Advertisement

371ನೇ (ಜೆ) ಕಲಂ ವರದಾನ

10:49 AM Sep 04, 2017 | Team Udayavani |

ಚಿಂಚೋಳಿ: ಮಾಜಿ ಸಚಿವ ವೈಜನಾಥ ಪಾಟೀಲ ಅವರ ಹೋರಾಟದ ಫಲವಾಗಿ ಸಂವಿಧಾನದ 371ನೇ(ಜೆ) ಕಲಂ ತಿದ್ದಪಡಿ ಹೈದರಾಬಾದ ಕರ್ನಾಟಕ ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ವರದಾನವಾಗಿದೆ. ಇದರ ಪರಿಣಾಮದಿಂದಾಗಿ ಚಿಂಚೋಳಿ ಮೀಸಲು ವಿಧಾನಸಭಾ ಮತಕ್ಷೇತ್ರದಲ್ಲಿ ಸಾಕಷ್ಟು ಕೆಲಸಗಳು ಪ್ರಗತಿಯಲ್ಲಿವೆ ಎಂದು ಸಂಸದೀಯ ಕಾರ್ಯದರ್ಶಿ ಡಾ|ಉಮೇಶ ಜಾಧವ ಹೇಳಿದರು.

Advertisement

ಪಟ್ಟಣದ ಸರಕಾರಿ ಪ್ರ‌ಥಮ ದರ್ಜೆ ಕಾಲೇಜಿನಲ್ಲಿ ಕ್ರೀಡೆ, ಸಾಂಸ್ಕೃತಿಕ, ರಾಷ್ಟ್ರೀಯ ಸೇವಾ ಯೋಜನೆ ಹಾಗೂ
ವಿದ್ಯಾರ್ಥಿ ಸಂಘ ಉದ್ಘಾಟಿಸಿ ಅವರು ಮಾತನಾಡಿದರು.

 ಕಲಂ 371ನೇ (ಜೆ) ಜಾರಿಯಿಂದಾಗಿ ಹಿಂದುಳಿದ ಹೈದರಾಬಾದ ಕರ್ನಾಟಕ ಪ್ರದೇಶದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗಿದೆ. ತಾಲೂಕಿನ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ತಮ್ಮ ವಿದ್ಯಾಭ್ಯಾಸಕ್ಕಾಗಿ ಕಲಬುರಗಿ, ಬೀದರ, ಸೇಡಂ, ಯಾದಗಿರಿಗೆ ಹೋಗಬೇಕಾಗಿತ್ತು. ಆರ್ಥಿಕ ಸಮಸ್ಯೆಗಳಿಂದಾಗಿ ಹೋಗಲಾಗದೇ ಮಧ್ಯೆದಲ್ಲಿಯೇ
ಶಿಕ್ಷಣ ಮೊಟಕುಗೊಳಿಸುವಂತಾಗಿತ್ತು. ಇದನ್ನು ಅರಿತು ಸಾವಿರಾರು ಮಕ್ಕಳಿಗೆ ಉತ್ತಮ ಶಿಕ್ಷಣ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು.

ಎಚ್‌ಕೆಆರ್‌ಡಿಬಿ ಅನುದಾನದಿಂದ ಚಿಂಚೋಳಿಯಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ವಿವಿಧ ಸೌಕರ್ಯ ಒದಗಿಸಲು 2
ಕೋಟಿ ರೂ. ಮಂಜೂರು ಮಾಡಲಾಗಿದೆ. ಅಲ್ಲದೇ 11 ಕೋಣೆ ಮತ್ತು ಕಂಪ್ಯೂಟರ್‌, ಡೆಸ್ಕ್, ಅಟದ ಮೈದಾನ, ಪೀಠೊಪಕರಣ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿದೆ ಎಂದು ಹೇಳಿದರು.

ಜಿಪಂ ಸದಸ್ಯ ಗೌತಮ ವೈಜನಾಥ ಪಾಟೀಲ, ಕಾಡಾ ನಿರ್ದೇಶಕ ಕೆ.ಎಂ. ಬಾರಿ ಮಾತನಾಡಿದರು. ತಾಪಂ
ಅಧ್ಯಕ್ಷೆ ರೇಣುಕಾ ಅಶೋಕ ಚವ್ಹಾಣ, ತಾಪಂ ಅಧಿಕಾರಿ ಅನೀಲಕುಮಾರ ರಾಠೊಡ, ವಿಶ್ವಕರ್ಮ ಇದ್ದರು.
ಪ್ರಾಚಾರ್ಯ ಶ್ರೀನಿವಾಸ ನಾಯನೋರ ಸ್ವಾಗತಿಸಿದರು. ಮಂಜುನಾಥ ದೇಶಪಾಂಡೆ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next