Advertisement

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

07:57 PM Oct 21, 2024 | Team Udayavani |

ಪಲ್ಲೆಕೆಲೆ: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಮೊದಲ ಏಕದಿನ ಪಂದ್ಯವನ್ನು ಶ್ರೀಲಂಕಾ ಡಿಎಲ್‌ಎಸ್‌ ನಿಯಮದಂತೆ 5 ವಿಕೆಟ್‌ಗಳಿಂದ ಗೆದ್ದಿದೆ.

Advertisement

ವೆಸ್ಟ್‌ ಇಂಡೀಸ್‌ 38.3 ಓವರ್‌ಗಳಲ್ಲಿ 4ಕ್ಕೆ 185 ರನ್‌ ಗಳಿಸಿದ ವೇಳೆ ಮಳೆ ಸುರಿಯಿತು. ವಿಂಡೀಸ್‌ ಇನ್ನಿಂಗ್ಸ್‌ ಇಲ್ಲಿಗೇ ಕೊನೆಗೊಂಡಿತು. ಬಳಿಕ ಲಂಕೆಗೆ 37 ಓವರ್‌ಗಳಲ್ಲಿ 232 ರನ್‌ ಗುರಿ ಲಭಿಸಿತು. ಅದು 31.5 ಓವರ್‌ಗಳಲ್ಲಿ 5 ವಿಕೆಟಿಗೆ 234 ರನ್‌ ಬಾರಿಸಿ ಜಯಭೇರಿ ಮೊಳಗಿಸಿತು. ಚರಿತ ಅಸಲಂಕ 77 ರನ್‌ (71 ಎಸೆತ, 8 ಬೌಂಡರಿ, 3 ಸಿಕ್ಸರ್‌), ಕಮಿಂಡು ಮೆಂಡಿಸ್‌ ಅಜೇಯ 30 ರನ್‌ ರನ್‌ ಬಾರಿಸಿ ತಂಡವನ್ನು ದಡ ಮುಟ್ಟಿಸಿದರು. ಆರಂಭಕಾರ ನಿಶಾನ್‌ ಮದುಷ್ಕ 69 ರನ್‌ ಮಾಡಿದರು.

ವೆಸ್ಟ್‌ ಇಂಡೀಸ್‌ ಸರದಿಯಲ್ಲಿ ಮಿಂಚಿದವರೆಂದರೆ ಶಫೇನ್‌ ರುದರ್‌ಫೋರ್ಡ್‌ (ಅಜೇಯ 74), ರೋಸ್ಟನ್‌ ಚೇಸ್‌ (ಅಜೇಯ 33) ಮತ್ತು ಕೇಸಿ ಕಾರ್ಟಿ (37).

Advertisement

Udayavani is now on Telegram. Click here to join our channel and stay updated with the latest news.

Next