Advertisement
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಲತಾ ಜಯರಾಮ ಶೆಟ್ಟಿ ಅವರು ಮಾತನಾಡಿ, ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಒಗ್ಗೂಡಿ ಉತ್ಸಹದಲ್ಲಿ ದಸರಾ ಸಂಭ್ರಮಾಚರಣೆ ಮಾಡುತ್ತಿರುವುದನ್ನು ಕಂಡಾಗ ನಮ್ಮ ಮಹಿಳೆಯರಲ್ಲಿನ ಧಾರ್ಮಿಕ ಉತ್ಸುಕತೆ, ಭಕ್ತಿ, ಶ್ರದ್ಧೆಯ ಅರಿವಾಗುತ್ತದೆ, ತುಳುನಾಡ ಎಲ್ಲಾ ಸಂಪ್ರದಾಯ ಸಂಸ್ಕೃತಿಗಳು ಪಾವಿತ್ರÂತೆಯಿಂದ ಕೂಡಿದ್ದು, ದೇವಿಗೆ ಇಷ್ಟವಾದ ಅರಸಿನ ಎಲ್ಲಾ ಆಚರಣೆಗಳಿಗೂ ಅಗತ್ಯವಾದ ಕಾರಣ ಅರಸಿನ, ಕುಂಕುಮ, ಹೂವು, ಬಳೆಗಳು ಮಹತ್ವ ಪಡೆದಿವೆ. ಇಂತಹ ಕಾರ್ಯಕ್ರಮಗಳಿಂದ ಪರಸ್ಪರ ಸಾಮರಸ್ಯ ಬೆಳೆದು ತಮ್ಮಲ್ಲಿನ ಪ್ರತಿಭೆ ಗುರುತಿಸಿಕೊಳ್ಳುವಂತಾಗಬೇಕು. ಅಂತೆಯೇ ಭಜನೆಯಿಂದ ದೇವರು ಒಲಿಯುತ್ತಾರೆ ಎನ್ನುವುದೂ ಸತ್ಯ. ನಾವು ಮಕ್ಕಳನ್ನು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಂತೆ ಹುರಿದುಂಬಿಸಬೇಕು ಎಂದು ನುಡಿದು ಶುಭ ಹಾರೈಸಿದರು.
Related Articles
Advertisement
ವಾರ್ಷಿಕ ಶರನ್ನವರಾತ್ರಿ ಉತ್ಸವ ನಿಮಿತ್ತ ಸೆ. 29 ರಂದು ಬೆಳಗ್ಗೆಯಿಂದ ದುರ್ಗಾಹೋಮ, ರಾತ್ರಿ ರಂಗಪೂಜೆ, ಮಂಗಳಾರತಿ, ದೇವಿ ದರ್ಶನ ಬಲಿ, ತುಲಾಭಾರ, ರಾತ್ರಿ ಶ್ರೀ ಗೀತಾಂಬಿಕಾ ಕೃಪಾಪೋಷಿತ ಯಕ್ಷಗಾನ ಮಂಡಳಿ ಇವರಿಂದ “ಕೋರªಬ್ಬು ಬಾರಗ’ ತುಳು ಪೌರಾಣಿಕ ಯಕ್ಷಗಾನ ಬಯಲಾಟ ಪ್ರದರ್ಶನ, ಸೆ. 30ರಂದು ವಿಜಯ ದಶಮಿಯ ದಿನದಂದು ದೇವಿ ದರ್ಶನ, ಮಹಾ ಮಂಗಳಾರತಿ ನೆರವೇರಲಿದೆ. ದಸರಾ ತನಕ ದಿನಂಪ್ರತಿ ರಾತ್ರಿ ಭಜನೆ, ವಿವಿಧ ಪೂಜೆಗಳು, ಮಂಗಳಾರತಿ, ಪ್ರಸಾದ ವಿತರಣೆ ಮತ್ತು ಅನ್ನ ಸಂತರ್ಪಣೆ ನೆರವೇರಲಿದ್ದು, ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ ವಾರ್ಷಿಕ ದಸರೋತ್ಸವದಲ್ಲಿ ಭಕ್ತಾದಿಗಳು ಪಾಲ್ಗೊಂಡು ದೇವಿಯ ಕೃಪೆಗೆ ಪಾತ್ರರಾಗುವಂತೆ ಮಂದಿರದ ಕಾರ್ಯದರ್ಶಿ ಧರ್ಮಪಾಲ್ ಪಿ. ಕೋಟ್ಯಾನ್ ವಿನಂತಿಸಿದರು.
ನಮ್ಮ ಕರಾವಳಿನ ಮಣ್ಣಿನಿಂದ ಉದ್ಯೋಗಕ್ಕಾಗಿ ಕರ್ಮಭೂಮಿಗೆ ಬಂದಿರುವ ನಾವು ನಮ್ಮ ಕರಾವಳಿಯ ಸಂಸ್ಕೃತಿಯನ್ನು ಉಳಿಸಿಕೊಳ್ಳುವ ಜೊತೆಗೆ ಕರ್ಮಭೂಮಿ ಮಹಾರಾಷ್ಟ್ರದ ಸಂಸ್ಕೃತಿಯನ್ನು ಅರಸಿನ ಕುಂಕುಮ ಆಚರಣೆಯೊಂದಿಗೆ ಉಳಿಸಿಕೊಳ್ಳುತ್ತೇವೆ. ಅರಸಿನ ರೋಗನಿರೋಧಕ ಶಕ್ತಿಯುಳ್ಳಂಥ ಪವಿತ್ರವಾದ ವಸ್ತುವಾಗಿದೆ.
ಅರಸಿನ ಗುರುವಿನ ಚಿಹ್ನೆ, ಕುಂಕುಮ ದೈವಿಕತೆಯನ್ನು ಸಾರುವ ಚಿಹ್ನೆಯಾಗಿವೆೆ. ಇಂತಹ ಕಾರ್ಯಕ್ರಮಗಳನ್ನು ಆಚರಿಸುವು ದರಿಂದ ಮನಸ್ಸಿನಲ್ಲಿರುವ ನೋವು ಮರೆತು ಒಗ್ಗಟ್ಟಿನಲ್ಲಿರುವಂತೆ ಪ್ರೇರೇಪಿಸುತ್ತದೆ. ಮನಸ್ಸಿಗೆ ತುಂಬಾ ಆನಂದ ಸಿಗುತ್ತದೆ – ಕಡಂದಲೆ ಸುರೇಶ್ ಭಂಡಾರಿ
(ಅಧ್ಯಕ್ಷರು: ಗೀತಾಂಬಿಕಾ ಮಂದಿರ ಅಸಲ್ಫಾ).