Advertisement
ಅ.22 ರಂದು ಘಾಟ್‌ಕೋಪರ ಅಸಲ್ಫಾದ ಶ್ರೀ ಕ್ಷೇತ್ರ ಗೀತಾಂಬಿಕಾ ಮಂದಿರದ ರಂಗಮಂಟಪದಲ್ಲಿ ಯಕ್ಷತುಳು ಪರ್ಬ ಸಮಿತಿ ಮಂಗಳೂರು ಅವರ ಆಶ್ರಯದಲ್ಲಿ ಪ್ರದರ್ಶನಗೊಂಡ ಶ್ರೀ ಮಾತಾ ವೈಷ್ಣೋದೇವಿ ಯಕ್ಷಗಾನ ಪ್ರದರ್ಶನದ ಮಧ್ಯೆ ನಡೆದ ಸಮ್ಮಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮುಂಬಯಿ ಕಲಾಭಿಮಾನಿಗಳು ಕಲಾವಿದರನ್ನು ಸದಾ ಗೌರವಿಸಿ, ಪ್ರೋತ್ಸಾಹಿಸುತ್ತಾ ಬಂದಿದ್ದಾರೆ. ತುಳು ಕನ್ನಡಿಗರು ನಾಡಿನ ಕಲೆ, ಸಂಸ್ಕೃತಿಯನ್ನು ಬೆಳೆಸಲು ಹಗಲಿರುಳು ಶ್ರಮಿಸುತ್ತಿದ್ದಾರೆ ಎಂದರು.
Related Articles
Advertisement
ಪ್ರಾಸ್ತಾವಿಕವಾಗಿ ಮಾತನಾಡಿದ ಯಕ್ಷತುಳು ಪರ್ಬ ಸಮಿತಿ ಮಂಗಳೂರು ಅಧ್ಯಕ್ಷ ಡಿ. ಮನೋಹರ ಕುಮಾರ್ ಅವರು ಮಾತನಾಡಿ, ಊರಿನ ಮೇಳಗಳ ಮೂಲಭೂತ ವ್ಯವಸ್ಥೆಗೆ ಮುಂಬಯಿ ಕಲಾಭಿಮಾನಿಗಳ ಕೊಡುಗೆ ತುಂಬಾಯಿದೆ. ಊರಿನ ಮೇಳಗಳು ಉಳಿದು ಬೆಳೆಯಲು ಕೂಡಾ ಮುಂಬಯಿ ಮಹಾಜನತೆಯ ಸಹಕಾರ, ಪ್ರೋತ್ಸಾಹವಿದೆ. ಕದ್ರಿ ಮೇಳ ಮುಂಬಯಿಯಲ್ಲಿ ಪ್ರದರ್ಶನ ನೀಡಲು ಬರುವಾಗ ತಿಂಗಳಿಗೆ ನಲ್ವತ್ತು ಯಕ್ಷಗಾನ ಪ್ರದರ್ಶನಗಳು ನಡೆಯುತ್ತಿದ್ದವು. ತುಳುಭಾಷೆಯ ಅಭಿಮಾನ ನಮ್ಮೆಲ್ಲರಲ್ಲಿ ಹೆಚ್ಚಬೇಕು. ತುಳು ರಂಗ ನಿರ್ಮಾಣವಾಗಬೇಕು ಎಂಬ ಉದ್ದೇಶದಿಂದ ಏಳು ವರ್ಷಗಳ ಹಿಂದೆ ಯಕ್ಷ ತುಳು ಪರ್ಬ ಸಮಿತಿಯನ್ನು ರಚಿಸಿ ತುಳು ಯಕ್ಷಗಾನವನ್ನು ಪ್ರದರ್ಶಿಸುತ್ತಿದ್ದೇವೆ. ನಮ್ಮ ಸಮಿತಿಯ ಸಂಘಟಕರಾದ ಪ್ರಕಾಶ್ ಶೆಟ್ಟಿ ಸುರತ್ಕಲ್ ಹಾಗೂ ಕಲಾವಿದ ದಾಸಪ್ಪ ರೈ ಅವರ ಪುತ್ರ, ಪತ್ರಕರ್ತ ದೇವಿಪ್ರಸಾದ್ ರೈ ಅವರು ಸಂಪೂರ್ಣ ಸಹಕಾರ ನೀಡಿದ್ದಾರೆ. ಕಲಾಭಿಮಾನಿಗಳ, ಕಲಾಪೋಷಕರ ಸಹಾಯ, ಪ್ರೋತ್ಸಾಹದಿಂದ ಯಕ್ಷತುಳು ಪರ್ಬವು ಯಶಸ್ವಿಯಾಗಿ ನಡೆಯುತ್ತಿದೆ ಎಂದರು.
ಉದ್ಯಮಿ, ಕಲಾಪೋಷಕ ನಿಟ್ಟೆ ಕರುಣಾಕರ ಶೆಟ್ಟಿ, ಸುಧಾಕರ ಶೆಟ್ಟಿ ಎಣ್ಣೆಹೊಳೆ, ರಂಗಚಾವಡಿ ಅಧ್ಯಕ್ಷ ಕರುಣಾಕರ ಶೆಟ್ಟಿ ಕುಕ್ಕುಂದೂರು, ರಮಾನಾಥ್ ಕೋಟ್ಯಾನ್, ಡಾಣ ರಂಜನ್ ಶೇಣವ, ಬಿಲ್ಲವರ ಅಸೋಸಿಯೇಶನ್ ಘಾಟ್‌ಕೋಪರ್ ಸ್ಥಳೀಯ ಸಮಿತಿಯ ಕಾರ್ಯದರ್ಶಿ ಕೆ. ಕೆ. ಪೂಜಾರಿ, ಉದ್ಯಮಿ ಶೇಖರ್ ಕೋಟ್ಯಾನ್ ಕುಂಪದವು, ಕಲಾ ಸಂಘಟಕ ಪ್ರಕಾಶ್ ಶೆಟ್ಟಿ ಸುರತ್ಕಲ್ ಮೊದಲಾದವರು ಉಪಸ್ಥಿತರಿದ್ದರು. ಬಾಬಾ ಪ್ರಸಾದ್ ಅರಸ ಕಾರ್ಯಕ್ರಮ ನಿರ್ವಹಿಸಿದರು. ಸುರೇಶ್ ಕೋಟ್ಯಾನ್, ವಿಕ್ರಂ ಸುವರ್ಣ, ಕಣಂಜಾರು ಸುರೇಶ್ ಶೆಟ್ಟಿ, ಸತೀಶ್ ಶೆಟ್ಟಿ, ಸುನಿಲ್ ಅಮೀನ್ ಅವರು ಸಹಕರಿಸಿದರು.
ಇಂದು ನನಗೆ ಈ ಭಾಗ್ಯ ಒದಗಿ ಬಂದಿರುವುದು, ಯಕ್ಷತುಳು ಪರ್ಬದಲ್ಲಿ ಸಮ್ಮಾನ ಸ್ವೀಕರಿಸಲು ಸಂತೋಷವಾಗುತ್ತಿದೆ. ಹನ್ನೆರಡು ವರ್ಷ ಗುರುನಾರಾಯಣ ಯಕ್ಷಗಾನ ಮಂಡಳಿಯಲ್ಲಿ ಸೇವೆಯನ್ನು ಸಲ್ಲಿಸಿರುವ ನಾನು ಕಳೆದ 49 ವರ್ಷಗಳಿಂದ ಗೆಜ್ಜೆಕಟ್ಟಿ ಯಕ್ಷಗಾನ ರಂಗದಲ್ಲಿ ಬೆಳೆಯುತ್ತಿದ್ದೇನೆ. ಕಲಾಸೇವೆಯ ಮುಖಾಂತರ ಕಲಾಭಿಮಾನಿಗಳ ಪ್ರೀತಿಯು ಲಭಿಸಿದೆ. ಇಂದು ಶ್ರೀ ಕ್ಷೇತ್ರ ಗೀತಾಂಬಿಕೆಯ ಸನ್ನಿಧಿಯಲ್ಲಿ ಸಿಕ್ಕ ಸಮ್ಮಾನವನ್ನು ದೇವಿಯ ಪ್ರಸಾದವೆಂದು ಸ್ವೀಕರಿಸಿದ್ದೇನೆ. ಇದು ಈ ಊರಿನ ಮಂಡಳಿಯ ಕಲಾವಿದರಿಗೆ ಸಂದ ಗೌರವವಾಗಿದೆ ಸೀತಾರಾಮ್ ಕುಮಾರ್ ಕಟೀಲು (ಸಮ್ಮಾನಿತರು).