Advertisement

ಅರುಣಾಚಲಪ್ರದೇಶ ಭಾರತದ್ದು: ಅಮೆರಿಕ ಘೋಷಣೆ!

09:05 PM Jul 14, 2023 | Team Udayavani |

ಸ್ಯಾನ್‌ ಫ್ರಾನ್ಸಿಸ್ಕೊ: ಅರುಣಾಚಲಪ್ರದೇಶ ಭಾರತ ಅಧಿಕೃತ ಭಾಗವೆಂದು ಅಮೆರಿಕದ ಸೆನೇಟ್‌-ಕಾಂಗ್ರೆಸ್‌ ಸಮಿತಿ ಅಧಿಕೃತ ನಿರ್ಣಯ ಮಾಡಿದೆ. ಇದನ್ನು ಮುಂದೆ ಸೆನೆಟ್‌ನಲ್ಲಿ ಮಂಡಿಸಿ ಮತಕ್ಕೆ ಹಾಕಲಾಗುತ್ತದೆ. ಅದೇನೇ ಇದ್ದರೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಭಾರೀ ಜಯವೊಂದು ಸಿಕ್ಕಿದೆ. ಸಂಸತ್‌ ಸದಸ್ಯರಾದ ಜೆಕ್‌ ಮೆಕ್ಲೆ, ಬಿಲ್‌ ಹೆಗೆಟ್ರಿ, ಟಿಮ್‌ ಕೈನ್‌ ಮತ್ತು ಕ್ರಿಸ್‌ ವ್ಯಾನ್‌ ಹೊಲ್ಲೆನ್‌ ಅವರು ಈ ನಿರ್ಣಯ ಮಂಡಿಸಿದ್ದಾರೆ.

Advertisement

ಇದರಿಂದಾಗಿ ಭಾರತ-ಅಮೆರಿಕದ ಹೊಸ ಸ್ನೇಹಯಾನದಲ್ಲಿ ಮತ್ತೂಂದು ಮೈಲುಗಲ್ಲು ನಿರ್ಮಾಣಕ್ಕೆ ಕಾರಣವಾಗಿದೆ. ಮೋದಿ ಅಮೆರಿಕಕ್ಕೆ ಭೇಟಿ ನೀಡಿ ಇನ್ನೂ ತಿಂಗಳಾಗಿಲ್ಲ ಅನ್ನುವಷ್ಟರಲ್ಲೇ ಅಮೆರಿಕ ಇಂತಹದ್ದೊಂದು ಅಧಿಕೃತ ಪ್ರಕಟಣೆ ಮಾಡಿದೆ. ಇದರ ಮೂಲಕ ಮೆಕ್‌ವೊàಹನ್‌ ರೇಖೆಯೇ ಚೀನಾ ಮತ್ತು ಅರುಣಾಚಲಪ್ರದೇಶದ ನಡುವಿನ ಗಡಿರೇಖೆ ಎಂದು ಅದು ಅಂಗೀಕರಿಸಿದೆ. ಸದ್ಯ ಚೀನಾ ಆಕ್ರಮಣಕಾರಿಯಾಗಿ ಅರುಣಾಚಲ ಪ್ರದೇಶವನ್ನು ತನ್ನದು ಎಂದು ಹೇಳಿಕೊಳ್ಳುತ್ತಿದೆ. ಸದಾ ಈ ಭಾಗದಲ್ಲಿ ಚೀನಾ ಸೇನೆ ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಅಮೆರಿಕದ ಈ ಬೆಂಬಲ ಚೀನಾಕ್ಕೆ ಇರಿಸುಮುರಿಸು ಉಂಟು ಮಾಡುವುದು ಖಚಿತ.

Advertisement

Udayavani is now on Telegram. Click here to join our channel and stay updated with the latest news.

Next