Advertisement

‘ಚಂದಮಾಮ’ದ ಜನಪ್ರಿಯ ‘ವಿಕ್ರಮ-ಬೇತಾಳ’ದ ಚಿತ್ರ ಕಲಾವಿದ ಕೆ.ಸಿ. ಶಿವಶಂಕರ್ ನಿಧನ

01:16 PM Sep 30, 2020 | Hari Prasad |

ಚೆನ್ನೈ: ಟಿ.ವಿ. ಕಾರ್ಟೂನ್ ಗಳು, ಮೊಬೈಲ್ ಫೋನ್ ಮತ್ತು ಇಂಟರ್ನೆಟ್ ಗಳೇ ಇಲ್ಲದಿದ್ದ ಸಂದರ್ಭದಲ್ಲಿ ಆ ಕಾಲದ ಮಕ್ಕಳ ಬಾಲ್ಯವನ್ನು ಪೌರಾಣಿಕ, ನೀತಿ ಭರಿತ ಚಿತ್ರಕಥೆಗಳಿಂದ ಪ್ರೇರೇಪಿಸುತ್ತಿದ್ದ ಚಿತ್ರ ಕಲಾವಿದ ಕೆ. ಸಿ. ಶಿವಶಂಕರ್ ಅವರು ನಿಧನರಾಗಿದ್ದಾರೆ.

Advertisement

ಶಿವಶಂಕರ್ ಅವರಿಗೆ 97 ವರ್ಷ ವಯಸ್ಸಾಗಿತ್ತು. ತಮ್ಮ 50 ವರ್ಷಗಳ ಚಿತ್ರಕಲಾ ಜೀವನದಲ್ಲಿ ಶಿವಶಂಕರ್ ಅವರು ಹಲವಾರು ಕಾರ್ಟೂನ್ ಚಿತ್ರಗಳನ್ನು ರಚಿಸಿದ್ದರು.

ಅದರಲ್ಲಿ ಬಹಳ ಜನಪ್ರಿಯವಾಗಿದ್ದಿದ್ದು ‘ಚಂದಮಾಮ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ‘ವಿಕ್ರಮ ಮತ್ತು ಬೇತಾಳ’ಕ್ಕೆ ಶಿವಶಂಕರ್ ಅವರು ರಚಿಸುತ್ತಿದ್ದ ಜೀವಂತವೆಣಿಸುವ ರೀತಿಯ ಚಿತ್ರಗಳು.

ಆ ಕಾಲಘಟ್ಟದಲ್ಲಿ ‘ವಿಕ್ರಮ ಬೇತಾಳ’ದ ಚಿತ್ರಗಳಿಗೆ ಮನಸೋತು ಅವುಗಳನ್ನು ನಿಜ ಪಾತ್ರಗಳೆಂದೇ ಭ್ರಮಿಸಿ ಕಥೆಗಳನ್ನು ಓದುತ್ತಿದ್ದ ನೆನಪುಗಳು ನಮ್ಮೆಲ್ಲರ ಮನದಲ್ಲಿ ಇನ್ನೂ ಹಸಿರಾಗಿದ್ದರೆ ಅದಕ್ಕೆ ಪ್ರಮುಖ ಕಾರಣ ಶಿವಶಂಕರ್ ಅವರ ಕೈಯಲ್ಲಿ ಮೂಡಿಬರುತ್ತಿದ್ದ ಪರಿಣಾಮಕಾರಿ ಚಿತ್ರಗಳೆಂದರೆ ತಪ್ಪಾಗಲಾರದು.

‘ಚಂದಮಾಮ’ ಅಥವಾ ‘ಅಂಬುಲಿಮಾಮ’ ಎಂದೇ ಹೆಸರುವಾಸಿಯಾಗಿದ್ದ ಮಕ್ಕಳ ಕಾರ್ಟೂನ್ ಪತ್ರಿಕೆಯಲ್ಲಿ ಇವರು ರಚಿಸುತ್ತಿದ್ದ ವಿವಿಧ ಕಾರ್ಟೂನ್ ಗಳು ಆ ಕಾಲದ ಮಕ್ಕಳ ಅಚ್ಚುಮೆಚ್ಚಾಗಿತ್ತು.

Advertisement

ಬೇತಾಳನನ್ನು ಬೆನ್ನ ಮೇಲೆ ಹೊತ್ತುಕೊಂಡು ಬಲ ಕೈಯಲ್ಲಿ ಕತ್ತಿಯನ್ನು ಹಿಡಿದುಕೊಂಡ ರಾಜಾ ವಿಕ್ರಮಾದಿತ್ಯನ ಆ ಗಂಭೀರ ಮುಖಭಾವದ ಚಿತ್ರದ ಹಿಂದಿದ್ದ ಕೈ ಶಿವಶಂಕರ್ ಅವರದ್ದೇ ಆಗಿತ್ತು. ಜನಪ್ರಿಯ ‘ವಿಕ್ರಮ – ಬೇತಾಳ’ ಸರಣಿಯ ಸಿಗ್ನೇಚರ್ ಚಿತ್ರದಂತೆ ಈ ಒಂದು ಚಿತ್ರ ನಮ್ಮೆಲ್ಲರ ಮನಸ್ಸಿನಲ್ಲಿ ಇಂದಿಗೂ ಅಚ್ಚೊತ್ತಿದಂತಿದೆ.

Advertisement

Udayavani is now on Telegram. Click here to join our channel and stay updated with the latest news.

Next