Advertisement
ಪ್ರಕರಣದ ವಿವರ: ನಗರದ ಕೆ.ಹೊಸಕೊಪ್ಪಲು ಬಡಾವಣೆಯ ನಿವಾಸಿ ಶಾಂತೇಗೌಡ ಎಂಬವರ ಪುತ್ರ ಎಂ.ಎಸ್. ಚಂದನ್ ಎಂಬಾತ ನಗರದ ಕೈಗಾರಿಕಾಭಿವೃದ್ಧಿ ಕೇಂದ್ರದಲ್ಲಿರುವ ಪೂಜಾ ಫಿಡ್ಸ್ ಎಂಬ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಆತ ಚಿಕ್ಕಕಣಗಾಲ್ ಮತ್ತು ಜನಿವಾರ ಗ್ರಾಮಗಳ ಕೋಳಿ ಫಾರಂಗಳಿಗೆ ಪೂಜಾ ಫಿಡ್ಸ್‌ನಿಂದ ಸರಬರಾಜು ಕೋಳಿಗಳು ಮತ್ತು ಫಿಡ್ಸ್‌ನಿಂದ ವಸೂಲಾದ 9.5ಲಕ್ಷ ರೂ. ನಗದನ್ನು ಕಂಪನಿಗೆ ಪಾವತಿಸ ಬೇಕಾಗಿತ್ತು. ಆದರೆ ನ.25 ರಂದು ಭಾನುವಾರ ವಾಗಿದ್ದರಿಂದ ಕಂಪನಿಗೆ ಪಾವತಿಸದೆ ಚಂದನ್ ಮನೆಯಲ್ಲಿಟ್ಟುಕೊಂಡಿದ್ದ. ನ.26 ರ ಸೋಮವಾರ ಸುಮಾರು 11 ಗಂಟೆ ಸಮಯದಲ್ಲಿ ಕಂಪನಿಗೆ ಪಾವತಿಸಲೆಂದು 9.5 ಲಕ್ಷ ರೂ.ಗಳೊಂದಿಗೆ ತನ್ನ ಬೈಕಿನಲ್ಲಿ ಹಾಸನ ಬೈಪಾಸ್ ರಸ್ತೆಯ ರೈಲ್ವೆ ಟ್ರ್ಯಾಕ್‌ನ ಬಳಿ ಹೋಗುತ್ತಿದ್ದಾಗ ಹಿಂಬಾಲಿಸಿಕೊಂಡು ಬೈಕ್ ನಲ್ಲಿ ಬಂದ ಇಬ್ಬರು ಬೈಕ್‌ನ್ನು ಅಡ್ಡಗಟ್ಟಿ ಚಾಕುವಿನಿಂದ ಹಲ್ಲೆ ನಡೆಸಿ ಬ್ಯಾಗ್‌ನಲ್ಲಿದ್ದ 9.5 ಲಕ್ಷ ರೂ.,ಗಳನ್ನು ಅಪಹರಿಸಿದ್ದರು. ದರೋಡೆ ಕೋರರಿಂದ ಹಲ್ಲೆಗೊಳಗಾಗಿ ಸ್ಥಳದಲ್ಲಿಯೇ ಬಿದ್ದಿದ್ದ ಚಂದನ್‌ನನ್ನು ಕಂಡ ರಸ್ತೆಯಲ್ಲಿ ಸಂಚರಿಸಿದವರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಸಾಲ ಮಾಡಿದ್ದರಿಂದ ಸಾಲ ತೀರಿಸಲು ಕಂಪನಿಗೆ ಕಟ್ಟಬೇಕಾಗಿದ್ದ ಹಣವನ್ನು ಲಪಟಾಯಿಸಲು ತನ್ನ ಸೇಹಿತರಾದ ಲೋಕಿ ಉರುಫ್ ಕೆಂಚ ಹಾಗೂ ನವೀನ ಎಂಬವರನ್ನು ಬಳಸಿಕೊಂಡು ಅವರು ದರೋಡೆ ಮಾಡುವಂತೆ ನಾಟಕ ಮಾಡಿದ್ದೆ. ಲೋಕಿ ಮತ್ತು ನವೀನ 2 ಲಕ್ಷ ರೂ. ತೆಗೆದುಕೊಂಡು ಹೋಗಿದ್ದು, 50 ಸಾವಿರ ರೂ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಖರ್ಚಾಗಿದೆ. ಇನ್ನುಳಿದ 7 ಲಕ್ಷ ರೂ. ಹಣ ಮನೆಯಲ್ಲಿ ಬಚ್ಚಿಟ್ಟಿರುವುದಾಗಿ ವಿಚಾರಣೆ
ವೇಳೆ ಚಂದನ್ ಒಪ್ಪಿಕೊಂಡ. ಆನಂತರ ಆತನಿಂದ 7 ಲಕ್ಷ ರೂ. ನಗದು ಹಾಗು ಬೈಕ್‌ನ್ನು ವಶಪಡಿಸಿಕೊಳ್ಳಲಾಗಿದೆ. ಚಂದನ್‌ಗೆ ಸಹಕರಿಸಿದ್ದ ಲೋಕಿ ಮತ್ತು ನವೀನ 2 ಲಕ್ಷ ರೂ. ನೊಂದಿಗೆ ತಲೆಮರೆಸಿಕೊಂಡಿದ್ದಾರೆ ಎಂದು ವಿವರಿಸಿದರು. ಅಪರಾಧ ಹಿನ್ನೆಲೆ: ಚಂದನ್‌ಗೆ ಸಹಕರಿಸಿದ್ದ ಲೋಕಿ ಮತ್ತು ನವೀನ ಅಪರಾಧ ಹಿನ್ನೆಲೆಯುಳ್ಳವರಾಗಿದ್ದು, ರೌಡಿಶೀಟರ್‌ಗಳು. ಲೋಕಿಯು ಒಂದು ಅತ್ಯಾಚಾರ, ಒಂದು ಕೊಲೆ, 3 ಸುಲಿಗೆ, 7 ಹೊಡೆದಾಟದ ಪ್ರಕರಣಗಳಲ್ಲಿ ಭಾಗಿಯಾಗಿದ್ದು, 7 ವರ್ಷ 10 ತಿಂಗಳು ಜೈಲು ಶಿಕ್ಷೆ ಅನುಭವಿಸಿ ಇತ್ತೀಚೆಗಷ್ಟೇ ಜೈಲಿ ನಿಂದ ಹೊರ ಬಂದಿದ್ದ. ನವೀನನೂ ಒಂದು ಕೊಲೆ, ಓಂದು ಸುಲಿಗೆ, 2 ಕೊಲೆ ಯತ್ನ ಮತ್ತು ಒಂದು ಹೊಡೆದಾಟದ ಪ್ರಕರಣದಲ್ಲಿ ಭಾಗಿಯಾಗಿದ್ದಾನೆ. ಇವರಿಬ್ಬರ ಪತ್ತೆಗೆ ಬಲೆ ಬೀಸಲಾಗಿದೆ ಎಂದರು.
Related Articles
ಮಾಡಲಾಗಿದೆ ಎಂ ದರು. ಎಎಸ್ಪಿ ಬಿ.ಎನ್.ನಂದಿನಿ, ಇನ್‌ಸ್ಪೆಕ್ಟರ್ ಸತ್ಯನಾರಾಯಣ ಉಪಸ್ಥಿತರಿದ್ದರು.
Advertisement