ಜಮಖಂಡಿ: ಚಿತ್ರ ಕಲಾವಿದರು ರಚಿಸಿದ ಚಿತ್ರಕಲೆ ಪ್ರದರ್ಶನಗಳು ನಗರಗಳಲ್ಲಿ ಮಾತ್ರ ಪ್ರದರ್ಶನ ನಡೆಯುತ್ತಿದ್ದು, ಚಿತ್ರಕಲೆ ಕ್ಷೇತ್ರವನ್ನು ಉಳಿಸಿ-ಬೆಳೆಸಬೇಕಾಗಿದೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು.
ನಗರದ ಮಹೇಶ ಚಿತ್ರಕಲಾ ಮಹಾವಿದ್ಯಾಲಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಕರಿಷ್ಮಾ ಭಂಡೇಬುರುಜ ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು. ಎಫ್.ಎಂ.ಹುಸೇನ್ ಅಂತವರು ಶ್ರೇಷ್ಠ ಕಲಾವಿದರು ತಮ್ಮ ಕುಂಚದಿಂದ ದೇಶ ಇತಿಹಾಸ ತೋರಿಸಿದವರು.
ಅದೇ ಮಾದರಿಯಲ್ಲಿ ನಮ್ಮ ಕಲಾವಿದರು ಬೆಳೆಯಬೇಕು. ಡಿಜಿಟಲ್ ತಂತ್ರಜ್ಞಾನದಿಂದ ಕಲಾವಿದರ ಕಲೆ ಮರೆಯಾಗುತ್ತಿದ್ದು, ಕಲಾವಿದರ ಬದುಕು ಅತಂತ್ರವಾಗಿದೆ. ಕಲೆಯನ್ನು ಉಳಿಸಿ, ಬೆಳೆಸಬೇಕಾಗಿರುವುದು ಕಲಾವಿದ ಸೇರಿದಂತೆ ಎಲ್ಲರ ಕರ್ತವ್ಯವಾಗಬೇಕು ಎಂದರು.
ಕಳೆದ 15 ವರ್ಷಗಳಿಂದ ಸರಕಾರ ಚಿತ್ರಕಲಾ ಶಿಕ್ಷಕರ ಕುರಿತು ಗಮನಹರಿಸುತ್ತಿಲ್ಲ. ಖಾಲಿ ಇರುವ ಹುದ್ದೆ ತುಂಬಿಕೊಳ್ಳುವ ಬಗ್ಗೆ ಚಿಂತಿಸುತ್ತಿಲ್ಲ ಸರಕಾರದ ಮೇಲೆ ಒತ್ತಡ ಹಾಕಿ ಚಿತ್ರಕಲಾ ಶಿಕ್ಷಕರ ಬಗ್ಗೆ ಮತ್ತು ಮಕ್ಕಳ ಅನಾನುಕೂಲತೆ ಕುರಿತು ಸರಕಾರದ ಸೌಲಭ್ಯಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಜಮಖಂಡಿ ನಗರ ಸುಂದರವಾಗಿಸಲು ನಿಟ್ಟಿನಲ್ಲಿ ಕಾಲೇಜಿನ ಎಲ್ಲ ಕಲಾವಿದ ವಿದ್ಯಾರ್ಥಿಗಳು ಗೋಡೆ ಬರಹ, ಚಿತ್ರಗಳ ಬಿಡಿಸಿ ಕೈ ಜೋಡಿಸಬೇಕು ಎಂದರು.
ವಿಜಯಪುರದ ಕಲಾವಿದ ನಿವೃತ್ತ ಪ್ರಾಚಾರ್ಯ ಪಿ.ಎಸ್.ಕಡೆಮನಿ ಮಾತನಾಡಿದರು. ಜಯ-ವಿಜಯ ಮಹಿಳಾ ಸಂಘದ ಅಧ್ಯಕ್ಷೆ ಗಾಯಿತ್ರಿ ಕತ್ತಿ, ನಿರ್ದೇಶಕಿ ನಂದಿನಿ ಬಾಂಗಿ, ಶಿಕ್ಷಕ ಮಾದೇವ ಕಲಶೆಟ್ಟಿ, ಕಲಾವಿದೆ ಕರಿಷ್ಮಾ ಭಂಡೆಬುರುಜ ಇದ್ದರು. ಪ್ರಾಚಾರ್ಯ ಜೆ.ವಿ. ಹಂಪನ್ನವರ ಸ್ವಾಗತಿಸಿದರು. ಬಿ.ಜಿ.ಚೌಧರಿ ನಿರೂಪಿಸಿ, ವಂದಿಸಿದರು. ಇದೇ ಸಂದರ್ಭದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ರಂಗೋಲಿಯಲ್ಲಿ ಶಾಸಕ ಆನಂದ ನ್ಯಾಮಗೌಡ ಭಾವಚಿತ್ರ ರಚಿಸಿದರು. ಶಿರೋಳ ಗ್ರಾಮದ ಸರಕಾರಿ ಪ್ರೌಢ ಶಾಲಾ ಶಿಕ್ಷಕಿ ಉಮಾ ಕಾತರಕಿ ಸಹಿತ 50 ಶಾಲಾಮಕ್ಕಳು ಚಿತ್ರಕಲಾ ಪ್ರದರ್ಶನ ವೀಕ್ಷಿಸಿದರು.