ಸಿರುಗುಪ್ಪ: ತಾಲೂಕಿನ ಬಗ್ಗೂರು ಮತ್ತು ಇತರೆ ಗ್ರಾಮಗಳಿಗೆ ಕುಡಿಯುವನೀರು ಪೂರೈಕೆ ಮಾಡುವ ಕೆರೆಯಲ್ಲಿ ನಗರದ ಆದೋನಿ ಮತ್ತುಅರಳಿಗನೂರು ಕ್ರಾಸ್‌ನ ರಸ್ತೆಯ ರೈಸ್‌ಮಿಲ್‌ಗಳ ಹಾರುಬೂದಿಯುಬೀಳುತ್ತಿದ್ದು, ಇದರಿಂದಾಗಿ ಕೆರೆಯ ನೀರು ಕಲುಷಿತಗೊಂಡಿದೆ.ಈ ನೀರನ್ನು μಲ್ಟರ್‌ನಲ್ಲಿ ಶುದ್ಧೀಕರಣಗೊಳಿಸಿದರೂ ನೀರು ಹಳದಿಬಣ್ಣಕ್ಕೆ ತಿರುಗಿದ್ದು, ಗ್ರಾಮಸ್ಥರು ಈ ನೀರನ್ನು ಕುಡಿಯಲು ಹಿಂದೇಟುಹಾಕುತ್ತಿದ್ದಾರೆ.
ಬಗ್ಗೂರು ಬಹುಗ್ರಾಮ ಕುಡಿಯುವ ನೀರಿನ ಕೆರೆಯು ನಗರದರೈಸ್‌ಮಿಲ್‌ಗಳ ಸಮೀಪವೇ ನಿರ್ಮಾಣವಾಗಿದ್ದು, ಕೆರೆಯಸುತ್ತುಮತ್ತಲು 30ಕ್ಕೂ ಹೆಚ್ಚು ರೈಸ್‌ಮಿಲ್‌ಗಳಿದ್ದು, ಈ ರೈಸ್‌ಮಿಲ್‌ಗಳುಹೊರಸೂಸುವ ಬೂದಿಯು ನಿರಂತರವಾಗಿ ಕೆರೆಯ ನೀರಿಗೆ ಬಂದುಬೀಳುತ್ತಿರುವುದರಿಂದ ಕೆರೆಯ ನೀರು ಕಲುಷಿತವಾಗಲು ಪ್ರಮುಖಕಾರಣವಾಗಿದೆ.
ರೈಸ್‌ಮಿಲ್‌ಗಳು ಹೊರಸೂಸುವ ಬೂದಿಯನ್ನು ನಿಯಂತ್ರಿಸಲುಆಧುನಿಕ ತಂತ್ರಜ್ಞಾನದ ಯಂತ್ರವನ್ನು ಪ್ರತಿಯೊಂದು ರೈಸ್‌ಮಿಲ್‌ಗಳು ಅಳವಡಿಸಬೇಕು. ಯಾವುದೇ ಕಾರಣಕ್ಕೂ ರೈಸ್‌ಮಿಲ್‌ಗಳಿಂದಹಾರು ಬೂದಿ ಹೊರಬರಬಾರದು ಎನ್ನುವ ನಿಯಮವಿದ್ದರೂ ಆನಿಯಮವನ್ನು ಬಹುತೇಕ ರೈಸ್‌ಮಿಲ್‌ಗಳ ಮಾಲೀಕರು ಪಾಲಿಸದಕಾರಣ ಹಾರುಬೂದಿ ಮಿಲ್‌ಗಳಿಂದ ಹೊರಬರುತ್ತಿದ್ದು, ಕುಡಿಯುವನೀರಿನ ಕೆರೆಗೆ ಬಂದು ಸೇರುತ್ತಿರುವುದರಿಂದ ಈ ನೀರನ್ನು ಕುಡಿದರೆಜನರ ಆರೋಗ್ಯದ ಮೇಲೆ ಅಡ್ಡಪರಿಣಾಮ ಬೀರಬಹುದು ಎನ್ನುವಕಾರಣದಿಂದ ಗ್ರಾಮಸ್ಥರು ಕೆರೆಯ ನೀರನ್ನು ಕುಡಿಯಲು ಬಳಕೆಮಾಡುತ್ತಿಲ್ಲ.
ಆದರೆ ಇತರೆ ಮನೆ ಬಳಕೆ ಕಾರ್ಯಕ್ಕೆ ಕೆರೆ ನೀರನ್ನುಬಳಸುತ್ತಿದ್ದಾರೆ. ಬಗ್ಗೂರು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವಬಗ್ಗೂರು, ಚಾಣಕನೂರು, ಕರ್ಚಿಗನೂರು, ಶ್ರೀನಗರ ಕ್ಯಾಂಪ್,ವೆಂಕಟೇಶ್ವರ ಕ್ಯಾಂಪ್‌ಗೆ ನೀರೊದಗಿಸುವ ಉದ್ದೇಶದಿಂದ ಬಹುಗ್ರಾಮಕುಡಿಯುವ ನೀರಿನ ಯೋಜನೆಯಡಿ ಕುಡಿಯುವ ನೀರಿನ ಕೆರೆಯನ್ನುನಿರ್ಮಾಣ ಮಾಡಲಾಗಿದೆ.
ಆದರೆ ಜನರಿಗೆ ಕೆರೆಯಿಂದ ಶುದ್ಧಕುಡಿಯುವ ನೀರೊದಗಿಸಲು ಪ್ರತಿವರ್ಷ ಲಕ್ಷಾಂತರ ರೂ. ಸರ್ಕಾರವೆಚ್ಚ ಮಾಡುತ್ತಿದೆ. ಆದರೆ ರೈಸ್‌ಮಿಲ್‌ಗಳ ಹಾರುಬೂದಿ ಕೆರೆ ನೀರಿಗೆಸೇರುತ್ತಿರುವುದರಿಂದ ನೀರು ಕಲುಷಿತಗೊಂಡಿದ್ದು, ಕುಡಿಯುಲುಯೋಗ್ಯವೇ ಇಲ್ಲವೆ ಎನ್ನುವ ಆತಂಕ ಗ್ರಾಮಸ್ಥರಲ್ಲಿದೆ.ನಮ್ಮೂರಿಗೆ ಕುಡಿಯುವ ನೀರೊದಗಿಸುವ ಕೆರೆಗೆ ಸಿರುಗುಪ್ಪರೈಸ್‌ಮಿಲ್‌ಗಳ ಹಾರುಬೂದಿ ಬಂದು ಬೀಳುತ್ತಿದ್ದು, ಕೆರೆ ನೀರುಕಲುಷಿತವಾಗಿದೆ. ಫಿಲ್ಟರ್ ಮಾಡಿದರೂ ನೀರಿನ ಬಣ್ಣ ಹಳದಿಯಾಗಿದೆ.ಈ ನೀರು ಕುಡಿಯಲು ಯೋಗ್ಯವೇ ಎನ್ನುವುದರ ಬಗ್ಗೆ ಸಂಬಂ ಧಿಸಿದಇಲಾಖೆಯ ಅ ಧಿಕಾರಿಗಳು ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದುಗ್ರಾಮಸ್ಥರು ಆರೋಪಿಸಿದ್ದಾರೆ
ಆರ್.ಬಸವರೆಡ್ಡಿ ಕರೂರು