Advertisement
ಲಾಲ್ ಚೌಕ್‌ನಿಂದ ಕಾರ್ಗಿಲ್ ಯುದ್ಧ ಭೂಮಿಯವರೆಗೆ ಮೊಟ್ಟಮೊದಲ ಬಾರಿಗೆ ”ತಿರಂಗಾ ಬೈಕ್ ಗಳ ರ್‍ಯಾಲಿ”ಗೆ ಚಾಲನೆ ನೀಡಿ, ಐತಿಹಾಸಿಕ ಕ್ಲಾಕ್ ಟವರ್ ಬಳಿ ಮಾತನಾಡಿದ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಸೂರ್ಯ,”370 ನೇ ವಿಧಿಯು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಏಕೀಕರಣದ ಹಾದಿಯಲ್ಲಿ ಸಾಂವಿಧಾನಿಕ ತಡೆಗೋಡೆ ಮಾತ್ರವಲ್ಲ, ಸಾಂಸ್ಕೃತಿಕ ಮತ್ತು ಮಾನಸಿಕ ಅಡಚಣೆಯಾಗಿತ್ತು. 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ, ಕಾಶ್ಮೀರಕ್ಕೆ ಅಭಿವೃದ್ಧಿ ಬಂದಿತು ಮತ್ತು ಕಣಿವೆಯಲ್ಲಿ ಈಗ ಭಯೋತ್ಪಾದನೆ ಮುಗಿಯುತ್ತಿದೆ” ಎಂದರು.
Related Articles
Advertisement
“ಈಗ, ಈ ಸಾಂವಿಧಾನಿಕ ಏಕೀಕರಣದ ಕೆಲಸವನ್ನು ಮುಂದಕ್ಕೆ ಕೊಂಡೊಯ್ಯುವುದು ಮತ್ತು ಜಮ್ಮು ಮತ್ತು ಕಾಶ್ಮೀರದ ಸಂಪೂರ್ಣ ಸಾಂಸ್ಕೃತಿಕ, ಸಾಮಾಜಿಕ ಮತ್ತು ಆರ್ಥಿಕ ಏಳಿಗೆಯನ್ನು ಮಾಡುವುದು ನಮ್ಮ ಜವಾಬ್ದಾರಿಯಾಗಿದೆ ಎಂದರು.
”ಕಾಶ್ಮೀರದಲ್ಲಿ ಪ್ರವಾಸೋದ್ಯಮ ಮತ್ತು ಭಯೋತ್ಪಾದನೆ ಸಹಬಾಳ್ವೆ ನಡೆಸಲು ಸಾಧ್ಯವಿಲ್ಲ. ಕಾಶ್ಮೀರವು ತನ್ನ ಇತಿಹಾಸದಲ್ಲಿ ಈ ವರ್ಷ ಮಾತ್ರ ಅತಿ ಹೆಚ್ಚು ಪ್ರವಾಸಿಗರನ್ನು ನೋಡಿದೆ. ಪ್ರವಾಸೋದ್ಯಮದಿಂದಾಗಿ ಲಕ್ಷಾಂತರ ಯುವಕರಿಗೆ ಉದ್ಯೋಗಾವಕಾಶಗಳು ದೊರೆತಿವೆ” ಎಂದರು.
“ಕಾಶ್ಮೀರದ ಯುವಕರು ಇಂದು ಭಯೋತ್ಪಾದನೆಯ ವಿರುದ್ಧ ಇದ್ದಾರೆ, ಅದನ್ನು ಕೊನೆಗೊಳಿಸಲು ಮತ್ತು ಪ್ರವಾಸೋದ್ಯಮದಲ್ಲಿ ಹೊಸ ಅವಕಾಶಗಳನ್ನು ಪಡೆಯಲು ಬಯಸುತ್ತಾರೆ ಎಂಬುದನ್ನು ಸಾಬೀತುಪಡಿಸಿದ್ದಾರೆ. ಇದು ಕಾಶ್ಮೀರದ ಯುವಜನರು ಆರಂಭಿಸಿರುವ ಅಭಿವೃದ್ಧಿಯ ಹೊಸ ಪಥವಾಗಿದೆ,” ಎಂದರು.
ಕಾಶ್ಮೀರದಲ್ಲಿ ಹೂಡಿಕೆ ಮಾಡಲು ದೇಶಾದ್ಯಂತದ ಯುವ ಕೈಗಾರಿಕೋದ್ಯಮಿಗಳು, ಉದ್ಯಮಿಗಳು, ಹೂಡಿಕೆದಾರರು ಮತ್ತು ದಾರ್ಶನಿಕರಿಗೆ ಸೂರ್ಯ ಮನವಿ ಮಾಡಿ, ಹೊಸ ಕೈಗಾರಿಕೆಗಳನ್ನು ಪ್ರಾರಂಭಿಸಬೇಕು, ಹೊಸ ಕಾಲೇಜುಗಳು, ವೈದ್ಯಕೀಯ ಶಾಲೆಗಳು, ಕಾಶ್ಮೀರದಲ್ಲಿ ಸ್ಟಾರ್ಟ್‌ಅಪ್‌ಗಳನ್ನು ಸ್ಥಾಪಿಸಬೇಕು.ಕಾಶ್ಮೀರದ ಯುವಕರು ಕಷ್ಟಪಟ್ಟು ದುಡಿಯುತ್ತಿದ್ದಾರೆ, ಬುದ್ಧಿವಂತರಾಗಿದ್ದಾರೆ ಮತ್ತು ಅವಕಾಶಗಳ ಕೊರತೆಯಿಂದಾಗಿ ಅವರು ಪ್ರಗತಿ ಸಾಧಿಸಿಲ್ಲ. ಭಾರತದ ನಾಳೆಯ ಯುನಿಕಾರ್ನ್‌ಗಳು ಕಾಶ್ಮೀರದಿಂದ ಬರಬೇಕು. ದೇಶವನ್ನು ಮುನ್ನಡೆಸಬಲ್ಲ ನಾಯಕರು ಬರಬೇಕು ಎಂದರು.
ಅಂಗಡಿಗಳು ಮುಚ್ಚಲ್ಪಟ್ಟಿವೆ
”ಅಬ್ದುಲ್ಲಾ ಮತ್ತು ಮುಫ್ತಿ ಕುಟುಂಬಗಳ ಸದಸ್ಯರು ವಿವಿಧ ಸಮಯಗಳಲ್ಲಿ ರಾಜ್ಯವನ್ನು ಆಳಿದರು. ಮೆಹಬೂಬಾ ಮುಫ್ತಿ ಅಥವಾ ಒಮರ್ ಅಬ್ದುಲ್ಲಾ ಅವರ ಅಂಗಡಿಗಳು ಮುಚ್ಚಲ್ಪಟ್ಟಿವೆ. ಪ್ರಜಾಪ್ರಭುತ್ವವು ಇಂದು ಪಂಚಾಯತ್ ಮಟ್ಟದಲ್ಲಿ, ತಳಮಟ್ಟದಲ್ಲಿ ಉತ್ಸಾಹದಿಂದ ವಿಜೃಂಭಿಸುತ್ತಿದೆ. ಹಲವು ಯುವ ನಾಯಕರನ್ನು ಭೇಟಿ ಮಾಡಿದ್ದೇನೆ. ಪ್ರತ್ಯೇಕತಾ ಕಾರ್ಯಸೂಚಿಗಿಂತ ರಾಷ್ಟ್ರೀಯತೆಯ ಅಜೆಂಡಾದಲ್ಲಿ ಕೆಲಸ ಮಾಡುವ ಹೊಸ ಪಕ್ಷಗಳು ಇಲ್ಲಿ ಬರುತ್ತಿವೆ” ಎಂದರು.
ಕಾಶ್ಮೀರದಲ್ಲಿ ಪ್ರಜಾಪ್ರಭುತ್ವವನ್ನು ನಾಶಮಾಡಲು ಪಾಕಿಸ್ತಾನಿ ಪ್ರಾಯೋಜಿತ ಶಕ್ತಿಗಳು ಬಿಜೆಪಿಯ ಯುವ ಕಾರ್ಯಕರ್ತರ ಮೇಲೆ ದಾಳಿ ಮಾಡುವುದನ್ನು ಮುಂದುವರೆಸಿದ್ದಾರೆ ಎಂದು ಅವರು ಕಣಿವೆಯಲ್ಲಿ ಉಗ್ರಗಾಮಿಗಳಿಂದ ಹತ್ಯೆಯಾದ ಬಿಜೆಪಿ ಕಾರ್ಯಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.
ಕೊನೆಯಲ್ಲಿ, ಬಿಜೆಪಿ ನಾಯಕ ಪಂಡಿತ್ ದೀನನಾಥ್ ಕೌಲ್ ಅವರ ಯುದ್ಧ-ವಿರೋಧಿ ಕವಿತೆಯ ಕೆಲವು ಪದ್ಯಗಳನ್ನು ಓದಿದರು ‘ನಾಡಿಮ್’ ಇದು “ಹೊಸ ಉದಯ” ಮತ್ತು “ಉತ್ತಮ ಭವಿಷ್ಯದ ಬಗ್ಗೆ ಮಾತನಾಡುತ್ತದೆ” ಎಂದರು.