‌, ಸದಸ್ಯ ಅಶೋಕ್‌ ನಾಯ್ಕ್ ಟ್ರಸ್ಟ್‌ನ ಅಧ್ಯಕ್ಷ ಪ. ವಸಂತ ಭಟ್‌, ಪ್ರ. ಕಾರ್ಯದರ್ಶಿ ಕೆ. ರಾಘವೇಂದ್ರ ಕಿಣಿ, ಕೋಶಾಧಿಕಾರಿ ಸತೀಶ್‌ ಕುಲಾಲ್‌, ಸದಸ್ಯರಾದ ಸಂದೀಪ್‌ ಸನೀಲ್‌, ವಿದ್ಯಾ ಶ್ಯಾಮ್‌ ಸುಂದರ್‌, ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯ ಮಂಜುನಾಥ ಹೆಬ್ಟಾರ್‌, ಕಾರ್ಪೋರೇಶನ್‌ ಬ್ಯಾಂಕ್‌ ಎಂಪ್ಲಾಯಿಸ್‌ ಯೂನಿಯನ್‌ನ ರಮೇಶ್‌, ಆರೆಸ್ಸೆಸ್‌ ಜಿಲ್ಲಾ ಸಂಘಚಾಲಕ್‌ ಪ್ರೊ| ನಾರಾಯಣ್‌ ಶೆಣೈ, ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next