Advertisement

ನರಿಕೊಂಬು: ಕಲಾರಾಧನೆ ಕಾರ್ಯಕ್ರಮ

04:20 PM Jan 10, 2018 | |

ಬಂಟ್ವಾಳ: ಯಾವುದೇ ಕಲೆಯನ್ನು ಆರಾಧಿಸಿದರೆ ಮಾತ್ರ ಅದು ಸಿದ್ಧಿಸುತ್ತದೆ. ಮಕ್ಕಳು ಯಕ್ಷಗಾನದ ಮಾಧುರ್ಯವನ್ನು ಕರಗತ ಮಾಡಿಕೊಳ್ಳಬೇಕು ಎಂದು ಎಂದು ಭಾಗವತ, ಪಟ್ಲ ಫೌಂಡೇಶನ್‌ನ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಹೇಳಿದರು. ಜ.7 ರಂದು ನರಿಕೊಂಬು ಅಂತರ ಶ್ರೀ ಕೋದಂಡ ರಾಮ ಭಜನ ಮಂದಿರ ವಠಾರದಲ್ಲಿ ಶ್ರೀ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರ ಮತ್ತು ಕೀರ್ತನಾ ಸಂಗೀತ ಶಾಲೆಯ ಕಲಾರಾಧನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

Advertisement

ಕರ್ನಾಟಕ ಬ್ಯಾಂಕ್‌ ಅಧ್ಯಕ್ಷ ಪಿ. ಜಯರಾಮ ಭಟ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕರಾವಳಿ ನಾಡಿನ ಹೆಮ್ಮೆಯ ಕಲೆಯಾದ ಯಕ್ಷಗಾನವು ಸರ್ವಾಂಗೀಣ ಕಲೆ ಯಾಗಿದ್ದು, ಇದೇ ಭಾಗದಲ್ಲಿ ಹುಟ್ಟಿದ ಕರ್ನಾಟಕ ಬ್ಯಾಂಕ್‌ ಯಕ್ಷಗಾನವನ್ನು ಸದಾ ಪ್ರೋತ್ಸಾಹಿಸುತ್ತದೆ ಎಂದರು. ಎಲ್ಲ ಕಲೆಗಳ ಗುರಿ ಅಂತಿಮವಾಗಿ ಅಧ್ಯಾತ್ಮದತ್ತ ಮನುಷ್ಯನನ್ನು ಸೆಳೆಯುವುದೇ ಆಗಿದೆ ಎಂದರು.

ಕೋದಂಡರಾಮ ಭಜನ ಸಂಘದ ಗೌರವಾಧ್ಯಕ್ಷ, ನ್ಯಾಯವಾದಿ ರವಿವರ್ಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಚಂದ್ರಹಾಸ ರೈ ಮತ್ತು ವೈದಿಕ ಪ್ರತಿಷ್ಠಾನದ ಪೊಳಳಿ ವೆಂಕಪ್ಪಯ್ಯ ಭಟ್‌ ಉಪಸ್ಥಿತರಿದ್ದರು.

ಸಮ್ಮಾನ, ಪುರಸ್ಕಾರ
ಗುರು ಮಾಂಬಾಡಿ ಸುಬ್ರಹ್ಮಣ್ಯ ಭಟ್‌ ಅವರನ್ನು ಸಮ್ಮಾನಿಸಲಾಯಿತು. ಉದಯೋನ್ಮುಖ ಕಲಾವಿದ ಚಿನ್ಮಯ ಭಟ್‌ ಕಲ್ಲಡ್ಕ ಅವರಿಗೆ ಯುವ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ 2017 ರ ಕಲೋತ್ಸವದಲ್ಲಿ ಕಿಷ್ಕಿಂಧಾ ಕೌತುಕ ಯಕ್ಷನಾಟಕ ಪ್ರದರ್ಶಿಸಿ ಪ್ರಥಮ ಸ್ಥಾನ ವಿಜೇತರಾಗಿ ರಾಷ್ಟ್ರೀಯ ಪುರಸ್ಕಾರ ಪಡೆದ ಶಂಭೂರಿನ ಬೊಂಡಾಲ ಜಗನ್ನಾಥ ಶೆಟ್ಟಿ ಸ್ಮಾರಕ ಪ್ರೌಢಶಾಲೆಯನ್ನು ಹಾಗೂ ಈ ಯಕ್ಷನಾಟಕದಲ್ಲಿ ಪಾತ್ರಧಾರಿಗಳಾಗಿದ್ದ ಮಹಮ್ಮಾಯಿ ಯಕ್ಷಗಾನ ಕಲಾಕೇಂದ್ರದ ವಿದ್ಯಾರ್ಥಿಗಳಿಗೆ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.

ಕಲಾಕೇಂದ್ರದ ಅಧ್ಯಕ್ಷ ಕೃಷ್ಣರಾಜ ಭಟ್‌ ಸ್ವಾಗತಿಸಿ, ಡಾ| ಸುಬ್ರಹ್ಮಣ್ಯ ಭಟ್‌ ವಂದಿಸಿದರು. ಶಿಕ್ಷಕ ಬಿ. ರಾಮಚಂದ್ರ ರಾವ್‌ ಕಾರ್ಯಕ್ರಮ ನಿರೂಪಿಸಿದರು. ಬಳಿಕ ತೆಂಕುತಿಟ್ಟು ಯಕ್ಷಗಾನ ಹಿಮ್ಮೇಳ ಮತ್ತು ಮುಮ್ಮೇಳ ವಿದ್ಯಾರ್ಥಿಗಳಿಂದ ಪೂರ್ವರಂಗ ಪ್ರಸ್ತುತಿ ಮತ್ತು ಸೀತಾ ಕಲ್ಯಾಣ ಯಕ್ಷಗಾನ ಪ್ರದರ್ಶಿತಗೊಂಡಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next