Advertisement

ಭಾರತದ ಚುನಾವಣೆಯಲ್ಲಿ ಮತ್ತೆ; ಮೂಗು ತೂರಿಸಿದ ಪಾಕ್‌ ನಾಯಕ!

11:19 PM May 25, 2024 | Team Udayavani |

ಹೊಸದಿಲ್ಲಿ: ಭಾರತದ ಚುನಾವಣ ವಿಚಾರದಲ್ಲಿ ಪಾಕ್‌ ಮಾಜಿ ಸಚಿವ ಚೌಧರಿ ಫ‌ವಾದ್‌ ಹುಸೇನ್‌ ಮತ್ತೆ ಮೂಗು ತೂರಿಸಿದ್ದಾರೆ. ಜತೆಗೆ ಅದಕ್ಕೆ ತಕ್ಕಂತೆ ಛೀಮಾರಿಯನ್ನೂ ಎದುರಿಸಿದ್ದಾರೆ.

Advertisement

ಶನಿವಾರ ಮತದಾನ ಮಾಡಿದ ಬಳಿಕ, ಕುಟುಂಬದೊಂದಿಗೆ ಫೋಟೊ ತೆಗೆಸಿಕೊಂಡ ದಿಲ್ಲಿ ಸಿಎಂ ಕೇಜ್ರಿವಾಲ್‌, ಆ ಫೋಟೋಟ್ವೀಟ್‌ ಮಾಡಿದ್ದರು. ಇದಕ್ಕೆ ಪಾಕಿಸ್ಥಾನ ಮಾಜಿ ಸಚಿವ ಹುಸೇನ್‌ ಪ್ರತಿಕ್ರಿಯಿಸಿ, “ದ್ವೇಷ ಹಾಗೂ ತೀವ್ರವಾದದ ವಿರುದ್ಧ ಶಾಂತಿ ಹಾಗೂ ಸಾಮರಸ್ಯ ಜಯಗಳಿಸಲಿ’ ಎಂದು ಬರೆದಿದ್ದಾರೆ. ಹುಸೇನ್‌ ಟ್ವೀಟ್‌ಗೆ ಕೂಡಲೇ ಸರಣಿ ಟ್ವೀಟ್‌ ಮೂಲಕ ತಿರುಗೇಟು ಕೊಟ್ಟ ಕೇಜ್ರಿವಾಲ್‌, “ನಮ್ಮ ದೇಶದ ಸಮಸ್ಯೆ ನಿಭಾಯಿಸಲು ನಾವು ಸಮರ್ಥರಿದ್ದೇವೆ. ನಿಮ್ಮ ಟ್ವೀಟ್‌ನ ಆವಶ್ಯಕತೆಯಿಲ್ಲ. ಪಾಕಿಸ್ಥಾನದಲ್ಲಿ ಈಗ ಪರಿಸ್ಥಿತಿ ಸರಿಯಿಲ್ಲ. ಈ ಚುನಾವಣೆ ನಮ್ಮ ಆಂತರಿಕ ವಿಚಾರ. ಇದರಲ್ಲಿ ಭಯೋತ್ಪಾದನೆಯ ಪ್ರಾಯೋಜಕರ ಹಸ್ತಕ್ಷೇಪವನ್ನು ಭಾರತ ಸಹಿಸುವುದಿಲ್ಲ’ ಎಂದು ಬರೆದುಕೊಂಡಿದ್ದಾರೆ.

ಇದೇ ವಿಚಾರವೆತ್ತಿ ವಿಪಕ್ಷಗಳ ವಿರುದ್ಧ ವಾಗ್ಧಾಳಿ ಆರಂಭಿಸಿದ ಬಿಜೆಪಿ, “ರಾಹುಲ್‌, ಕೇಜ್ರಿವಾಲ್‌ಗೆ ಪಾಕ್‌ ಭರಪೂರ ಬೆಂಬಲ ಏಕೆ ಸಿಗುತ್ತಿದೆ? ಇದು ಗಂಭೀರ ಸಮಸ್ಯೆ’ ಎಂದಿದೆ. ಇತ್ತೀಚೆಗೆ ರಾಹುಲ್‌ ಟ್ವೀಟ್‌ಗೂ ಫ‌ವಾದ್‌ ಹುಸೇನ್‌ ಪ್ರತಿಕ್ರಿಯಿಸಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next