Advertisement

ಕಲೆ-ಸಾಹಿತ್ಯಕ್ಕೆ ಪ್ರೋತ್ಸಾಹ ಅಗತ್ಯ: ನರಿಬೋಳ

11:00 AM Mar 02, 2022 | Team Udayavani |

ಜೇವರ್ಗಿ: ಪ್ರತಿಯೊಬ್ಬರಲ್ಲಿಯೂ ಒಂದೊಂದು ಪ್ರತಿಭೆ ಹಾಗೂ ಕಲೆ ಅಡಗಿರುತ್ತದೆ. ಅದನ್ನು ಹೊರತರುವ ಪ್ರಯತ್ನ ಆಗಬೇಕಿದೆ. ಕಲೆ ಇಲ್ಲದಿದ್ದರೇ ಮನುಷ್ಯ ಮೃಗವಾಗುತ್ತಾನೆ. ಇನ್ನೊಬ್ಬರ ಸಾಧನೆ ಕಂಡು ಅಸೂಹೆ ಪಡದೇ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದು ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ ಹೇಳಿದರು.

Advertisement

ತಾಲೂಕಿನ ಹರವಾಳ ಗ್ರಾಮದ ಶ್ರೀ ಗುರು ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶ್ರೀ ಶಿವಗುರು ಸಿದ್ಧೇಶ್ವರ ಸಾಂಸ್ಕೃತಿಕ ಕಲಾ ಸಂಘದ ವತಿಯಿಂದ ಸಾಹಿತಿ ಮಲ್ಲಣ್ಣಗೌಡ ಶಿವರಾಯಗೌಡ ನಾಗರವತ್‌ ಹರವಾಳ ರಚಿಸಿದ ಚಪಲ ಕಾದಂಬರಿ, ಸಂತಿ ಸರದಾರ ನಾಟಕ ಕೃತಿಗಳನ್ನು ಲೋಕಾರ್ಪಣೆಗೊಳಿಸಿ ಅವರು ಮಾತನಾಡಿದರು.

ವಿನಮೃತೆಗೆ ಬಹಳ ಬೆಲೆ ಇದ್ದು, ಪ್ರತಿ ಸಾಹಿತಿಯಲ್ಲೂ ವಿನಮೃತೆ ಅತ್ಯವಶ್ಯಕ. ಸಾಹಿತ್ಯ ಓದಿನಿಂದ ಮಾತ್ರ ಮನಸ್ಸನ್ನು ಸಂಸ್ಕಾರಗೊಳಿಸಲು ಸಾಧ್ಯ. ಕಂಪ್ಯೂಟರ್‌ ಯುಗದಲ್ಲೂ ಮಲ್ಲನಗೌಡ ನಾಗರವತ್‌ ಅವರ ಕಾದಂಬರಿ, ನಾಟಕ ಪುಸ್ತಕ ಬಿಡುಗಡೆ ಮಾಡಿರುವುದು ಶ್ಲಾಘನೀಯ. ಹೊಸ ಕಾಲದಲ್ಲಿ ಪುಸ್ತಕದ ಸ್ವರೂಪ ಮತ್ತು ಅಸ್ತಿತ್ವ ತುಂಬಾ ಬೇರೆಯಾಗಿದೆ. ಕ್ಷಣಾರ್ಧದಲ್ಲಿ ನೂರಾರು ಪುಟಗಳ ಪುಸ್ತಕಗಳನ್ನು ಅಂತರ್‌ ಜಾಲದಲ್ಲಿ ಮುಳಿಗಿಸಿ ಬಿಡುವ ಈ ದಿನಗಳಲ್ಲಿ ಪುಸ್ತಕಗಳು ಉಳಿಯಬೇಕು ಎಂದರು.

ಜೀವನದಲ್ಲಿ ಅನುಭವಿಸಿ ಗ್ರಂಥ ರಚಿಸಿರುವ ಮಲ್ಲನಗೌಡ ಕನ್ನಡ ಸಾರಸ್ವತ ಲೋಕಕ್ಕೆ ತಮ್ಮದೇಯಾದ ಕೊಡುಗೆ ನೀಡಿದ್ದಾರೆ. ಸಂಗೀತ, ಸಾಹಿತ್ಯ ಕಲಾ ಸಂಘಗಳಿಗೆ ರಾಜ್ಯ ಸರ್ಕಾರದ ವತಿಯಿಂದ ಅಗತ್ಯ ಅನುದಾನ ನೀಡಲಾಗುತ್ತಿದೆ. ಶ್ರೀ ಶಿವಗುರು ಸಿದ್ಧೇಶ್ವರ ಸಾಂಸ್ಕೃತಿಕ ಕಲಾ ಸಂಘಕ್ಕೆ ಸಹಾಯ, ಸಹಕಾರ ನೀಡುವ ಭರವಸೆ ನೀಡಿದರು.

ಸಾಹಿತಿ ಪ್ರೊ| ಶಿವರಾಜ ಪಾಟೀಲ ಮಾತನಾಡಿ, ಕ್ರಿಯಾಶೀಲತೆ ಮತ್ತು ಅಧ್ಯಯನ ಶೀಲತೆಯಿಂದ ಯಾವುದೇ ಕ್ಷೇತ್ರದಲ್ಲಿ ಪ್ರಾವಿಣ್ಯತೆ ಸಾಧಿ ಸಬಹುದು ಎಂದರು. ಲೇಖಕ ಮಲ್ಲಣ್ಣಗೌಡ ನಾಗರವತ್‌ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಅಧ್ಯಕ್ಷ ಲಕ್ಷ್ಮೀಕಾಂತ ನಾಗರಾವತ್‌ ನೇತೃತ್ವ, ಎಂ.ಬಿ.ಪಾಟೀಲ ಅಧ್ಯಕ್ಷತೆ ವಹಿಸಿದ್ದರು.

Advertisement

ರಾಜಶೇಖರ ಸೀರಿ, ಷಣ್ಮುಖಪ್ಪಗೌಡ ಹಿರೇಗೌಡ, ಶಿವಣಗೌಡ ಹಂಗರಗಿ, ಬಸವಕೇಂದ್ರ ಅಧ್ಯಕ್ಷ ಶರಣಬಸವ ಕಲ್ಲಾ, ಕಸಾಪ ಅಧ್ಯಕ್ಷ ಎಸ್‌. ಕೆ.ಬಿರಾದಾರ, ಹಣಮಂತ್ರಾಯ ಹೂಗಾರ, ಸಾಹಿತಿ ರವೀಂದ್ರ ಪಾಟೀಲ, ಪ್ರಭಾಕರ ರಬಶೆಟ್ಟಿ, ಗ್ರಾಪಂ ಅದ್ಯಕ್ಷ ಆಕಾಶ ಗಣಜಲಖೇಡ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಇದೇ ವೇಳೆ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಸಾಧಕರನ್ನು ಸತ್ಕರಿಸಲಾಯಿತು. ಸಂಜೆ ಮಲ್ಲಣ್ಣ ಶಿವರಾಯಗೌಡ ಹರವಾಳ ರಾಯಚೂರು ತಂಡದವರಿಂದ ಸುಗಮ ಸಂಗೀತ ಕಾರ್ಯಕ್ರಮ ಜರುಗಿತು. ಲಕ್ಷ್ಮೀಕಾಂತ ನಾಗರವತ್‌ ಸ್ವಾಗತಿಸಿದರು, ಸಿದ್ಧಣ್ಣ ಕೊತಲಿ ನಿರೂಪಿಸಿ, ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next