Advertisement

ಬಿಹಾರಿನಲ್ಲಿ ಲಸಿಕೆ ಪಡೆಯಲು ಹಿಂದೇಟು:ಓವೈಸಿ ಫೋಟೊ ಮೊರೆ ಹೋದ ಅಧಿಕಾರಿಗಳು  

02:15 PM Jun 09, 2021 | Team Udayavani |

ಬಿಹಾರ್ :  ಕೋವಿಡ್-19 ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿರುವ ಮುಸ್ಲಿಂ ಜನರನ್ನು ಪ್ರೇರೆಪಿಸಲು ಎಐಎಮ್ಐಎಮ್ ಮುಖ್ಯಸ್ಥ ಹಾಗೂ ಸಂಸದ ಅಸಾವುದ್ದೀನ್ ಓವೈಸಿ ಹೆಸರನ್ನು ಬಳಲಾಗುತ್ತಿದೆ.

Advertisement

ಮುಸ್ಲಿಂ ಪ್ರಾಬಲ್ಯ ಇರುವ ಬಿಹಾರಿನ ಸೀಮಾಂಚಲ್ ಪ್ರದೇಶದ ವ್ಯಾಪ್ತಿಗೆ ಒಳಪಡುವ ಆರಾರಿಯಾ, ಪುರ್ನಿಯಾ, ಕತಿಹಾರ್ ಹಾಗೂ ಕಿಶಗಂಜ್ ನಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದರೆ, ಕೆಲವೊಂದು ವದಂತಿಗಳಿಗೆ ಕಿವಿಗೊಟ್ಟು ಅಲ್ಲಿಯ ಜನರು ಲಸಿಕೆ ಪಡೆಯಲು ಮುಂದೆ ಬರುತ್ತಿಲ್ಲ. ಹೀಗಾಗಿ ಅವರನ್ನು ಲಸಿಕೆ ಪಡೆಯಲು ಪ್ರೇರೆಪಿಸುವ ಸಲುವಾಗಿ ಸಂಸದ ಓವೈಸಿ ಲಸಿಕೆ ಪಡೆಯುತ್ತಿರುವ ಭಾವ ಚಿತ್ರವನ್ನು ಬಳಸಿಕೊಳ್ಳಲಾಗುತ್ತಿದೆ. ಓವೈಸಿ ಅವರು ಲಸಿಕೆ ಪಡೆದಿದ್ದಾರೆ ನೀವೂ ಕೂಡ ತೆಗೆದುಕೊಳ್ಳಿ ಎಂದು ಅಧಿಕಾರಿಗಳು ಜನರಿಗೆ ತಿಳಿ ಹೇಳುವ ಕಾರ್ಯ ಮಾಡುತ್ತಿದ್ದಾರೆ.

ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಸೀಮಾಂಚಲ್ ಪ್ರದೇಶದಿಂದ AIMIM  ಪಕ್ಷದ 5 ಶಾಸಕರು ಆಯ್ಕೆಯಾಗಿದ್ದಾರೆ. ಓವೈಸಿ ಅವರು ಹಲವು ಬಾರಿ ಇಲ್ಲಿಗೆ ಭೇಟಿ ನೀಡಿದ್ದಾರೆ. ಸದ್ಯ ಲಸಿಕಾ ಅಭಿಯಾನ ಯಶಸ್ಸುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾ ಮ್ಯಾಜಿಸ್ಟ್ರೇಟರ್ ಅವರು ಅಲ್ಲಿಯ ಎಂಎಲ್ಎಗಳನ್ನು ಭೇಟಿ ಮಾಡಿ, ಅಭಿಯಾನ ಯಶಸ್ವಿಯಾಗಿಸಲು ಸಹಕರಿಸಿ ಎಂದು ಕೇಳಿಕೊಂಡಿದ್ದಾರೆ. ಈ ಹಿನ್ನೆಲೆ ಅಸಾವುದ್ದೀನ್ ಭಾವಚಿತ್ರವನ್ನಿಟ್ಟುಕೊಂಡು ಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆದಿದೆ.

ಇನ್ನು ಸೀಮಾಂಚಲ್ ಪ್ರದೇಶದಲ್ಲಿ ಹೆಚ್ಚಾಗಿ ಮುಸ್ಲಿಂರೆ ವಾಸಿಸುತ್ತಿದ್ದಾರೆ. ಕೋವಿಡ್ ಮಹಾಮಾರಿ ಹೊಡೆದೊಡಿಸುವ ನಿಟ್ಟಿನಲ್ಲಿ ಲಸಿಕೆ ಅಭಿಯಾನ ಪ್ರಾರಂಭಿಸಲಾಗಿದೆ. ಆದರೆ, ಇಲ್ಲಿಯ ಜನರು ಮಾತ್ರ ಇದುವರೆಗೆ ಲಸಿಕೆ ಪಡೆಯಲು ಉತ್ಸುಕತೆ ತೋರಿಸುತ್ತಿಲ್ಲ. ಅವರಲ್ಲಿರುವ ಭಯ ಹೋಗಲಾಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಓವೈಸಿಯ ಫೋಟೊ ಮೊರೆ ಹೋಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next