Advertisement

ಕಲೆಯನ್ನು ಗುರುತಿಸಿದಾಗ ಕಲಾವಿದ ರೂಪುಗೊಳ್ಳಲು ಸಾಧ್ಯ

02:56 PM Aug 02, 2019 | Team Udayavani |

ಬದಿಯಡ್ಕ : ಕಲೆ ಸರ್ವವ್ಯಾಪಿಯಾಗಿದೆ. ಅದನ್ನು ಗುರುತಿಸಿ ಪ್ರೋತ್ಸಾಹಿಸಿದಾಗ ಮಾತ್ರ ಒಬ್ಬ ಕಲಾವಿದ ರೂಪುಗೊಳ್ಳಲು ಸಾಧ್ಯ. ಹೆತ್ತವರ ಪ್ರೋತ್ಸಾಹ ಮತ್ತು ಗುರುಗಳ ಸೂಕ್ತ ಮಾರ್ಗದರ್ಶನ ಪ್ರತಿಯೊಂದು ಮಕ್ಕಳಲ್ಲಿರುವ ಪ್ರತಿಭೆಯನ್ನು ಹೊರತರುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ ಎಂದು ಬಹುಮುಖ ಪ್ರತಿಭೆ, ಡ್ರಾಮಾ ಜ್ಯೂನಿಯರ್ ಖ್ಯಾತಿಯ ಅನೂಪ್ ರಮಣ್ ಶರ್ಮ ಹೇಳಿದರು.

Advertisement

ಅವರು ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಆಶ್ರಯದಲ್ಲಿ ಪಣಿಯೆ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಚಿಣ್ಣರ ಕಲರವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ‌

ನೂರಾರು ಅವಕಾಶಗಳ ನೀಡಿ ಪ್ರತಿಯೊಂದು ಮಕ್ಕಳ ಒಳಗಿರುವ ಪ್ರತಿಭಾ ಕಾರಂಜಿಯನ್ನು ಹೊರ ಹೊಮ್ಮಿಸುವ ಶಾಲೆಗಳು ನಮ್ಮ ಸೌಭಾಗ್ಯ. ಹಾಗೆಯೇ ಅಂತ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಕಾರ್ಯ ಸದಾ ನಡೆಯುತಿರಲಿ, ಚಿಣ್ಣರಿಂದ ಚಿಣ್ಣರಿಗಾಗಿ ನಡೆಯುವ ಚಿಣ್ಣರ ಕಲರವ ನನ್ನಂತ ಪ್ರತಿಭೆಗಳಿಗೆ ನೀಡುವ ಅವಕಾಶ ಮುಂದುವರಿಯಲಿ ಎಂದು ಅವರು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಅಕಾಡೆಮಿ ಉಪಾಧ್ಯಕ್ಷ ಪ್ರೋ.ಶ್ರೀನಾಥ್ ಮಾತನಾಡಿ ಕಲಾ ಮಾತೆಯ ಅನುಗ್ರಹ ಪಡೆಯಲು ಸತತ ಪರಿಶ್ರಮದ ಅಗತ್ಯವಿದೆ. ಚೆನ್ನಾಗಿ ಕಲಿತರೆ ಹೆಚ್ಚು ಅಂಕ ಗಳಿಸುವಂತೆ ಹೆಚ್ಚು ಸಮಯವನ್ನು ಕಲೆಯನ್ನು ಕರಗತ ಮಾಡಲು ಬಳಸಿದವರು ಮುಂದೆ ದೊಡ್ಡ ಕಲಾವಿದರಾಗುತ್ತಾರೆ. ತಾಳ್ಮೆ. ಕ್ಷಮೆ ಹಾಗೂ ಸತತ ಪ್ರಯತ್ನದಲ್ಲಿ ಯಶಸ್ಸಿನ ಗುಟ್ಟು ಅಡಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಉಪಾಧ್ಯಕ್ಷ ಈಶ್ವರ ನಾಯಕ್ ಪೆರುಮುಂಡ, ಜಾನಪದ ಪರಿಷತ್ತು ಸದಸ್ಯೆ ಪುಷ್ಪಾವತಿ ನೆಟ್ಟಣಿಗೆ, ಜತೆ ಕಾರ್ಯದರ್ಶಿ ವಿದ್ಯಾಗಣೇಶ್, ಅಕಾಡೆಮಿ ಸದಸ್ಯೆ ರೇಶ್ಮಾ, ಶಾಲಾ ಶಿಕ್ಷಕ ಪುಷ್ಪರಾಜ್ ಮಾಸ್ಟರ್, ಶಿಕ್ಷಕಿಯರಾದ ಉಷಾಕುಮಾರಿ, ಪ್ರವೀಣ ಉಪಸ್ಥಿತರಿದ್ದರು.

Advertisement

ಶಾಲಾ ಮುಖ್ಯೋಪಾಧ್ಯಾಯಿನಿ ಜ್ಯೋತಿ ಸ್ವಾಗಿತಿಸಿ ರೇಶ್ಮಾ ಸುನಿಲ್ ವಂದಿಸಿದರು. ಶಾಲಾ ವಿದ್ಯಾರ್ಥಿಗಳು ಪ್ರಾರ್ಥನೆ ಹಾಡಿದರು.ಈ ಸಂದರ್ಭದಲ್ಲಿ ಕಲ್ಪವೃಕ್ಷದ ಗಿಡವನ್ನು ಶಾಲಾ ಪರಿಸರದಲ್ಲಿ ನೆಟ್ಟು ಗಿಡಮರಗಳ ಸಂರಕ್ಷಣೆ ಮತ್ತು ಕೃಷಿಯ ಬಗ್ಗೆ ಮಾಹಿತಿ ನೀಡಲಾಯಿತು.
ಅಕಾಡೆಮಿ ಸದಸ್ಯೆ ಸಂಧ್ಯಾಗೀತಾ ಬಾಯಾರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದರು.

ಮುಗ್ಧ ಮಕ್ಕಳ ಅರಳುವ ಮನಸುಗಳಲ್ಲಿ ಕನ್ನಡದ ಕಂಪು ತುಂಬಿ ಭಾಷಾಪ್ರೇಮವನ್ನು ಜಾಗೃತಗೊಳಿಸುವ ಹಾಗೆಯೇ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಸಹಾಯಕವಾಗುವ ಕ್ರಿಯಾಶೀಲ ಕಾರ್ಯಕ್ರಮವನ್ನು ನೀಡುವ ಅಕಾಡೆಮಿಯ ಪ್ರಯತ್ನ ಇತರರಿಗೂ ಮಾದರಿ
ಜ್ಯೋತಿ. ಕೆ, ಮುಖ್ಯೋಪಾಧ್ಯಾಯಿನಿ, ಕಿರಿಯ ಪ್ರಾಥಮಿಕ ಶಾಲೆ ಪಣಿಯೆ

Advertisement

Udayavani is now on Telegram. Click here to join our channel and stay updated with the latest news.

Next