ಬೆಂಗಳೂರು: ಬಿಜೆಪಿ ರಾಜ್ಯ ಪದಾಧಿಕಾರಿಗಳ ಸಭೆ ಮಂಗಳವಾರ ನಡೆಯಲಿದ್ದು, ಇದರಲ್ಲಿ ಪಾಲ್ಗೊಳ್ಳಲು ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ಸೋಮವಾರ ರಾತ್ರಿ ನಗರಕ್ಕೆ ಬಂದಿಳಿದರು.
ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯದಲ್ಲಿ ಪಕ್ಷ ಸದೃಢಗೊಳಿಸಿ ಮುಂದಿನ ಚುನಾವಣೆ ಗೆಲ್ಲುವ ಕುರಿತು ರಾಜ್ಯ ಪದಾಧಿಕಾರಿಗಳ ಸಭೆ ಹಾಗೂ ಕೋರ್ ಕಮಿಟಿಯಲ್ಲಿ ಚರ್ಚಿಸಲಾಗುವುದು. ನಳಿನ್‌ಕುಮಾರ್ ಕಟೀಲು ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದು, ಅವರ ಬದಲಾವಣೆ ಬಗ್ಗೆ ಕಾಂಗ್ರೆಸ್ ವದಂತಿ ಹಬ್ಬಿಸುತ್ತಿದೆ ಎಂದರು.
ಕಾಂಗ್ರೆಸ್ ಪಕ್ಷವು ಜನರ ಪರವಾಗಿ ಕೆಲಸ ಮಾಡುತ್ತಿಲ್ಲ. ದೇಶದಲ್ಲಿ ಕಾಂಗ್ರೆಸ್ ಅಸ್ತಿತ್ವ ಕಳೆದುಕೊಳ್ಳುತ್ತಿದೆ. ಸಿಂದಗಿಯಲ್ಲಿ ನಾವು 31 ಸಾವಿರ ಅಂತರದಿಂದ ಗೆದ್ದಿದ್ದೇವೆ. ಹಾನಗಲ್‌ನಲ್ಲಿ ಕಡಿಮೆ ಅಂತರದಿಂದ ಸೋತಿದ್ದೇವೆ. ಎಲ್ಲರೂ ಶ್ರಮ ಹಾಕಿದ್ದು, ಬಿಜೆಪಿಗೆ ಹಿನ್ನೆಡೆಯಾಗಿಲ್ಲ ಎಂದರು.
ಇದನ್ನೂ ಓದಿ:ರಫೇಲ್ ಕಿಕ್‌ಬ್ಯಾಕ್ ತನಿಖೆ ನಡೆಸದಿರಲು ಸಿಬಿಐ ನಿರ್ಧಾರ: ಹೊಸ ವರದಿಯಲ್ಲಿ ಆರೋಪ
ರಾಜ್ಯ ಪದಾಧಿಕಾರಿಗಳ ಸಭೆ ಬಳಿಕ ಕೋರ್ ಕಮಿಟಿ ಸಭೆ ನಡೆಯಲಿದ್ದು, ಜನ ಸ್ವರಾಜ್ ಯಾತ್ರೆ ರೂಪುರೇಷೆ, ಸಂಪುಟ ವಿಸ್ತರಣೆ ವಿಚಾರ ಪ್ರಸ್ತಾವವಾಗುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.