Advertisement

ಜೀವಕೊಟ್ಟ ಬೆಲೆಯನ್ನು ಗೌರವಿಸೋಣ

03:19 PM May 10, 2021 | Team Udayavani |

ಒಂದು ಊರಿನಲ್ಲಿ ಒಬ್ಬ ತಾಯಿ ಅವಳಿಗೆ ಒಬ್ಬ ಮಗನಿ ರುತ್ತಾನೆ. ಆ ತಾಯಿಗೆ ಮಗನೇ ಜೀವ ಅವನ ಬಿಟ್ಟು ಬೇರೆ ಪ್ರಪಂಚವೇ ಇರುವುದಿಲ್ಲ. ಮಗನಿಗೆ ಏನು ಕೊರತೆ ಬಾರದಿರುವ ಹಾಗೆ ಬೆಳೆಸುವುದು ಅವಳ ಆಸೆಯಾಗಿತ್ತು.

Advertisement

ಅದೇ ರೀತಿ ಬೆಳೆಸುವ ಸಲುವಾಗಿ ಸಾಲ ಮಾಡಿ ಇಂಗ್ಲಿಷ್‌ ಮೀಡಿಯಂ ಶಾಲೆಗೆ ಕಳುಹಿಸುತ್ತಾಳೆ. ಆದರೆ ಪಾಪ ಆ ತಾಯಿಗೆ ಒಂದು ಕಣ್ಣು ಇರುವುದಿಲ್ಲ. ಅದಕ್ಕಾಗಿ ಎಲ್ಲರೂ ಅವಳನ್ನು ಅಸೂಯೆ ಭಾವದಿಂದ ನೋಡುತ್ತಿದ್ದರು. ಮಗನನ್ನು ಶಾಲೆಗೆ ಬಿಟ್ಟು ಬರಲು ಹೋದಾಗ ಅಲ್ಲಿದ್ದ ಹುಡುಗರು ಒಂಟ್ಟಿ ಕಣ್ಣು ಎಂದು ಅಪಹಾಸ್ಯ ಮಾಡುತಿದ್ದರು.

ಅವಳ ಮಗನ ಹೆಸರು ರಾಮು. ಹುಡುಗರೆಲ್ಲ “ಹೇ.. ರಾಮು ನಿನ್ನ ತಾಯಿ ಕುರುಡಿ’ ಎಂದಾಗ ಅವನಿಗೆ ತುಂಬಾ ನೋವಾಗುತ್ತಿತ್ತು. ರಾಮು ನನ್ನ ತಾಯಿ ಜತೆ ಇದ್ದರೆ ನನ್ನ ಗೌರವಕ್ಕೆ ಧಕ್ಕೆ ಬರುತ್ತದೆ ಎಂದು ತಾಯಿ ಇಂದ ದೂರ ಉಳಿಯುತ್ತಾನೆ.

ಆ ಕಡೆ ತಾಯಿಗೆ ಮಗನದೇ ಚಿಂತೆ, ಇತ್ತ ಹಾಸ್ಟೆಲ್‌ನಲ್ಲಿ ತಾಯಿಯನ್ನು ಮರೆತು ಚೆನ್ನಾಗಿ ಓದಿ ರ್‍ಯಾಂಕ್‌ ಪಡೆಯುತ್ತಾನೆ. ಅನಂತರ ದಿಲ್ಲಿಗೆ ಹೋಗಿ ದೊಡ್ಡ ಆಫೀಸರ್‌ ಆಗಿ ಅಲ್ಲದೇ ಕೆಲಸ ಮಾಡುತ್ತಾನೆ. ಅಲ್ಲದೇ ದೊಡ್ಡ ಉದ್ಯಮಿಯ ಮಗಳನ್ನು ಮದುವೆಯಗುತ್ತಾನೆ. ಅನಂತರ ಎರಡು ಮಕ್ಕಳು ಜನಿಸುತ್ತವೆ. ಈ ವೇಳೆಗೆ ಹಳ್ಳಿಯಲ್ಲಿದ್ದ ತಾಯಿಗೆ ಮಗನದೇ ಚಿಂತೆ. ಪ್ರತೀ ದಿನ ಸೊರಗಿ ಮಗನ ಬಹಳ ದಿನದ ಅಗಲಿಕೆ ಸಹಿಸಲಾಗದೇ ಮಗನನ್ನು ನೋಡಬೇಕೆಂದು ಹುಂಡಿಯಲ್ಲಿ ಇದ್ದ ಹಣ ತೆಗೆದುಕೊಂಡು ದಿಲ್ಲಿಗೆ ಪ್ರಯಾಣ ಮಾಡುತ್ತಾಳೆ.

ಪಾಪ ಆ ತಾಯಿ ಒಂದು ವಾರ ಅಡ್ರೆಸ್‌ ಹುಡುಕುತ್ತಾ ಊಟವಿಲ್ಲದೆ ಕಣ್ಣಿಗೆ ನಿದ್ದೆ ಇಲ್ಲದೆ ಬಿಸಿಲಲ್ಲಿ ಅಲೆದಾಡುತ್ತಾಳೆ. ಕೊನೆಗೆ ಮಗನ ಅಡ್ರೆಸ್‌ ತಿಳಿದು ಅವನ ಮನೆಯ ಗೇಟಿನ ಬಳಿ ಹೋಗುತ್ತಾಳೆ. ಇವಳನ್ನು ನೋಡಿದ ಮಗನಿಗೆ ಆಶ್ಚರ್ಯವಾಗುತ್ತದೆ ಮತ್ತು ಕೋಪ ಕೂಡ ಬರುತ್ತದೆ. ಅಲ್ಲದೇ ವರಾಂಡದಲ್ಲಿ ಅವನ ಮಕ್ಕಳು ಆಡುತ್ತಿರುತ್ತಾರೆ. ಅವನು ಬಂದವನೇ “ಏಯ್‌ ಮುದುಕಿ ನಿನ್ನ ಕುರುಪ ರೂಪವನ್ನು ಕಂಡು ನನ್ನ ಮಕ್ಕಳು ಹೆದರುತ್ತಾರೆ. ಮೊದಲು ಇಲ್ಲಿಂದ ತೊಲಗು’ ಎಂದು ಹೊರಗೆ ತಳ್ಳುತ್ತಾನೆ.

Advertisement

ನೆಲದಲ್ಲಿ ಬಿದ್ದ ತಾಯಿ “ತಪ್ಪಾಯಿತು ಕ್ಷಮಿಸಿಬಿಡು. ದಾರಿ ಗೊತ್ತಾಗದೆ ಬಂದೆ’ ಎಂದು ಕೈಮುಗಿದು ಮಗನನ್ನು ಕೇಳಿ ತನ್ನ ಹಳ್ಳಿ ಕಡೆ ಬರುತ್ತಾಳೆ. ಹಳ್ಳಿಗೆ ಬಂದ ಕೆಲವೇ ದಿನಗಳಲ್ಲಿ ಆ ತಾಯಿ ಸಾಯುತ್ತಾಳೆ. ಕೆಲವು ದಿನಗಳ ಅನಂತರ ಮಗ ಬೆಂಗಳೂರಿಗೆ ಮೀಟಿಂಗ್‌ಗೆ ಬರುತ್ತಾನೆ. ತನ್ನ ಹಳ್ಳಿಯ ನೆನಪಾಗಿ ಕಾರು ತೆಗೆದುಕೊಂಡು ತನ್ನ ಮನೆಗೆ ಬರುತ್ತಾನೆ. ಆಗ ಅಲ್ಲಿ ಯಾರೂ ಇರುವುದಿಲ್ಲ. ಮನೆಪಕ್ಕದ ಹೆಂಗಸನ್ನು ವಿಚಾರಿಸಿದಾಗ ಅವನಿಗೆ ಅವಳು ಒಂದು ಕಾಗದ ಕೊಡುತ್ತಾಳೆ.

ಅದರಲ್ಲಿ ಹೀಗಿತ್ತು “ನನ್ನನ್ನು ಕ್ಷಮಿಸಿಬಿಡಿ ಬದುಕಿರುವವರೆಗೂ ಈ ವಿಷಯ ಹೇಳಬಾರದು ಎಂದು ಕೊಂಡಿದ್ದೆ ಆದರೆ ಈಗ ಹೇಳುತ್ತೇನೆ. ನೀನು ಚಿಕ್ಕವನಿದ್ದಾಗ ನಿನಗೆ ಅಪಘಾತದಲ್ಲಿ ಒಂದು ಕಣ್ಣು ಹೋಗಿತ್ತು. ವೈದ್ಯರ ಬಳಿ ಹೋದಾಗ ಬೇರೆಯವರ ಕಣ್ಣು ತತ್‌ಕ್ಷಣ ಹಾಕಬೇಕು ಎಂದರು. ಆಗ ನನ್ನ ಮಗ ಬಾಳಿ ಬದುಕ ಬೇಕಾದವನು ಎಂದು ಅದಕ್ಕಾಗಿ ನನ್ನ ಕಣ್ಣು ತೆಗೆದು ನಿನಗೆ ಹಾಕಿಸಿದ್ದಾರೆ. ಆದರೆ ನೀನು ಅದೇ ಕಾರಣದಿಂದ ನನ್ನನ್ನು ದೂರ ಮಾಡಿದೆ. ನನ್ನ ಮನಸ್ಸಿಗೆ ಬಹಳ ನೋವು ಆದರೂ ಸಹಿತ ನನಗೆ ನಿನ್ನ ಮೇಲೆ ಯಾವುದೇ ತರ ಕೋಪ ಇಲ್ಲ ಮತ್ತು ನಿನ್ನನ್ನು ನನ್ನ ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಯಿಂದ ನೋಡುತ್ತೇನೆ. ಆದರೆ ನೀನು ಯಾವುದೇ ಕಾರಣಕ್ಕೂ ಅಳಬಾರದು ನೀನು ಯಾವಾಗಲೂ ಸಂತೋಷದಿಂದ ಇರಬೇಕು. ಒಂದೇ ಒಂದು ಸಲ ಅಮ್ಮ ಎಂದು ಕರೆಯಪ್ಪ ದಯವಿಟ್ಟು. ಓದು ಮುಗಿದ ತತ್‌ಕ್ಷಣ ಮಗ ಅಮ್ಮ ಎಂದು ಅಳಲಾರಂಭಿಸಿದ.

ಇದರ ಆಶಯವೆಂದರೆ ಹಣ, ಅಧಿಕಾರ, ಶಿಕ್ಷಣ ಎಂಬ ಹೆಸರಿನಲ್ಲಿ ನಮ್ಮ ಉಸಿರಾಗಿರುವ ಜೀವಗಳನ್ನು ದೂರಮಾಡುತ್ತವೆ. ಕೊನೆಗೆ ಬದುಕಿರುವವರೆಗೂ ಜೀವಕೊಟ್ಟ ಬೆಲೆ ತಿಳಿದುಕೊಳ್ಳದೆ ಸತ್ತಮೇಲೆ ಗೋಳ್ಳೋ ಎನ್ನುವ ಬದಲು ಅವರನ್ನು ಬದುಕಿದ್ದಾಗಲೇ ಸಂತೋಷದಿಂದ ಇರಲು ಪ್ರಯತ್ನಿಸೋಣ. ನಮ್ಮ ಬದುಕು ರಾಮು ಹಾಗೆ ಆಗುವುದು ಬೇಡ. ಎಚ್ಚರದಿಂದ ನಡೆಯೋಣ.


 -ಭೂಮಿಕಾ ದಾಸರಡ್ಡಿ, ಕಂಠಿ ಕಾಲೇಜು ಮುಧೋಳ 

Advertisement

Udayavani is now on Telegram. Click here to join our channel and stay updated with the latest news.

Next