ಸುಳ್ಯ : ಲಯನ್ಸ್ ಮತ್ತು ಲಯನೆಸ್ ಕ್ಲಬ್ ವತಿಯಿಂದ ರಸ್ತೆ ಸುರಕ್ಷತೆ ಮತ್ತು ಅಪಘಾತ ನಿಯಂತ್ರಣ ಮಾಹಿತಿ ಕಾರ್ಯಕ್ರಮ ಕೊಡಿಯಾಲ ಬೈಲು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆಸಲಾಯಿತು.
ಸಭೆಯ ಅಧ್ಯಕ್ಷತೆಯನ್ನು ಸುಳ್ಯ ಲಯನ್ಸ್ ಕ್ಲಬ್‌ನ ಅಧ್ಯಕ್ಷೆ ರೇಣುಕಾ ಸದಾನಂದ ಜಾಕೆ ಅವರು ವಹಿಸಿ, ವಿದ್ಯಾರ್ಥಿಗಳು ರಸ್ತೆಯ ನಿಯಮಗಳನ್ನು ಸರಿಯಾಗಿ ಪಾಲಿಸಿದಲ್ಲಿ ಅಪಘಾತದಿಂದ ಜೀವ ಕಳೆದುಕೊಂಡು ತಮ್ಮ ಕುಟುಂಬಕ್ಕೆ ಆಗುವ ನಷ್ಟವನ್ನು ತಪ್ಪಿಸಿಕೊಳ್ಳುವಲ್ಲಿ ಕಾನೂನನ್ನು ಸರಿಯಾಗಿ ಪಾಲಿಸಿ ವಾಹನ ಚಲಾಯಿಸಬೇಕು ಎಂದರು.
ಅತಿಥಿಗಳಾಗಿ ಸುಳ್ಯದ ಠಾಣಾಧಿಕಾರಿ ಚಂದ್ರಶೇಖರ್ ಭಾಗವಹಿಸಿ ರಸ್ತೆ ಸುರಕ್ಷತೆ ಮತ್ತು ಅಪಘಾತ ನಿಯಂತ್ರಣ ಮಾಡುವಲ್ಲಿ ದ್ವಿಚಕ್ರ ವಾಹನದಾರರು ಹೆಲ್ಮೆಟ್ ಧರಿಸಿ ಮತ್ತು ಇತರ ವಾಹನ ಸವಾರರು ತಮ್ಮ ಕಾರಿನ ಸೀಟ್ ಬೆಲ್ಟ್ ಧರಿಸಿ ವಾಹನ ಚಲಾಯಿಸುವಾಗ ಕಟ್ಟುನಿಟ್ಟಾಗಿ ಕಾನೂನನ್ನು ಪಾಲಿಸಬೇಕು. ಮೊಬೈಲ್ ಮತ್ತು ಮದ್ಯಪಾನ ಮಾಡಿ ವಾಹನ ಚಲಾಯಿಸುವುದರಿಂದಲೂ ಅಪಘಾತ ಆಗುವ ಸಾಧ್ಯತೆ ಜಾಸ್ತಿ ಇದೆ. ಇದನ್ನು ನಿಯಂತ್ರಿಸುವಲ್ಲಿ ಮುಂಜಾಗ್ರತಾ ಕ್ರಮವನ್ನು ಪಾಲಿಸಬೇಕು. ಇದರ ಜತೆಗೆ ವಾಹನ ಸವಾರರು ತಮ್ಮ ರೆಕಾಡ್ಸ್‌ನ್ನು ಸುಸ್ಥಿಯಲ್ಲಿಟ್ಟುಕೊಳ್ಳಬೇಕು ಎಂದರು. ಅಲ್ಲದೇ ಯಾವುದೇ ವ್ಯಕ್ತಿ ರಸ್ತೆಯಲ್ಲಿ ಅಪಘಾತವಾಗಿ ಬಿದ್ದಿದ್ದಲ್ಲಿ ಆತನನ್ನು ಯಾವುದೇ ಕಾನೂನಿಗೆ ಭಯ ಪಡದೇ ಮಾನವೀಯ ನೆಲೆಯಲ್ಲಿ ಹತ್ತಿರದ ಆಸ್ಪತ್ರೆಗೆ ಸೇರಿಸಿ ಮಾನವೀಯ ಮೌಲ್ಯಕ್ಕೆ ಹೆಚ್ಚು ಬೆಲೆ ಕೊಡಬೇಕು ಎಂದರು.
ಲಯನ್ಸ್ ಸಂಸ್ಥೆ ವತಿಯಿಂದ ಏಡ್ಸ್ ಜಾಗೃತಿ ಕರ ಪತ್ರವನ್ನು ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪದ್ಮನಾಭ ಅವರು ಬಿಡುಗಡೆಗೊಳಿಸಿ, ಲಯನ್ಸ್ ಸಂಸ್ಥೆಯಿಂದ ನಡೆಸಲ್ಪಟ್ಟ ಕಾರ್ಯಕ್ರಮದ ಸದುಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಳ್ಳಬೇಕು ಎಂದು ಶುಭಹಾರೈಸಿದರು.
ಲಯನೆಸ್ ಕ್ಲಬ್‌ನ ಸ್ಥಾಪಕಾಧ್ಯಕ್ಷೆ ಕಮಲಾ ಬಾಲಚಂದ್ರ, ಪೂರ್ವಾಧ್ಯಕ್ಷೆ ರಾಧಾಮಣಿ ಬಿ.ಜಿ., ಸೋಮಶೇಖರ್, ಲಯನ್ ಸದಸ್ಯರಾದ ಜಾಕೆ ಸದಾನಂದ, ರಾಮಕೃಷ್ಣ ರೈ ಮತ್ತು ಸಂಜೀವ ಗೌಡ ಕತ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ರಾಮಚಂದ್ರ ಪೆಲತ್ತಡ್ಕ ವಂದಿಸಿದರು.