ಇನ್ನು ಮುಂದೆ ಹೊಸ ಸಂಸತ್ ಅನ್ನು ಪ್ರವೇಶಿಸಲು ಹೈಟೆಕ್ ಮತ್ತು ಅತ್ಯಾಧುನಿಕ ಫೇಶಿಯಲ್ ಆರ್ಟಿಫಿಶಿಯಲ್ ಇಂಟೆಲಿಜನ್ಸ್ ರೆಕಗ್ನಿಶನ್ ಸಾಧನಗಳ ಮೂಲಕ ಹಾದುಹೋಗುವುದು ಅನಿವಾರ್ಯ. ಈಗಾಗಲೇ ಈ ತಂತ್ರಜ್ಞಾನ ಆಧಾರಿತ ಸಾಧನಗಳನ್ನು ಸಂಸತ್‌ನ ದ್ವಾರಗಳಿಗೆ ಅಳವಡಿಸಲಾಗಿದೆ.
Advertisement
ಕೇಂದ್ರ ಸಚಿವರು, ಸಂಸದರು, ಉನ್ನತ ಅಧಿಕಾರಿಗಳ ಸ್ಕ್ಯಾನ್ ವಿವರಗಳನ್ನು ಈಗಾಗಲೇ ಪಡೆಯಲಾಗಿದೆ. ನೂತನ ಸಂಸತ್ ಭವನ ಕಟ್ಟಡದಿಂದ ಆರು ಮೀಟರ್ ದೂರದಲ್ಲಿ ಇರುವಾಗಲೇ ಸಾಧನವು ಇವರ ಮುಖವನ್ನು ಗುರಿತಿಸಿ, ಬಾಗಿಲನ್ನು ತೆರೆಯಲಿದೆ. ಒಂದು ವೇಳೆ ಈ ಸಾಧನ ಕೆಟ್ಟು ಹೋದ ಸಂದರ್ಭದಲ್ಲಿ ಹೆಬ್ಬೆಟ್ಟು ಗುರುತು ಅಥವಾ ವಿಶಿಷ್ಟ ಪಿನ್ ಸಹಾಯದಿಂದ ದ್ವಾರಗಳು ತೆರೆಯಲಿವೆ.
ನಿಗದಿತ ಪ್ರದೇಶಗಳಿಗೆ ಪ್ರವೇಶಕ್ಕಾಗಿ ಭದ್ರತಾ ವಿಭಾಗದಿಂದ ಅನುಮತಿ ಪಡೆದ ಸಿಬ್ಬಂದಿ ಮಾತ್ರ ಪ್ರವೇಶ ಪಡೆಯುವಂತೆ ಸ್ಮಾರ್ಟ್‌ಕಾರ್ಡ್ ಆಪರೇಟಿಂಗ್ ಸಿಸ್ಟಮ್ ಫಾರ್ ಟ್ರಾನ್ಸ್‌ಪೊರ್ಟ್ ಅಫ್ಲಿಕೇಶನ್ಸ್ ಆಧಾರಿತ ಸ್ಮಾರ್ಟ್‌ಕಾರ್ಡ್‌ಗಳನ್ನು ನೀಡಲಾಗುತ್ತದೆ. ಈ ತಂತ್ರಜ್ಞಾನವನ್ನು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಅಡಿಯಲ್ಲಿ ಬರುವ ಸೆಂಟರ್ ಫಾರ್ ಡೆವಲ್ಮೆಂಟ್ ಆಫ್ ಅಡ್ವಾನ್ಸ್$x ಕಂಪ್ಯೂಟಿಂಗ್(ಸಿಡಿಎಸಿ) ಅಭಿವೃದ್ಧಿಪಡಿಸುತ್ತಿದೆ. ಈ ಎಲ್ಲಾ ಸಾಧನಗಳನ್ನು ಸ್ಥಳೀಯ ನಾವಿಗೇಶನ್ ಸಿಸ್ಟಮ್ ಅಥವಾ ನೂತನ ಸಂಸತ್ ಕಟ್ಟಡಕ್ಕಾಗಿಯೇ ಅಭಿವೃದ್ಧಿಸಿರುವ ಮೊಬಿಲಿಟಿ ಆ್ಯಪ್‌ನೊಂದಿಗೆ ಸಂಯೋಜಿಸಲಾಗಿದೆ.
Related Articles
10 ವರ್ಷಗಳಿಗೂ ಹೆಚ್ಚಿನ ಅವಧಿಗೆ ಸಂಸತ್ ಭವನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗೆ ಸೆಂಟ್ರಲ್ ಹಾಲ್ ಪ್ರವೇಶಿಸಲು ಅವಕಾಶ ಕಲ್ಪಿಸಲಾಗುತ್ತದೆ. ಅಲ್ಲದೇ ಹೊಸ ವ್ಯವಸ್ಥೆಯ ಪ್ರಕಾರ, ಮೀಡಿಯಾ ಕಾರ್ಡ್ ಹೊಂದಿದವರಿಗೆ ಕ್ಯಾಂಟಿನ್ ಮತ್ತು ಫೆಸಿಲಿಟಿ ರೂಮ್ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಹೊರಗಿನವರಿಗೆ ಮೂರು ಆರ್ಟ್ ಗ್ಯಾಲರಿಗಳಿಗೆ ಪ್ರವೇಶಕ್ಕೆ ಅವಕಾಶವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Advertisement