“ದಾದಾ ಈಸ್ ಬ್ಯಾಕ್’ ಚಿತ್ರದ ಸೋಲಿನ ನಂತರ ಆ ಚಿತ್ರದ ನಾಯಕ ಅರುಣ್, ಇನ್ನೊಂದು ಚಿತ್ರ ಮಾಡುವುದಕ್ಕೆ ಸಜ್ಜಾಗಿದ್ದಾರೆ. ಈ ಬಾರಿ ಅವರು ನಾಯಕರಷ್ಟೇ ಅಲ್ಲ, ನಿರ್ದೇಶಕರು ಕೂಡಾ. “ಓಲ್ಡ್ ಮದ್ರಾಸ್ ರೋಡ್’ ಎಂಬ ಚಿತ್ರದಲ್ಲಿ ಅವರು ನಟಿಸುತ್ತಿರುಮದಷ್ಟೇ ಅಲ್ಲ, ಆ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ ಕಥೆ, ಚಿತ್ರಕಥೆ ಸಹ ಅವರಿದ್ದಾರೆ.
“ಓಲ್ಡ್ ಮದ್ರಾಸ್ ರೋಡ್’ ಎಂಬ ಹೆಸರು ಕೇಳುತ್ತಿದ್ದಂತೆಯೇ, ಬೆಂಗಳೂರಿನ ಇನ್ನೊಂದು ಮತ್ತು ಅತೀ ಪುರಾತನ ಏರಿಯಾಗಳ ನೆನಪಾಗುತ್ತದೆ. ಅರುಣ್ ಸಹ ಅದೇ ಕಥೆಯನ್ನು ಹೇಳುಮದಕ್ಕೆ ಹೊರಟಿದ್ದಾರಂತೆ. “ಪಶ್ಚಿಮ ಬೆಂಗಳೂರಲ್ಲಿ ಇದುವರೆಗೂ ಯಾರೂ ಕ್ಯಾಮೆರಾ ಇಟ್ಟಿಲ್ಲ. ಇಲ್ಲಿ ಹಲಸೂರು, ಕೆ.ಆರ್. ಪುರಂ, ಇಂದಿರಾನಗರ ಮುಂತಾದ ಹಲವು ಪ್ರದೇಶಗಳಿವೆ.
ಅಲ್ಲಿ ನೀಗ್ರೋಗಳು, ತಮಿಳರ ಪ್ರಾಬಲ್ಯ ಹೆಚ್ಚಿದೆ. ಅಲ್ಲಿ ಎಷ್ಟೋ ಜನರಿಗೆ ಕನ್ನಡಿಗರಿದ್ದಾರೆ ಅಂತಲೇ ಅನೇಕರಿಗೆ ಗೊತ್ತಿಲ್ಲ. ಅವರ ಸಮಸ್ಯೆಗಳೇನು, ಅವರ ಪಾಡೇನು ಯಾರಿಗೂ ಗೊತ್ತಿಲ್ಲ. ಅಲ್ಲಿ ನಡೆದ ಒಂದು ನೈಜ ಘಟನೆಯನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇನೆ. ಸುಮಾರು ಒಂದು ವರ್ಷದಿಂದಲೇ ಸ್ಕ್ರಿಪ್ಟ್ ಕೆಲಸ ನಡೆಯುತ್ತಿದೆ. ಈಗ ಸಂಪೂರ್ಣವಾಗಿದ್ದು, ಸದ್ಯದಲ್ಲೇ ಚಿತ್ರೀಕರಣಕ್ಕೆ ಹೋಗಬೇಕು ಎನ್ನುತ್ತಾರೆ “ಗೊಂಬೆಗಳ ಲವ್’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅರುಣ್.
ಈ ಚಿತ್ರಕ್ಕೆ ಅವರೇ ಹೀರೋ ಎಂದು ಈಗಾಗಲೇ ಹೇಳಿದ್ದಾಗಿದೆ. ಅದಲ್ಲದೆ ಒಂದಿಷ್ಟು ಪ್ರಮುಖ ಪಾತ್ರಗಳಿವೆಯಂತೆ ಮತ್ತು ಅವುಗಳನ್ನು ಶ್ರುತಿ ಹರಿಹರನ್, ರಿಷಬ್ ಶೆಟ್ಟಿ, ಬಾಲು ನಾಗೇಂದ್ರ ಮುಂತಾದವರಿಂದ ಮಾಡಿಸಬೇಕು ಎಂದು ಅವರು ಹೊರಟಿದ್ದಾರೆ. ಈಗಾಗಲೇ ಒಂದು ಹಂತದ ಮಾತುಕಥೆಯಾಗಿದೆ. ಸದ್ಯದಲ್ಲೇ ಪಕ್ಕಾ ಆಗಲಿದೆ.
ಇನ್ನು ಈ ಚಿತ್ರವನ್ನು ಲಕ್ಷ್ಮೀಯೋಗಿ ಕ್ರಿಯೇಷನ್ಸ್‌ನಡಿ ಸೂರ್ಯ ಮತ್ತು ಅವರ ಸ್ನೇಹಿತರು ನಿರ್ಮಿಸುತ್ತಿದ್ದಾರೆ. ಇನ್ನು ಚಿತ್ರಕ್ಕೆ “ರಾಮ ರಾಮಾ ರೇ’ ಖ್ಯಾತಿಯ ಲವಿತ್ ಅವರ ಛಾಯಾಗ್ರಹಣ, “ಕಿನಾರೆ’ಗೆ ಸಂಗೀತ ಸಂಯೋಜಿಸಿದ್ದ ಸುರೇಂದ್ರನಾಥ್ ಮತ್ತು “ಮಮ್ಮಿ ಐ ಲವ್ ಯು’ ಚಿತ್ರಕ್ಕೆ ಸಂಕಲನ ಮಾಡಿದ್ದ ರವಿಚಂದ್ರನ್ ಸಂಕಲನ ಮಾಡುತ್ತಿದ್ದಾರತೆ. ಡಿಸೆಂಬರ್ ಎರಡನೆಯ ವಾರದಿಂದ ಚಿತ್ರ ಶುರುವಾಗುವ ಸಾಧ್ಯತೆ ಇದೆ.