Advertisement

ಸರಕಾರಗಳ ಕೊಲೆಗಾರ; ಬಿಜೆಪಿಯಿಂದ ಜಿಎಸ್‌ಟಿ ದುಡ್ಡು ದುರ್ಬಳಕೆ: ಕೇಜ್ರಿವಾಲ್‌

12:55 AM Aug 27, 2022 | Team Udayavani |

ನವದೆಹಲಿ: ವರ್ಷಾಂತ್ಯದಲ್ಲಿ ಗುಜರಾತ್‌ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿಯೇ ನವದೆಹಲಿಯಲ್ಲಿ ಸಿಬಿಐ ದಾಳಿ ನಡೆಸಲಾಗಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಬಿಜೆಪಿ ಸರ್ಕಾರಗಳ ಸರಣಿ ಕೊಲೆಗಾರ ಎಂದು ದೂರಿದರು.

Advertisement

ಶುಕ್ರವಾರ ನಡೆದ ವಿಧಾನಸಭೆಯ ವಿಶೇಷ ಅಧಿವೇಶನದಲ್ಲಿ ಮಾತನಾಡಿದ ಅವರು, ವಿಧಾನಸಭೆಯಲ್ಲಿ ಶೀಘ್ರವೇ ಅವಿಶ್ವಾಸ ಗೊತ್ತುವಳಿ ಮಂಡಿಸುವುದಾಗಿಯೂ ಮುಖ್ಯಮಂತ್ರಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿಯ “ಆಪರೇಷನ್‌ ಕಮಲ’ ವಿಫ‌ಲಗೊಂಡಿದೆ ಎಂಬ ಅಂಶವನ್ನು ಸಾಬೀತು ಮಾಡುವುದಾಗಿ ಹೇಳಿಕೊಂಡಿದ್ದಾರೆ.
ಸರ್ಕಾರಗಳನ್ನು ಪತನಗೊಳಿಸುವ ಬಿಜೆಪಿ ಸರಣಿ ಕೊಲೆಗಾರ. ಆತ ಈಗ ನಗರಕ್ಕೆ ಆಗಮಿಸಿ ಆಪ್‌ ಸರ್ಕಾರವನ್ನು ಗುರಿ ಮಾಡಿದ್ದಾನೆ ಎಂದು ಲಘುವಾಗಿ ಛೇಡಿಸಿದ್ದಾರೆ.

ಹಲವು ರಾಜ್ಯಗಳ ಸರ್ಕಾರಗಳನ್ನು ಬಿಜೆಪಿ ಪತನಗೊಳಿಸಿದೆ. ಇತ್ತೀಚಿನ ವರ್ಷಗಳಲ್ಲಿ ಬಿಜೆಪಿ 277 ಶಾಸಕರನ್ನು ಖರೀದಿಸಿದೆ ಎಂದು ಸಿಎಂ ಕೇಜ್ರಿವಾಲ್‌ ಆರೋಪಿಸಿದ್ದಾರೆ. ಇದಕ್ಕೆಲ್ಲ ಹಣ ಎಲ್ಲಿಂದ ಬಂತು ಎಂದು ಪ್ರಶ್ನೆ ಮಾಡಿದ ಅವರು, ಜಿಎಸ್‌ಟಿಯಿಂದ ಸಂಗ್ರಹವಾಗಿರುವ ಮೊತ್ತವನ್ನು ಅದಕ್ಕೇ ಬಳಕೆ ಮಾಡಿದೆ ಎಂದು ಆರೋಪಿಸಿದರು,

ಏನೂ ಸಿಗಲಿಲ್ಲ:
ದೆಹಲಿ ಡಿಸಿಎಂ ಮನೀಶ್‌ ಸಿಸೋಡಿಯಾ ಅವರ ಮನೆಗೆ ಸಿಬಿಐ ದಾಳಿ ಮಾಡಿತು. ಆದರೆ, ಅವರಿಗೆ 25 ಪೈಸೆಯೂ ಸಿಗಲಿಲ್ಲ. ನಂತರ ಬಿಜೆಪಿಯವರು ಸಿಸೋಡಿಯಾ ಅವರಿಗೆ ನಮ್ಮ ಪಕ್ಷಕ್ಕೆ ಬನ್ನಿ ಮತ್ತು ಪ್ರತಿ ಶಾಸಕರಿಗೆ 20 ಕೋಟಿ ರೂ. ನೀಡುವ ಆಮಿಷ ಮಾಡಿದರು ಎಂದು ಆರೋಪಿಸಿದರು.

ಮದ್ಯದಲ್ಲೇ ಕೆಲಸ:
ಕೇಜ್ರಿವಾಲ್‌ ನೇತೃತ್ವದ ಸರ್ಕಾರ ಶಿಕ್ಷಣ ಕ್ಷೇತ್ರದಲ್ಲಿ ಭಾರಿ ಕ್ರಾಂತಿ ಮಾಡಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ, ಅವರ ಕೆಲಸಗಳಲ್ಲವೂ ಮದ್ಯದಲ್ಲಿ ಎಂದು ಕೇಂದ್ರ ವಾರ್ತಾ ಸಚಿವ ಅನುರಾಗ್‌ ಠಾಕೂರ್‌ ಆರೋಪಿಸಿದ್ದಾರೆ. ಆಪ್‌ ಸರ್ಕಾರ ಪಾಠ ಶಾಲೆಗಳನ್ನು ತೆರೆದಿದೆ ಎಂದು ಹೇಳಿಕೊಳ್ಳುತ್ತಿದೆ. ಆದರೆ ಅದು ಮಧು ಶಾಲೆ (ಮದ್ಯದಂಗಡಿ) ತೆರೆದಿದೆ. ಅಬಕಾರಿ ಹಗರಣ ಕೇಜ್ರಿವಾಲ್‌ ನೇತೃತ್ವದ ಪಕ್ಷದ ನೈಜತೆಯನ್ನು ಬಯಲು ಮಾಡಿದೆ ಎಂದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next