Advertisement

ವನ್ಯಜೀವಿ ಬೇಟೆಯಾಡಿ ಟಿಕ್‌ಟಾಕ್‌ ಮಾಡಿದವರ ಸೆರೆ

06:09 AM May 22, 2020 | Suhan S |

ರಾಯಚೂರು: ವನ್ಯಜೀವಿಗಳನ್ನು ಬೇಟೆಯಾಡಿ ಅವುಗಳ ಜತೆ ನೃತ್ಯ ಮಾಡಿದ ವಿಡಿಯೋವನ್ನು ಟಿಕ್‌ ಟಾಕ್‌ಗೆ ಅಪ್ಲೋಡ್‌ ಮಾಡಿದ ಇಬ್ಬರು ಯುವಕರು ಜೈಲು ಪಾಲಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.

Advertisement

ತಾಲೂಕಿನ ಚಂದ್ರಬಂಡ ಹೋಬಳಿಯ ಸರ್ಜಾಪುರದ ಪವನ್‌ ನಾಯಕ್‌, ಸ್ವಾಮಿ ಬಂಧಿತ ಆರೋಪಿಗಳು. ಮೊಲಗಳನ್ನು ಬೇಟೆಯಾಡಿ ಅವುಗಳ ಚರ್ಮ ಸುಲಿದು ಕೈಯಲ್ಲಿ ಹಿಡಿದು ಡಾನ್ಸ್‌ ಮಾಡುವ ವಿಡಿಯೋಗಳನ್ನು ಟಿಕ್‌ ಟಾಕ್‌ನಲ್ಲಿ ಅಪ್ಲೋಡ್‌ ಮಾಡಿದ್ದರು. ಸಾಕು ನಾಯಿಗಳೊಂದಿಗೆ ತೆರಳಿ ಮಂಗಳವಾರ ಬೇಟೆಯಾಡಿದ್ದರು. ಈ ಸಂಗತಿ ಅರಣ್ಯ ಇಲಾಖೆ ಅ ಧಿಕಾರಿಗಳ ಗಮನಕ್ಕೆ ಬಂದಿದ್ದು, ವನ್ಯಜೀವಿಗಳ ಸಂರಕ್ಷಣಾ ಕಾಯ್ದೆ ಕಾನೂನು ಉಲ್ಲಂಘಿಸಿದ ಆರೋಪದಡಿ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ.

ಬುಧವಾರ ಆರೋಪಿತರನ್ನು ವಶಕ್ಕೆ ಪಡೆದು ವಿಚಾರಿಸಿದಾಗ ತಪ್ಪೊಪ್ಪಿಕೊಂಡಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಧೀಶರು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ. ರಾಯಚೂರು ಪ್ರಾದೇಶಿಕ ಅರಣ್ಯ ವಲಯದ ಅಧಿಕಾರಿ ಎಂ.ಪಿ ಮಹಾಬಲೇಶ್ವರ್‌ ನೇತೃತ್ವದಲ್ಲಿರಾಘವೇಂದ್ರ, ಸಹಾಯಕ ಆರಣ್ಯ ಸಂರಕ್ಷಣಾಧಿಕಾರಿ ಎಂ.ಪಿ. ಬೋರಳೆ, ಉಪವಲಯ ಅರಣ್ಯ ಅಧಿಕಾರಿ ನೀಲಕಂಠ, ಸಾಲಾರ್‌ ಹುಸೇನ್‌, ಅರಣ್ಯ ರಕ್ಷಕರಾದ ಯಲ್ಲಪ್ಪ ಎಂ, ವಾಹನ ಚಾಲಕ ಅಬ್ದುಲ್‌ ಬಾಷಾ ಒಳಗೊಂಡ ತಂಡ ಪ್ರಕರಣ ಭೇದಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next