ಕುಲು: ನಮಗೆ ರಾಜಕೀಯ ಗೊತ್ತಿಲ್ಲ. ನಾವು ರಾಜಕೀಯ ಮಾಡಲು ಬಂದಿಲ್ಲ. ನಮ್ಮ ಪಯಣ ಅಣ್ಣಾ ಹಜಾರೆ ಚಳವಳಿಯಿಂದ ಆರಂಭವಾಯಿತು ಮತ್ತು ನಂತರ ನಾವು ಪಕ್ಷವನ್ನು ಸ್ಥಾಪಿಸಿದ್ದೇವೆ ಎಂದು ದೆಹಲಿ ಸಿಎಂ ಮತ್ತು ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಶನಿವಾರ ಹೇಳಿಕೆ ನೀಡಿದ್ದಾರೆ.
ಪಂಜಾಬ್ ಸಿಎಂ ಭಗವಂತ್ ಮಾನ್ ಅವರೊಂದಿಗೆ ಹಿಮಾಚಲ ಪ್ರದೇಶದ ಕುಲುವಿನಲ್ಲಿ ರೋಡ್ ಶೋ ನಡೆಸಿ ಮಾತನಾಡಿದ ಅವರು, ಭ್ರಷ್ಟಾಚಾರವನ್ನು ದೇಶದಿಂದ ತೊಡೆದುಹಾಕಲು ನಾವು ಪ್ರತಿಜ್ಞೆ ಮಾಡಿದ್ದೇವೆ. 1 ನೇ, ನಾವು ದೆಹಲಿಯಲ್ಲಿ ಭ್ರಷ್ಟಾಚಾರವನ್ನು ಕೊನೆಗೊಳಿಸಿದ್ದೇವೆ ಮತ್ತು ನಂತರ ಅದನ್ನು ಪಂಜಾಬ್‌ನಲ್ಲಿ ಪ್ರಾರಂಭಿಸಿದ್ದೇವೆ ಎಂದರು.
ಇದನ್ನೂ ಓದಿ : ಚೆನ್ನೈ ಭಾರೀ ಗಾಳಿ-ಮಳೆ; ಕಾರಿನ ಮೇಲೆ ಮರ ಉರುಳಿ ಬಿದ್ದು ಮಹಿಳೆ ಸಾವು, ಇಬ್ಬರಿಗೆ ಗಾಯ
ಒಬ್ಬ ಸಿಎಂ ತನ್ನದೇ ಸಂಪುಟದ ಸಚಿವನನ್ನೇ ಜೈಲಿಗೆ ಕಳುಹಿಸಿರುವ ಬಗ್ಗೆ ನೀವು ಎಂದಾದರೂ ಕೇಳಿದ್ದೀರಾ? ಭಗವಂತ್ ಮಾನ್ ಸಾಹಬ್ ಅವರ ಆರೋಗ್ಯ ಸಚಿವ ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಕಂಡುಹಿಡಿದರು. ವಿರೋಧ ಪಕ್ಷಗಳು, ಮಾಧ್ಯಮಗಳಿಗೆ ತಿಳಿದಿರಲಿಲ್ಲ. ಅವರು ಬಯಸಿದ್ದರೆ, ಅದನ್ನು ಮುಚ್ಚಿ ಹಾಕಬಹುದಿತ್ತು ಬಹುದಿತ್ತು ಅಥವಾ ತನ್ನ ಪಾಲನ್ನು ಕೇಳಬಹುದುದಿತ್ತು, ಆದರೆ ಅವರು ಅವರನ್ನು ಜೈಲಿಗೆ ಕಳುಹಿಸಿದರು ಎಂದು ಕೇಜ್ರಿವಾಲ್ ಹಾಡಿ ಹೊಗಳಿದರು.
ಇಲಾಖೆಯ ಯೋಜನೆಗಳಲ್ಲಿ ಪಾಲು ತೆಗೆದುಕೊಂಡ ಆರೋಪದ ಮೇಲೆ ರಾಜ್ಯದ ಆರೋಗ್ಯ ಸಚಿವ ವಿಜಯ್ ಸಿಂಗ್ಲಾ ಅವರನ್ನು ಮಾನ್ ವಜಾಗೊಳಿಸಿದ್ದರು. ಸಿಂಗ್ಲಾರನ್ನು ಪಂಜಾಬ್ ಪೊಲೀಸರು ಬಂಧಿಸಿದ್ದರು.