Advertisement

ಚಾಕ್‌ಪೀಸ್‌ನಲ್ಲೂ ಕಲೆ ಅರಳಿಸಿದ ಪ್ರದೀಪ್

09:09 PM Jun 29, 2021 | Team Udayavani |

ಹೊನ್ನಾವರ: ಚಾಕ್‌ಪೀಸ್‌ನಲ್ಲಿ ಕಲೆ ಅರಳಿಸಿದ ಸಾಧನೆಗೆ ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಹೊನ್ನಾವರದ ಪ್ರದೀಪ ನಾಯ್ಕ ಹೆಸರು ಸೇರ್ಪಡೆಯಾಗಿದೆ.

Advertisement

ಮೊದ ಮೊದಲು ಚಾಕ್‌ಪೀಸ್‌ ಮೇಲೆ ಇಂಗ್ಲಿಷ್‌ ಅಕ್ಷರ ಕೆತ್ತುವ ಅಭ್ಯಾಸ ಮಾಡಿದ ಪ್ರದೀಪ ಕೆಲ ದಿನಗಳ ನಂತರ ತನ್ನ ಗೆಳೆಯರ ಹೆಸರು ನಂತರ ಭಗತ್‌ ಸಿಂಗ್‌, ಬುದ್ಧ, ಗಾಂಧೀಜಿ ಮುಂತಾದವರ ಹೆಸರು ಕೆತ್ತಿ ಖುಷಿ ಪಟ್ಟಿದ್ದಾರೆ. ಆಮೇಲೆ ಹದಿನೇಳು ಚಾಕ್‌ಪೀಸ್‌ನಲ್ಲಿ ರಾಷ್ಟ್ರಗೀತೆಯನ್ನು ಕೇವಲ 18 ತಾಸುಗಳಲ್ಲಿ ಕಾಲ ಕೆತ್ತಿ ಅದನ್ನು ಇಂಡಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ ಮತ್ತು ಏಷಿಯಾ ಬುಕ್‌ ಆಫ್‌ ರೆಕಾರ್ಡ್ಸ್‌ಗೆ ಪ್ರದೀಪ ಕಳುಹಿಸಿದ್ದರು. ಅದನ್ನು ಪರಿಶೀಲಿಸಿ ಪ್ರದೀಪ್‌ ಅವರು ಹೆಸರನ್ನು ದಾಖಲಿಸಿದ್ದಾರೆ.

ಕಾಲೇಜಿನ ರಜಾ ಅವಧಿಯಲ್ಲಿ ಅದರಲ್ಲೂ ತೌಕ್ತೆ ಚಂಡಮಾರುತ ಸಮಯದಲ್ಲಿ ಆನ್‌ಲೈನ್‌ ಕ್ಲಾಸ್‌ ಇರಲ್ಲಿಲ್ಲ. ಇನ್ನೇನಾದರೂ ಮಾಡಬೇಕೆನ್ನುವ ಕುತೂಹಲವಿತ್ತು. ಹಾಗೆ ಇಂಡಿಯನ್‌ ಬುಕ್‌ ಆಫ್‌ ರೆಕಾರ್ಡ್ನ ಸಾಧಕರನ್ನು ನೋಡಿ ನಾನು ಏನಾದರೂ ಮಾಡಬೇಕೆಂದು ಯೋಚಿಸಿ ಚಾಕ್‌ಪೀಸ್‌ನಲ್ಲಿ ರಾಷ್ಟ್ರಗೀತೆ ಬರೆದಿದ್ದೇನೆ ಎಂದು ಖುಷಿಯಿಂದ ಹೇಳುತ್ತಾರೆ ಚಾಕ್‌ಪೀಸ್‌ ಆರ್ಟಿಸ್ಟ್‌ ಪ್ರದೀಪ್‌. ಇದರ ಜತೆಗೆ ತಬಲಾ, ಚಿತ್ರಕಲೆಯಲ್ಲೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.ಸಂಗೀತವನ್ನು ಬಾಲ್ಯದಿಂದಲೂ ರೂಢಿಸಿಕೊಂಡಿರುವ ಅವರು ಹೊನ್ನಾವರದ ಎಸ್‌ಡಿಎಂ ಕಾಲೇಜಿನಲ್ಲಿ ಸತತ ಮೂರು ವರ್ಷ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿ ಪಡೆದಿದ್ದಾರೆ. ತನ್ನ ಈ ಕಲೆಗೆ ತಂದೆ ಮಂಜುನಾಥ ನಾಯ್ಕ, ತಾಯಿ ಚಂದ್ರಕಲಾ ಮತ್ತು ಕುಟುಂಬದವರು, ನನ್ನ ಗುರುಗಳು ಮತ್ತು ಕಾಲೇಜಿನ ಪ್ರಾಚಾರ್ಯರು, ಗೆಳೆಯರ ಪ್ರೋತ್ಸಾಹ ಕಾರಣವೆಂದು ಹೆಮ್ಮೆಯಿಂದ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next