Advertisement
ಬೈಕಂಪಾಡಿಯಿಂದ ಚಿತ್ರಾಪುರ ದೇವಸ್ಥಾನಕ್ಕೆ ಹೋಗುವ ಮುಖ್ಯ ದ್ವಾರದಿಂದ ದುರ್ಗಾಪರಮೇಶ್ವರೀ ದೇವಸ್ಥಾನದವರೆಗೆ ರಸ್ತೆಯ ಎಡ ಭಾಗದಲ್ಲಿ ಹಾದು ಹೋಗುವ ಬೈಲಾರೆ ತೋಡಿಗೆ ಕಸ ಕಡ್ಡಿ ಮಿಶ್ರಿತ ಮಣ್ಣು ಸುರಿಯಲಾಗುತ್ತಿದೆ. ಇದರಿಂದ ತೋಡು ಕಿರಿದಾಗಿ ಕೃತಕ ನೆರೆ ಬರುವ ಸಾಧ್ಯತೆ ಇದೆ.
ಸುರತ್ಕಲ್, ಇಡ್ಯಾ, ಹೊಸಬೆಟ್ಟು, ಕುಳಾಯಿ, ಹೊನ್ನಕಟ್ಟೆ, ಬೈಕಂಪಾಡಿ, ಚಿತ್ರಾಪುರದ ಪಶ್ವಿಮ ದಿಕ್ಕಿನಲ್ಲಿ ಇರುವಂತಹ ಬಡಾವಣೆಗಳಾದ ರಿಜೆಂಟ್ ಪಾರ್ಕ್, ನವನಗರ, ತಾವರೆ ಕೊಳ, ಲೋಟಸ್ ಪಾರ್ಕ್, ದುರ್ಗಾಂಬಾ ಲೇಔಟ್, ಬೆಂಗಳೂರು ಸ್ಟೀಲ್ ರೋಡ್ ಬಡಾವಣೆ, ದುರ್ಗಾ ನಗರ, ಆಚಾರ್ಯ ಬಡಾವಣೆ, ಕಕ್ಕೆ ಸಾಲು ಬಡಾವಣೆ, ಗೋಕುಲ ನಗರ, ಸುಭಾಶ್ಚಂದ್ರ ನಗರ, ಹೊನ್ನಕಟ್ಟೆ ಪಶ್ಚಿಮ ದಿಕ್ಕಿನ ಬಡಾವಣೆ, ಹೆಬ್ಟಾರ್ ಕಾಂಪೌಂಡ್ ಮತ್ತು ಕುಳಾಯಿ, ಬೈಕಂಪಾಡಿ ಪ್ರದೇಶದ ಬೈಲಾರ ಜಾಗದಲ್ಲಿ ಒಟ್ಟು ಸುಮಾರು 750 ಮನೆಗಳಿಗೆ ಕೃತಕ ನೆರೆಯಿಂದ ತೊಂದರೆ ಉಂಟಾಗುವ ಸಾಧ್ಯತೆಯಿದೆ. ಇಡ್ಯಾ, ಸುರತ್ಕಲ್‌ನಿಂದ ಬೈಕಂಪಾಡಿ ಸಮುದ್ರದವರೆಗೆ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿದುಹೋಗಲು ವ್ಯವಸ್ಥೆ ಅಗತ್ಯ.ಇಲ್ಲದಿದ್ದಲ್ಲಿ ಈ ಸಮಸ್ಯೆಯಿಂದ ಬೈಲಾರ ಪ್ರದೇಶ ಈ ಸಲ ಮುಳುಗುವುದು ಖಚಿತ. ತೋಡಿನ ಒತ್ತುವರಿ ತಡೆಯಿರಿ
ಕೆಲವೆಡೆ ತ್ಯಾಜ್ಯ ಮಣ್ಣು ತುಂಬಿಸಿ ಈ ತೋಡಿನ ಮತ್ತೂಂದು ಭಾಗವನ್ನು ಕಿರಿದು ಗೊಳಿಸಲಾಗುತ್ತಿದೆ. ಇದನ್ನು ತತ್‌ಕ್ಷಣ ತಡೆಯಬೇಕು. ಇಲ್ಲದಿದ್ದಲ್ಲಿ ಈ ಬಾರಿ ಮಳೆಗಾಲದಲ್ಲಿ ಇಲ್ಲಿನ ನಿವಾಸಿಗಳು ಮತ್ತೆ ನೆರೆ ನೀರಿನ ಸಮಸ್ಯೆ ಎದುರಿಸುವಂತಾಗುತ್ತದೆ.
- ವಿಶ್ವೇಶ್ವರ ಭಟ್ ಬದವಿದೆ,
ಬೈಲಾರೆ ಹಿತರಕ್ಷಣಾ ಸಮಿತಿ
Related Articles
ಬೈಲಾರೆ ಪ್ರದೇಶದ ತೋಡನ್ನು ಶುಚಿತ್ವಗೊಳಿಸುವ ಕಾರ್ಯವನ್ನು ಮಳೆಗಾಲಕ್ಕೆ ಮುನ್ನ ಆರಂಭಿಸಲಾಗುವುದು.
ಪಾಲಿಕೆಯ ಜೇಸಿಬಿ ಬಳಸಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲಾಗುವುದು. ಮಳೆ ನೀರು
ಹರಿದು ಹೋಗುವ ತೋಡುಗಳಿಗೆ ಯಾವುದೇ ತ್ಯಾಜ್ಯ ತುಂಬಿಸದಂತೆ ಕ್ರಮ ಕೈಗೊಳ್ಳಲಾಗುವುದು. ಬೈಲಾರೆ ತೋಡನ್ನು ಆಯುಕ್ತರು ಪರಿಶೀಲಿಸಿ ಸೂಕ್ತ ಕ್ರಮಕ್ಕೆ ಈಗಾಗಲೇ ಆದೇಶಿಸಿದ್ದಾರೆ.
– ಖಾದರ್,
ಎಂಜಿನಿಯರ್, ಮನಪಾ
Advertisement