Advertisement
ಈ ಕುರಿತು ಹೇಳಿಕೆ ನೀಡಿದ ಅವರು ದೆಹಲಿ ಸರ್ಕಾರವನ್ನು ಕೆಡವಲು ದೊಡ್ಡ ಮಟ್ಟದ ಪಿತೂರಿ ನಡೆಸಲಾಗುತ್ತಿದೆ ಜೊತೆಗೆ ನಮ್ಮ ಪಕ್ಷದ ಏಳು ಶಾಸಕರಿಗೆ ಭಾರತೀಯ ಜನತಾ ಪಕ್ಷಕ್ಕೆ ಸೇರಲು 25 ಕೋಟಿ ರೂಗಳ ಆಮಿಷ ಒಡ್ಡಲಾಗಿದೆ ಎಂದು ಶನಿವಾರ ಹೇಳಿದ್ದಾರೆ.
ಇದರ ಮುಂದುವರೆದ ಭಾಗವಾಗಿ ಆಪ್ ನ ಇಪ್ಪತ್ತೊಂದು ಶಾಸಕರನ್ನು ಬಿಜೆಪಿ ಸಂಪರ್ಕ ಮಾಡಿದ್ದು ಅವರಿಗೆ ೨೫ ಕೋಟಿ ಆಮಿಷ ನೀಡಲಾಗಿದೆ. ಬಿಜೆಪಿಗೆ ಸೇರಿದ ಶಾಸಕರಿಗೆ ಪಕ್ಷದಿಂದ ಮುಂಬರುವ ಚುನಾವಣೆಯಲ್ಲಿ ಟಿಕೆಟ್ ನೀಡಲಾಗುವುದು ಎಂದು ಬಿಜೆಪಿ ಹೇಳಿಕೊಂಡಿದೆ ಎಂದು ಕೇಜ್ರಿವಾಲ್ ಆರೋಪಿಸಿದ್ದಾರೆ. ಬಿಜೆಪಿ ಸಂಪರ್ಕಿಸಿದ ಏಳು ಶಾಸಕರು ಬಿಜೆಪಿ ಸೇರಲು ನಿರಾಕರಿಸಿದ್ದಾರೆ ಎಂದು ಹೇಳಿದ್ದಾರೆ. ಇದರಿಂದಲೇ ಅರ್ಥವಾಗುತ್ತೆ ಇಡಿ ಅಧಿಕಾರಿಗಳು ನನಗೆ ನೀಡಿದ ಸಮನ್ಸ್ ಹಿಂದೆ ಯಾರ ಕೈವಾಡ ಇದೆ ಎಂಬುದು ಇದು ಕೇವಲ ನನ್ನ ವಿಚರೆಣೆಗೆ ಅಲ್ಲ ಬದಲಾಗಿ ನನ್ನನ್ನು ಚುನಾವಣೆಯಿಂದ ದೂರ ಉಳಿಯುವಂತೆ ಮಾಡಲು ಬಿಜೆಪಿ ಯತ್ನ ಮಾಡುತ್ತಿದೆ ಎಂದು ಹೇಳಿದ್ದಾರೆ.
Related Articles
Advertisement