Advertisement

ವಿಶ್ವದ ನಂ.2 ಟೆನಿಸ್‌ ಆಟಗಾರ್ತಿ ಅರಿನಾ ಸಬಲೆಂಕಾಗೆ ಕೋವಿಡ್‌ ಪಾಸಿಟಿವ್‌

11:14 PM Oct 03, 2021 | Team Udayavani |

ಇಂಡಿಯನ್‌ ವೆಲ್ಸ್‌: ವಿಶ್ವದ ನಂ.2 ಟೆನಿಸ್‌ ಆಟಗಾರ್ತಿ, ಬೆಲರೂಸ್‌ನ ಅರಿನಾ ಸಬಲೆಂಕಾಗೆ ಕೋವಿಡ್‌-19 ದೃಢಪಟ್ಟಿದೆ. ಹೀಗಾಗಿ “ಇಂಡಿಯನ್‌ ವೆಲ್ಸ್‌ ಟೆನಿಸ್‌ ಪಂದ್ಯಾವಳಿ’ಯಿಂದ ದೂರ ಸರಿದಿದ್ದಾರೆ.

Advertisement

ಈ ಡಬ್ಲ್ಯುಟಿಎ 1000 ಪಂದ್ಯಾವಳಿಯಿಂದ ನಂ.1 ಆಟಗಾರ್ತಿ ಆ್ಯಶ್ಲಿ ಬಾರ್ಟಿ ಹಿಂದೆ ಸರಿದುದರಿಂದ ಅರಿನಾ ಸಬಲೆಂಕಾಗೆ ಅಗ್ರ ಶ್ರೇಯಾಂಕ ಲಭಿಸಿತ್ತು.

ಸಬಲೆಂಕಾ ಅವರ ಗೈರಿನಿಂದ ಇಂಡಿಯನ್‌ ವೆಲ್ಸ್‌ ಕೂಟದ ಆಕರ್ಷಣೆ ಇನ್ನಷ್ಟು ಕಡಿಮೆಯಾಗಿದೆ.

ಈಗಾಗಲೇ ನಂ.1 ಆಟಗಾರ ನೊವಾಕ್‌ ಜೊಕೋವಿಕ್‌, 2018ರ ಚಾಂಪಿಯನ್‌ ನವೋಮಿ ಒಸಾಕಾ, 23 ಗ್ರ್ಯಾನ್‌ಸ್ಲಾಮ್‌ಗಳ ಒಡತಿ ಸೆರೆನಾ ವಿಲಿಯಮ್ಸ್‌ ಕೂಡ ಹಿಂದೆ ಸರಿದಿದ್ದಾರೆ.

ಇದನ್ನೂ ಓದಿ:ಕಾಬೂಲ್ ಮಸೀದಿಯಲ್ಲಿ ಬಾಂಬ್ ಸ್ಫೋಟ: ಇಬ್ಬರು ಸಾವು, ಹಲವರಿಗೆ ಗಾಯ

Advertisement

ಸೋಮವಾರದಿಂದ ಆರಂಭವಾಗಲಿರುವ ಈ ಪಂದ್ಯಾವಳಿ ಅ. 17ರ ತನಕ ಸಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next