Advertisement

ಡೋಪಿಂಗ್‌: ಟೆನಿಸಿಗ ಆರ್ಯಾನ್‌ ಫೇಲ್‌

12:30 AM Feb 16, 2019 | |

ಹೊಸದಿಲ್ಲಿ: ಭಾರತದ ಯುವ ಟೆನಿಸಿಗ ಆರ್ಯಾನ್‌ ಭಾಟಿಯ “ರಾಷ್ಟ್ರೀಯ ಡೋಪಿಂಗ್‌ ಏಜೆನ್ಸಿ’ (ನಾಡಾ)ನಡೆಸಿದ ಉದ್ದೀಪನಾ ಪರೀಕ್ಷೆಯಲ್ಲಿ ವಿಫ‌ಲರಾಗಿದ್ದಾರೆ. ಈ ಮೂಲಕ ಆರ್ಯಾನ್‌ ಉದ್ದೀಪನಾ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ಭಾರತ ಮೊದಲ ಟೆನಿಸಿಗ ಎನಿಸಿಕೊಂಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ ನಡೆದ “ಫೆನೆಸ್ಟಾ ಓಪನ್‌ ನ್ಯಾಶನಲ್‌ ಟೆನಿಸ್‌ ಚಾಂಪಿಯನ್‌ಶಿಪ್‌’ ವೇಳೆ 16ರ ಹರೆಯದ ಆರ್ಯನ್‌ ಅವರ ಮೂತ್ರದ ಮಾದರಿಯನ್ನು ತೆಗೆದುಕೊಳ್ಳಲಾಗಿತ್ತು. ಮಾದರಿ ಪರೀಕ್ಷೆಯ ಬಳಿಕ ಅವರು ಉದ್ದೀಪನಾ ಔಷಧಗಳನ್ನು ಸೇವಿಸಿರುವುದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next